ವಕ್ಫ್ ಜಮೀನನ್ನು ವಾಪಸ್ಸು ಪಡೆಯುವ ಬಗ್ಗೆ ಬೊಮ್ಮಾಯಿ ಮಾತಾಡಿದ ವಿಡಿಯೋ ತೋರಿಸಿದ ಜಮೀರ್
ರೈತರಿಗೆ ಯಾವ ಕಾರಣಕ್ಕೂ ನೋಟೀಸ್ ನೀಡಲ್ಲ, ಆದರೆ ವಕ್ಫ್ ಜಮೀನನ್ನು ಎನ್ಕ್ರೋಚ್ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ನೋಟೀಸ್ ನೀಡಿ ಜಮೀನು ವಾಪಸ್ಸು ಪಡೆಯಲಾಗುವುದು ಎಂದು ಹೇಳಿದ ಸಚಿವ ಜಮೀರ್, ಅತಿಕ್ರಮಣಕಾರರಲ್ಲಿ ಶೇಕಡ 90ರಷ್ಟು ಜನ ಮುಸಲ್ಮಾನರಾಗಿದ್ದಾರೆ ಎಂದರು.
ವಿಜಯಪುರ: ಕೇವಲ ವಕ್ಫ್ ಬೋರ್ಡ್ಗೆ ಸೇರಿದ ಜಮೀನು ಮಾತ್ರ ಅತಿಕ್ರಮಣವಾಗಿಲ್ಲ, ಮುಜರಾಯಿ ಇಲಾಖೆಗೆ ಸೇರಿದ 36,000 ಎಕರೆ ಭೂಮಿಯಲ್ಲಿ ಸುಮಾರು 800 ಎಕರೆಯಷ್ಟು ಅತಿಕ್ರಮಣವಾಗಿದೆ ಎಂದು ವಕ್ಫ್ ಮತ್ತು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು. ಇಂದು ಬೆಳಗ್ಗೆ ಎಂಪಿ ರೇಣುಕಾಚಾರ್ಯ ಅವರು, ರೈತರಿಗೆ ನೋಟೀಸ್ಗಳನ್ನು ನೀಡಿದ್ದು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಎಂದು ಜಮೀರ್ ಅಹ್ಮದ್ ಹೇಳಿದ ವಿಡಿಯೋವನ್ನು ತೋರಿಸಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅವರು ವಕ್ಫ್ ಗೆ ಸೇರಿದ ಪ್ರತಿ ಇಂಚು ಜಮೀನು ವಾಪಸ್ಸು ಪಡೆಯುವ ಬಗ್ಗೆ ಮಾತಾಡಿದ ವಿಡಿಯೋವನ್ನು ಜಮೀರ್ ತೋರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಹೇಳಿದಂತೆ ಕುಣಿಯುತ್ತಿದ್ದಾರೆಂದು ಅಧಿಕಾರಿಗಳನ್ನು ಎಚ್ಚರಿಸಿದ ಪ್ರಲ್ಹಾದ್ ಜೋಶಿ
Published on: Nov 02, 2024 04:08 PM