Assembly polls: ಯಶವಂತಪುರದ ಚಹಾ ಮಾರುವ ಯುವಕ ತಾನು ಕೂಡಿಟ್ಟ ರೂ. 50,000 ಗಳನ್ನು ಜೆಡಿಎಸ್ ಅಭ್ಯರ್ಥಿಯ ಚುನಾವಣಾ ಖರ್ಚಿಗೆ ನೀಡಿದ!
ಕುಮಾರಸ್ವಾಮಿಯವರು ಹಣದ ಚೀಲವನ್ನು ಜನರ ಸಮ್ಮುಖದಲ್ಲಿ ಜವರಾಯಿಗೌಡರಿಗೆ ನೀಡುವ ಮೊದಲು ಬಸವರಾಜುಗೆ ಪಕ್ಷ, ಜವರಾಯಿಗೌಡ ಮತ್ತು ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಾ, ಇಂಥ ಜನರಿಂದಲೇ ಜೆಡಿಎಸ್ ಪಕ್ಷ ಉಳಿದಿದೆ ಎಂದರು.
ಬೆಂಗಳೂರು: ಇದಪ್ಪ ಪಕ್ಷದ ಬಗ್ಗೆ ಅಭಿಮಾನ ಇಟ್ಟುಕೊಳ್ಳೋದು ಅಂದ್ರೆ! ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಮಾತುಗಳನ್ನು ಕೇಳಿಸಿಕೊಂಡರೆ ವಿಷಯವೇನು ಅಂತ ನಿಮಗೆ ಗೊತ್ತಾಗುತ್ತದೆ. ಯಶವಂತಪುರದ ವಿಧಾನ ಸಭಾ ಕ್ಷೇತ್ರದ ತಿಪ್ಪೇನಹಳ್ಳಿ ಗ್ರಾಮದಲ್ಲಿ ಚಹಾ ಅಂಗಡಿ ನಡೆಸುವ ಬಸವರಾಜು (Basavaraju) ಹೆಸರಿನ ಯುವಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವಾರಾಯಿಗೌಡರ (Javarayigowda) ಚುನಾವಣಾ ಖರ್ಚಿಗೆ ತಾನು ಕೂಡಿಟ್ಟಿದ್ದ 50,000 ರೂ. ಗಳನ್ನು ನೀಡಿದ್ದಾರೆ. ಕುಮಾರಸ್ವಾಮಿಯವರು ಹಣದ ಚೀಲವನ್ನು ಜನರ ಸಮ್ಮುಖದಲ್ಲಿ ಜವರಾಯಿಗೌಡರಿಗೆ ನೀಡುವ ಮೊದಲು ಬಸವರಾಜುಗೆ ಪಕ್ಷ, ಜವರಾಯಿಗೌಡ ಮತ್ತು ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಾ, ಇಂಥ ಜನರಿಂದಲೇ ಜೆಡಿಎಸ್ ಪಕ್ಷ ಉಳಿದಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos