ಸಂಭ್ರಮದಿಂದ ನಡೆಯುತ್ತಿದ್ದ ಮದುವೆಮನೆ, ಸಿಡಿಲು ಬಡಿದ (lightning Strike) ಪರಿಣಾಮ ಸೂತಕದ ಮನೆಯಂತಾಗಿದೆ. ದುರ್ಘಟನೆ ನಡೆದದ್ದು ಬಾಂಗ್ಲಾದೇಶ (Banglasesh)ದ ಢಾಕಾದಲ್ಲಿ. ಒಂದೇ ಸೆಕೆಂಡ್ನಲ್ಲಿ ಮೂರ್ನಾಲ್ಕು ಬಾರಿ ಸಿಡಿಲು ಬಡಿದು, ಮದುವೆ ಮನೆಯಲ್ಲಿ ಇದ್ದ, 16 ಜನರು ಮೃತಪಟ್ಟಿದ್ದಾರೆ. ವರ ಗಂಭೀರವಾಗಿ ಗಾಯಗೊಂಡಿದ್ದು, ವಧು ಪಾರಾಗಿದ್ದಾಳೆ.
ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್ಗಂಜ್ ಪಟ್ಟಣದ ಸಮೀಪ, ಆಶ್ರಯ ಪಡೆಯಲು ಬೋಟ್ನಿಂದ ಇಳಿದರು. ಆದರೆ ಅಷ್ಟರಲ್ಲಿ ಸಿಡಿಲು ಬಡಿದ 16 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಈ ವೇಳೆ ವಧು ಅಲ್ಲಿ ಇಲ್ಲದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾನ್ಸೂನ್ ಮಾರುತಗಳ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರಿಸುತ್ತಿದೆ. ಆಗ್ನೇಯ ಜಿಲ್ಲೆಯಾದ ಕಾಕ್ಸ್ ಬಜಾರ್ನಲ್ಲಿ ಒಂದು ವಾರದಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತತ್ಪರಿಣಾಮ ಸುಮಾರು 20 ಜನರ ಜೀವ ಹೋಗಿದೆ. ಅದರಲ್ಲಿ ಆರು ಮಂದಿ ರೊಹಿಂಗ್ಯಾ ನಿರಾಶ್ರಿತರು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..
ಅಟ್ಲೀ-ಶಾರುಖ್ ಖಾನ್ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್ಪ್ರೈಸ್
Published On - 4:51 pm, Wed, 4 August 21