‘ಅಪ್ಪು’ ರೀತಿ ಡ್ಯಾನ್ಸ್ ಮಾಡಿದ ಯುವರಾಜ್ ಕುಮಾರ್, ವಿಡಿಯೋ ನೋಡಿ
Yuva Rajkumar: ದೊಡ್ಮನೆ ಕುಡಿ ಯುವರಾಜ್ ಕುಮಾರ್ ನಟನೆಯ ‘ಯುವ’ ಸಿನಿಮಾ ಹಾಡು ಬಿಡುಗಡೆ ಚಾಮರಾಜನಗರದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಯುವ.
ದೊಡ್ಮನೆ ಕುಡಿ, ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆ ಆಗಲಿದೆ. ಚಿತ್ರತಂಡ ಪ್ರಚಾರ ಆರಂಭಿಸಿದ್ದು, ನಿನ್ನೆ (ಮಾರ್ಚ್ 02) ರಂದು ‘ಯುವ’ ಸಿನಿಮಾದ ಮೊದಲ ಹಾಡು ಚಾಮರಾಜನಗರದಲ್ಲಿ ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಸಖತ್ ಆಗಿ ಸ್ಟೆಪ್ಸ್ ಸಹ ಹಾಕಿದ್ದಾರೆ. ಅಪ್ಪು ಹಾಡಿಗೆ ಯುವ ರಾಜ್ಕುಮಾರ್ ಡ್ಯಾನ್ಸ್ ಮಾಡಿದ್ದು ವಿಶೇಷ. ‘ಯುವ’ ಸಿನಿಮಾವನ್ನು ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಯುವ ಎದುರು ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ