Yogi Dwarakish: ‘ಚಿತ್ರರಂಗದ ವಿವಾದ ಬೀದಿಗೆ, ಕೋರ್ಟ್ಗೆ ಹೋಗಬಾರದು’: ದ್ವಾರಕೀಶ್ ಪುತ್ರ ಯೋಗಿ ಹೇಳಿಕೆ
Kichcha Sudeep: ಚಿತ್ರರಂಗದಲ್ಲಿನ ವಿವಾದಗಳು ಕೋರ್ಟ್ ಮೆಟ್ಟಿಲು ಏರಬಾರದು ಎಂದು ದ್ವಾರಕೀಶ್ ಅವರ ಪುತ್ರ ಯೋಗಿ ಹೇಳಿದ್ದಾರೆ. ಸುದೀಪ್ ವರ್ಸಸ್ ಎಂ.ಎನ್. ಕುಮಾರ್ ನಡುವಿನ ಮನಸ್ತಾಪದ ಬಗ್ಗೆ ಅವರು ಮಾತನಾಡಿದ್ದಾರೆ.
ನಿರ್ಮಾಪಕ ಎಂ.ಎನ್. ಕುಮಾರ್ (MN Kumar) ಮತ್ತು ನಟ ಕಿಚ್ಚ ಸುದೀಪ್ ಅವರ ನಡುವಿನ ಹಣಕಾಸು ವ್ಯವಹಾರವು ವಿವಾದದ ಸ್ವರೂಪ ಪಡೆದುಕೊಂಡಿದೆ. ಕೋರ್ಟ್ ಮೂಲಕ ನ್ಯಾಯ ಪಡೆಯಲು ಕಿಚ್ಚ ಸುದೀಪ್ (Kichcha Sudeep) ನಿರ್ಧರಿಸಿದ್ದಾರೆ. ಆದರೆ ಚಿತ್ರರಂಗದಲ್ಲಿನ ವಿವಾದಗಳು ಕೋರ್ಟ್ ಮೆಟ್ಟಿಲು ಏರಬಾರದು ಎಂದು ದ್ವಾರಕೀಶ್ ಅವರ ಪುತ್ರ ಯೋಗಿ ಹೇಳಿದ್ದಾರೆ. ‘ಎಲ್ಲರೂ ನನಗೆ ಸ್ನೇಹಿತರು. ಚಿತ್ರರಂಗ ಒಂದು ಕುಟುಂಬ. ಆ ಕುಟುಂಬದ ವಿವಾದ ನಾಲ್ಕು ಗೋಡೆ ನಡುವೆ ಬಗೆಹರಿಯಬೇಕು. ಇಲ್ಲಿನ ಮನಸ್ತಾಪಗಳನ್ನು ಕೋರ್ಟ್ಗೆ, ಬೀದಿಗೆ ತೆಗೆದುಕೊಂಡು ಹೋಗುವುದು ತಪ್ಪು’ ಎಂದು ಯೋಗಿ ದ್ವಾರಕೀಶ್ (Yogi Dwarakish) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos