ಗ್ರೀಸ್ ಸಮೀಪ ಏಜಿಯನ್ ಸಮುದ್ರದಲ್ಲಿ ದೋಣಿ ಮುಗುಚಿ 50 ವಲಸಿಗರು ನಾಪತ್ತೆ
ಜೂನ್ 19 ರಂದು ಗ್ರೀಕ್ ದ್ವೀಪವಾದ ಮೈಕೋನೋಸ್‌ನಲ್ಲಿ ಎಂಟು ಜನ ಸಾವನ್ನಪ್ಪಿದರು, ಇನ್ನೂ 108 ಜನರನ್ನು ರಕ್ಷಿಸಲಾಗಿತ್ತು ಎಂದು ವಿಶ್ವಸಂಸ್ಥೆ ವಲಸೆ ಸಂಸ್ಥೆ ಮೂಲಗಳು ತಿಳಿಸಿವೆ.
ಅಥೆನ್ಸ್: ಕೋಸ್ಟಗಾರ್ಡ್ (Coastguard) ಅಧಿಕಾರಿಯೊಬ್ಬರು ಎಎಫ್ ಪಿ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ ಏಜಿಯನ್ ಸಮುದ್ರಲ್ಲಿರುವ (Aegean Sea) ಗ್ರೀಕ್ ದ್ವೀಪ ಕರ್ಪಥೋಸ್ ಬಳಿ ಬೋಟೊಂದು ಮುಳುಗಿದ ನಂತರ ಅದರಲ್ಲಿದ್ದ 80 ವಲಸಿಗರ ಪೈಕಿ 50 ಜನರು ಕಾಣೆಯಾಗಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಬೋಟ್ ನಲ್ಲಿ 80 ಜನರಿದ್ದರು, ಅವರ ಪೈಕಿ 29 ಜನರನ್ನು ರಕ್ಷಿಸಲಾಗಿದೆ, ಇನ್ನುಳಿದ 50 ಜನ ನಾಪತ್ತೆಯಾಗಿದ್ದಾರೆ, ಎಂದು ಕೋಸ್ಟ್ ಗಾರ್ಡ್ ಹೇಳಿದ್ದಾರೆ.
ಕಾಣೆಯಾಗಿರುವವರನ್ನು ಗ್ರೀಕ್ ಕೋಸ್ಟ್ ಗಾರ್ಡ್ ಹುಡುಕುವ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಸದರಿ ಬೋಟ್ ಮಂಗಳವಾರದಂದು ಟರ್ಕಿಯಿಂದ ಹೊರಟು ಇಟಲಿ ಕಡೆ ತೆರಳುತ್ತಿದ್ದಾಗ ಸಮುದ್ರದಲ್ಲಿ ಮುಗುಚಿಕೊಂಡಿದೆ.
ಏಜಿಯನ್ ಸಮುದ್ರದ ದಕ್ಷಿಣ ಭಾಗದಲ್ಲಿ ನಾಲ್ಕು ನಾವೆಗಳು ಈಗಾಗಲೇ ಶೋಧ ಕಾರ್ಯಚರಣೆ ಆರಂಭಿಸಿದ್ದು, ಗ್ರೀಕ್ ಕೋಸ್ಟ್ ಗಾರ್ಡ್ ಎರಡು ಪೆಟ್ರೋಲ್ ಬೋಟ್ ಗಳು ಮತ್ತು ಗ್ರೀಕ್ ವಾಯದಳದ ಹೆಲಿಕ್ಯಾಪ್ಟರ್ ಒಂದರ ಸೇವೆಯನ್ನು ಸಹ ಬಳಸಿಕೊಳ್ಳಲಾಗಿದೆ.
ಆದರೆ, ಗಂಟೆಗೆ 50 ಕಿಲೋಮೀಟರ್ (30 ಮೈಲಿ) ವೇಗದ ಜೋರುಗಾಳಿ ಶೋಧ ಕಾರ್ಯಾಚರಣೆಗೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಕೋಸ್ಟ್ಗಾರ್ಡ್ ಬಾತ್ಮೀದಾರ ನಿಕೊಸ್ ಕೊಕಲಾಸ್ ಸ್ಕಾಯಿ ರೇಡಿಯೋಗೆ ತಿಳಿಸಿದ್ದಾರೆ. ಯುರೋಪಿಯನ್ ಒಕ್ಕೂಟದಲ್ಲಿ ಉತ್ತಮ ಜೀವನ ನಡೆಸುವ ಉದ್ದೇಶದಿಂದ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ ಪಲಾಯನ ಮಾಡುವ ವಲಸಿಗರಿಗೆ ಗ್ರೀಸ್ ಪ್ರಥಮ ಆಯ್ಕೆಯ ದೇಶವಾಗಿದೆ.
ಸಾಂಪ್ರದಾಯಿಕ ಶತ್ರುಗಳನ್ನು ಬೇರ್ಪಡಿಸುವ ಕಿರಿದಾದ ಮತ್ತು ಅಪಾಯಕಾರಿ ಸಮುದ್ರದ ಮಾರ್ಗವಾಗಿ ಟರ್ಕಿಯ ಮೂಲಕ ಅನೇಕರು ಗ್ರೀಸ್‌ಗೆ ಹೋಗುತ್ತಾರೆ. ಜನವರಿಯಿಂದೀಚೆಗೆ ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗದಲ್ಲಿ ಅರವತ್ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ವಲಸೆಗಾರರ ಅಂತರರಾಷ್ಟ್ರೀಯ ಸಂಸ್ಥೆ ಹೇಳಿದೆ.
ಜೂನ್ 19 ರಂದು ಗ್ರೀಕ್ ದ್ವೀಪವಾದ ಮೈಕೋನೋಸ್‌ನಲ್ಲಿ ಎಂಟು ಜನ ಸಾವನ್ನಪ್ಪಿದರು, ಇನ್ನೂ 108 ಜನರನ್ನು ರಕ್ಷಿಸಲಾಗಿತ್ತು ಎಂದು ವಿಶ್ವಸಂಸ್ಥೆ ವಲಸೆ ಸಂಸ್ಥೆ ಮೂಲಗಳು ತಿಳಿಸಿವೆ.
ಈ ವರ್ಷ ವಲಸಿಗರು ಬಂದಿರುವ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಗ್ರೀಸ್ ಸರ್ಕಾರ ಹೇಳಿದ್ದು ಕಳ್ಳಸಾಗಾಣಿಕೆದಾರರನ್ನು ಗಡಿಯಾಚೆ ನುಸಳದಂತೆ ತಡೆಯಲು ಟರ್ಕಿ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ ಎಂದು ಆರೋಪಿಸಿದೆ.
ಜೂನ್ ತಿಂಗಳ ಅಂತ್ಯದಲ್ಲಿ ಯುರೋಪಿಯನ್ ಯೂನಿಯನ್ ‘ಹಿಂಸಾತ್ಮಕ ಮತ್ತು ಅಕ್ರಮವಾದ ರೀತಿಯಲ್ಲಿ’ ತನ್ನ ದೇಶದಿಂದ ಜನರನ್ನು ಹೊರಗಟ್ಟದಂತೆ ಟರ್ಕಿ ಸರ್ಕಾರವನ್ನು ಆಗ್ರಹಿಸಿತ್ತು.
ಮಾನವ ಕಲ್ಯಾಣ ಸಂಸ್ಥೆಗಳು ಮತ್ತು ಮಾಧ್ಯಮಗಳು ಅಥೆನ್ಸ್ ವಲಸಿಗರನ್ನು ಕಾನೂನುಬಾಹಿರವಾಗಿ ವಾಪಸ್ಸು ಕಳಿಸುತ್ತಿದೆ ಎಂದು ಆರೋಪಿಸಿವೆ. ಗ್ರೀಸ್‌ನ ಸಂಪ್ರದಾಯವಾದಿ ಗ್ರೀಕ್ ಸರ್ಕಾರ ಸದರಿ ಅರೋಪವನ್ನು ನಿರಾಕರಿಸಿದೆ.