ಯತ್ನಾಳ್ ಹಿಂದೂ ನಾಯಕನಾಗಿದ್ದರೆ ಟೋಪಿ ಧರಿಸಿ, ಕಬಾಬ್ ತಿನ್ನುತ್ತ ಇಫ್ತಿಯಾರ್ ಕೂಟ ಏರ್ಪಡಿಸುತ್ತಿರಲಿಲ್ಲ: ರೇಣುಕಾಚಾರ್ಯ

Updated on: May 05, 2025 | 6:19 PM

ಹಿಂದೂಗಳಿಗೆ ರಕ್ಷಣೆ ಇಲ್ಲ ಅಂತ ಯತ್ನಾಳ್ ಹೇಗೆ ಹೇಳುತ್ತಾರೆ? ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೇ? ಹಿಂದೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಿಂದೂಗಳಿಗೆ ಜೀವಭಯವಿತ್ತೇ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು. ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದಾಗಿನಿಂದ ರೇಣುಕಾಚಾರ್ಯರು ಯತ್ನಾಳ್ ವಿರುದ್ಧ ಸಮರ ಸಾರಿದ್ದಾರೆ.

ಬೀದರ್, ಮೇ 5: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಬ್ಬ ಸ್ವಘೋಷಿತ ಹಿಂದೂ ನಾಯಕ, ಅಸಲಿಗೆ ಅವರೊಬ್ಬ ನಕಲಿ ಹಿಂದೂ ನಾಯಕ, ಹಿಂದೂತ್ವ ನಾಯಕ ಅವರಾಗಿದ್ದರೆ ಕಬಾಬ್, ಚಿಕನ್ ತಿನ್ನುವ ಗೋಜಿಗೆ ಹೋಗುತ್ತಿರಲಿಲ್ಲ, ತಲೆಗೆ ಟೋಪಿ ಧರಿಸಿ ಇಫ್ತಿಯಾರ್ ಕೂಟಗಳನ್ನು ಆಯೋಜಿಸುತ್ತಿರಲಿಲ್ಲ ಎಂದು ಮಾಜಿ ಮಂತ್ರಿ ಎಂಪಿ ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಅವರು, ಅಸಲಿಗೆ ಯತ್ನಾಳ್ ಏನು ಮಾತಾಡುತ್ತಾರೆ ಅಂತ ಖುದ್ದು ಅವರಿಗೆ ಗೊತ್ತಿರಲ್ಲ, ಅವರ ನಾಲಗೆ ಮತ್ತು ಮೆದುಳಿನ ನಡುವೆ ಸಂಬಂಧವಿರದ ಹಾಗೆ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ:    ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಏಜೆಂಟ್​​ನಂತೆ ವರ್ತಿಸಿದ್ದಾರೆ: ರೇಣುಕಾಚಾರ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ