ಹಮಾಸ್ ಸೆರೆಯಲ್ಲಿನ ಭಯಾನಕ ಅನುಭವ ಹಂಚಿಕೊಂಡ 21ವರ್ಷದ ಇಸ್ರೇಲಿ-ಫ್ರೆಂಚ್ ಟ್ಯಾಟೂ ಕಲಾವಿದೆ

ಅವನು ಮತ್ತು ನಾನು ಒಂದೇ ಕೋಣೆಯಲ್ಲಿರುವುದನ್ನು ಅವನ ಹೆಂಡತಿ ದ್ವೇಷಿಸುತ್ತಿದ್ದಳು ಎಂದಿದ್ದಾಳೆ ಮಿಯಾ. ಈ ಭಯಾನಕ ಅನುಭವವನ್ನು ವಿವರಿಸಿದ ಮಿಯಾ ಕತ್ತಲೆಯ ಕೋಣೆಯಲ್ಲಿ ಬೀಗ ಹಾಕಿ ನನ್ನ ಮೇಲೆ ನಿಗಾ ಇರಿಸಲಾಗಿತ್ತು. ನನಗೆ ಹಸಿವಾಗುತ್ತಿತ್ತು. ಅದರ ಜತೆ ಅಪಹಾಸ್ಯ ಬೇರೆ. ನಾನು ಯಾವ ಕ್ಷಣ ಬೇಕಾದರೂ ಸತ್ತು ಹೋಗುತ್ತೇನೆ ಎಂದು ಅನಿಸಿಬಿಟ್ಟಿತು

ಹಮಾಸ್ ಸೆರೆಯಲ್ಲಿನ ಭಯಾನಕ ಅನುಭವ ಹಂಚಿಕೊಂಡ 21ವರ್ಷದ ಇಸ್ರೇಲಿ-ಫ್ರೆಂಚ್ ಟ್ಯಾಟೂ ಕಲಾವಿದೆ
ಮಿಯಾ ಸ್ಕೆಮ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 02, 2024 | 6:47 PM

ದೆಹಲಿ ಜನವರಿ 02: ಹಮಾಸ್ (Hamas) ಸೆರೆಯಲ್ಲಿ 54 ದಿನಗಳನ್ನು ಕಳೆದ 21 ವರ್ಷದ ಇಸ್ರೇಲಿ-ಫ್ರೆಂಚ್ ಟ್ಯಾಟೂ ಕಲಾವಿದೆ (tattoo artist) ಮಿಯಾ ಸ್ಕೆಮ್ (Mia Schem), ತಾನು ಅತ್ಯಾಚಾರಕ್ಕೊಳಗಾಗುತ್ತೇನೆ ಎಂದು ಹೆದರಿದ್ದೆ. ತನ್ನನ್ನು ಸೆರೆಹಿಡಿದವನು ತನ್ನ ಮೇಲೆ ಅತ್ಯಾಚಾರ ಮಾಡದಿರಲು ಒಂದೇ ಒಂದು ಕಾರಣವಿದೆ. ಅದೇನೆಂದರೆ ಅವನ ಹೆಂಡತಿ ಮಕ್ಕಳೊಂದಿಗೆ ಕೋಣೆಯ ಹೊರಗೆ ಇದ್ದಳು ಎಂದು ಚಾನೆಲ್ 13 ಗೆ ನೀಡಿದ ಸಂದರ್ಶನದಲ್ಲಿ  ಹೇಳಿದ್ದಾಳೆ.

ಅವನು ಮತ್ತು ನಾನು ಒಂದೇ ಕೋಣೆಯಲ್ಲಿರುವುದನ್ನು ಅವನ ಹೆಂಡತಿ ದ್ವೇಷಿಸುತ್ತಿದ್ದಳು ಎಂದಿದ್ದಾಳೆ ಮಿಯಾ. ಈ ಭಯಾನಕ ಅನುಭವವನ್ನು ವಿವರಿಸಿದ ಮಿಯಾ ಕತ್ತಲೆಯ ಕೋಣೆಯಲ್ಲಿ ಬೀಗ ಹಾಕಿ ನನ್ನ ಮೇಲೆ ನಿಗಾ ಇರಿಸಲಾಗಿತ್ತು. ನನಗೆ ಹಸಿವಾಗುತ್ತಿತ್ತು. ಅದರ ಜತೆ ಅಪಹಾಸ್ಯ ಬೇರೆ. ನಾನು ಯಾವ ಕ್ಷಣ ಬೇಕಾದರೂ ಸತ್ತು ಹೋಗುತ್ತೇನೆ ಎಂದು ಅನಿಸಿಬಿಟ್ಟಿತು. ನನ್ನನ್ನು ಕತ್ತಲೆ ಕೋಣೆಯಲ್ಲಿರಿಸಲಾಗಿತ್ತು.ಮಾತನಾಡಲು ಅವಕಾಶವಿಲ್ಲ, ನೋಡಲು ಅವಕಾಶವಿಲ್ಲ. ಏನೂ ಕೇಳುತ್ತಿರಲಿಲ್ಲ.

ಭಯೋತ್ಪಾದಕರು ನಿರಂತರ ಕಣ್ಗಾವಲಿರಿಸಿದ್ದು ಅವರು ಕಣ್ಣುಗಳಿಂದಲೇ ತನ್ನ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂದು ಭಾಸವಾಯಿತು ಎಂದು ಮಿಯಾ ಸ್ಕೆಮ್ ಹೇಳುತ್ತಾರೆ. ಒಂದು ಹಂತದಲ್ಲಿ ವಶಪಡಿಸಿಕೊಂಡವನು ತನ್ನ ಹೆಂಡತಿಯನ್ನು ಪ್ರೀತಿಸುತ್ತಿಲ್ಲ ಎಂದು ತನ್ನ ಬಳಿ ಹೇಳಿಕೊಂಡಿದ್ದಾನೆ. ಒಬ್ಬ ಭಯೋತ್ಪಾದಕ ನನ್ನನ್ನೇ 24/7 ನೋಡುತ್ತಿದ್ದಾನೆ. ಅವ ಕಣ್ಣುಗಳಿಂದಲೇ ನನ್ನನ್ನು ಅತ್ಯಾಚಾರ ಮಾಡುತ್ತಿರುವಂತೆ ಅನಿಸಿತು. ನಾನು ಅತ್ಯಾಚಾರಕ್ಕೊಳಗಾಗುವ ಸಾಯುವ ಭಯ ಆವರಿಸಿಕೊಂಡಿತ್ತು.ನಾನು ಹೆದರಿದ್ದೆ. ಮನೆಯಲ್ಲಿ ಅವನ ಹೆಂಡತಿ ನನಗೆ ಸ್ವಲ್ಪ ಧೈರ್ಯ ತುಂಬಿದ್ದಳು.

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಸಂಗೀತ ಉತ್ಸವದಿಂದ ಮಿಯಾ ಸ್ಕೆಮ್ ಅನ್ನು ಅಪಹರಿಸಲಾಗಿದ್ದು ಪ್ಯಾಲೆಸ್ತೀನಿಯನ್ ಸಂಘಟನೆಯು ಗಾಜಾದಲ್ಲಿ ನಾಗರಿಕ ಕುಟುಂಬವೊಂದು ಸೆರೆಯಲ್ಲಿತ್ತು. ಒತ್ತೆಯಾಳುಗಳನ್ನು ಚೆನ್ನಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹಮಾಸ್‌ನ ವಿಡಿಯೊದಲ್ಲಿ ಕಾಣಿಸಿಕೊಂಡ ನಂತರ ಮಿಯಾ ಪರಿಚಿತ ಮುಖವಾದಳು.

ಇದನ್ನೂ ಓದಿ: ಸುಟ್ಟ ಮುಖ, ಬೆತ್ತಲೆಯಾದ ದೇಹಗಳು ಪತ್ತೆ; ಹಮಾಸ್ ದಾಳಿ ವೇಳೆ ಲೈಂಗಿಕ ದೌರ್ಜನ್ಯದ ಭೀಕರತೆ ಬಿಚ್ಚಿಟ್ಟ ವರದಿ

ಚಾನೆಲ್ 12 ನ್ಯೂಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ, ಯುವ ಕಲಾವಿದೆ ತಾನು ಸಫಾರಿಯಲ್ಲಿನ ಪ್ರಾಣಿಯಂತೆ ಅನಿಸಿತು ಎಂದಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮದ ಸಮಯದಲ್ಲಿ ಕೈದಿ-ಒತ್ತೆಯಾಳು ವಿನಿಮಯದಲ್ಲಿ ಅವಳು ಬಿಡುಗಡೆಯಾದಳು. ಬಿಡುಗಡೆಯಾದ ನಂತರ ಆಕೆ ಇನ್ ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದ್ದು ಆಕ್ರಮಣದ ದಿನಾಂಕವನ್ನು ಒಳಗೊಂಡಿರುವ  We will dance again” ಎಂಬ ಪ್ರತಿಭಟನೆಯ ಸಂದೇಶದೊಂದಿಗೆ ಹೊಸ ಹಚ್ಚೆ ಹಾಕಿದ್ದಳು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ