AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

ರಾಜೇಶ್ ದುಗ್ಗುಮನೆ
|

Updated on: Feb 06, 2026 | 8:39 AM

Share

ವುಮನ್ ಪ್ರೀಮಿಯರ್ ಲೀಗ್ ಆರು ಬಾಲ್​​ಗೆ 10 ರನ್​​ಗಳ ಅವಶ್ಯಕತೆ ಇತ್ತು. ಇದನ್ನು ಇನ್ನೂ ಎರಡು ಬಾಲ್ ಇರುವಾಗಲೇ ಚೇಸ್ ಮಾಡಿದರು. ರಾಧಾ ಅವರ ಅಬ್ಬರದ ಆಟಕ್ಕೆ ಆರ್​​ಸಿಬಿ ಕಪ್ ಗೆಲ್ಲುವಂತೆ ಆಯಿತು. ಫೈನಲ್ ಓವರ್ ಯಾವ ರೀತಿಯಲ್ಲಿ ಇತ್ತು ಎಂಬುದರ ಝಲಕ್ ಇಲ್ಲಿದೆ ನೋಡಿ.

ವುಮನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಫೆಬ್ರವರಿ 5ರಂದು ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಆರ್​​ಸಿಬಿಗೆ ಡೆಲ್ಲಿ ತಂಡ 204 ರನ್​​ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್​​ನ ಆರ್​​ಸಿಬಿ ಬೆನ್ನು ಹತ್ತಿತ್ತು. ಅಂತಿಮ ಓವರ್ ಸಮೀಪಿಸುವಾಗ ಆರ್​​ಸಿಬಿ 194 ರನ್​​​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆರು ಬಾಲ್​​ಗೆ ಬೇಕಿದ್ದಿದ್ದು 10 ರನ್​​ಗಳು.

ಕ್ರೀಜ್​ ಅಲ್ಲಿ ಇದ್ದ ರಾಧಾ ಯಾದವ್ ಮೊದಲ ಬಾಲ್​​ ಅಲ್ಲಿ ಸಿಂಗಲ್ ಕಲೆ ಹಾಕಿದರು. ಡಿ ಕ್ಲಾರ್ಕ್ ಕೂಡ ಒಂದು ರನ್ ತೆಗೆದು ರಾಧಾಗೆ ಸ್ಟ್ರೈಕ್ ನೀಡಿದರು. ಮೂರು ಹಾಗೂ ನಾಲ್ಕನೇ ಬಾಲ್​​ಗೆ ಫೋರ್ ಹೊಡೆದು ರಾಧಾ ಅವರು ಪಂದ್ಯವನ್ನು ಗೆಲುವಿನ ದಡ ತಲುಪಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More