ಹುಬ್ಬಳ್ಳಿ: ಪೊಲೀಸ್ ಅಧಿಕಾರಿ ಎದುರಲ್ಲೇ ಯುವಕರ ಹೊಡೆದಾಟ; ವಿಡಿಯೋ ವೈರಲ್
ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿ ಎದುರಲ್ಲೇ ಯುವಕರು ಹೊಡೆದಾಡಿಕೊಂಡಿರವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಫರ್ಜಾನ್ ಹೊಟೆಲ್ ಮುಂಭಾಗದಲ್ಲಿ ನಡೆದಿದೆ. ಯುವಕರು ಹೊಡದಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ, ಡಿಸೆಂಬರ್ 31: ನಡುರಸ್ತೆಯಲ್ಲಿ ಪೊಲೀಸ್ (Police) ಅಧಿಕಾರಿ ಎದುರಲ್ಲೇ ಯುವಕರು ಹೊಡೆದಾಡಿಕೊಂಡಿರವ ಘಟನೆ ಕಾರವಾರ ರಸ್ತೆಯಲ್ಲಿರುವ (Hubballi Karwar Road) ಫರ್ಜಾನ್ ಹೊಟೆಲ್ ಮುಂಭಾಗದಲ್ಲಿ ನಡೆದಿದೆ. ಯುವಕರು ಹೊಡದಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಊಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಓರ್ವ ಯುವಕನಿಗೆ ಹೊಡೆದು, ಒದ್ದು ಹಲ್ಲೆ ಮಾಡಲಾಗಿದೆ. ಮತ್ತೊರ್ವ ಯುವಕನ ಮೇಲೆ ನಾಲ್ಕೈದು ಜನರು ಹಲ್ಲೆ ಮಾಡಿದ್ದಾರೆ. ಹೀಗೆ ಹಲ್ಲೆ ಮಾಡುವಾಗ ಪೊಲೀಸ್ ಅಧಿಕಾರಿ ಬಂದಿದ್ದಾರೆ. ಆದರೂ ಕೂಡ ಡೋಂಟ್ ಕೇರ್ ಎಂದು ಪೊಲೀಸರ ಮುಂದೆಯೇ ಯುವಕರು ಹೊಡೆದಾಡಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Latest Videos