ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಯುವಕ! ವಿಡಿಯೋ ಇಲ್ಲಿದೆ
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಕಪ್ಪಡಿ ದೇಗುಲದ ಬಳಿ ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ಮಂಜು ಎಂಬುವರನ್ನು ಮಧು ಎಂಬ ಯುವಕ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಈಜು ಬಾರದೆ ಕೊಚ್ಚಿ ಹೋಗುತ್ತಿದ್ದ ಮಂಜುರನ್ನು ಮಧು ಉಳಿಸಿದ್ದು, ಈ ಸಾಹಸಮಯ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮೈಸೂರು, ಫೆಬ್ರವರಿ 11: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರನ್ನು ಯುವಕನೊಬ್ಬ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಕಪ್ಪಡಿ ದೇಗುಲದ ಬಳಿ ಘಟನೆ ನಡೆದಿದೆ. ಮಂಜು ಎಂಬಾತ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈಜು ಬಾರದೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಆತ ಮುಳುಗುತ್ತಿದ್ದುದನ್ನು ಕಂಡ ಮಧು ತಕ್ಷಣವೇ ಪ್ರಾಣವನ್ನೇ ಪಣಕ್ಕಿಟ್ಟು ನದಿಗೆ ಧುಮುಕಿ ಮಂಜುವನ್ನು ರಕ್ಷಿಸಿದ್ದಾರೆ. ಯುವಕ ಮಧು ಸಾಹಸಮಯ ಕಾರ್ಯಕ್ಕೆ ಕಪ್ಪಡಿ ಗ್ರಾಮಸ್ಥರು ಮತ್ತು ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ. ಮಧು ಧೈರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
Loading...
Unable to load recommendations.
Follow Us
