Bulgaria: ಧಗಧಗನೇ ಹೊತ್ತಿ ಉರಿದ ಬಸ್​; 12ಮಕ್ಕಳೂ ಸೇರಿ 45 ಮಂದಿ ದುರ್ಮರಣ

ಆಂತರಿಕ ಸಚಿವಾಲಯದ ಸಚಿವ ಬಾಯ್ಕೊ ರಾಶ್ಕೋವ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಬಸ್​​ನೊಳಗೆ ಗುಂಪುಗುಂಪಾಗಿ ಸುಟ್ಟು ಬೂದಿಯಾಗಿದ್ದಾರೆ ಎಂದಿದ್ದಾರೆ.

Bulgaria: ಧಗಧಗನೇ ಹೊತ್ತಿ ಉರಿದ ಬಸ್​; 12ಮಕ್ಕಳೂ ಸೇರಿ 45 ಮಂದಿ ದುರ್ಮರಣ
ಬೆಂಕಿ ಹೊತ್ತಿ ಉರಿದ ಬಸ್​

ಪ್ರವಾಸಿ ಬಸ್​ವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ 12 ಮಕ್ಕಳು ಸೇರಿ 45 ಮಂದಿ ದುರ್ಮರಣಕ್ಕೀಡಾದ ಘಟನೆ ಬಲ್ಗೇರಿಯಾ ಪ್ರದೇಶದ ಪಶ್ಚಿಮದಲ್ಲಿರುವ ಹೆದ್ದಾರಿಯಲ್ಲಿ ನಡೆದಿದೆ. ಈ ಬಸ್​​ನಲ್ಲಿದ್ದವರೆಲ್ಲ ಉತ್ತರ ಮೆಸೆಡೋನಿಯನ್​ ಪ್ರವಾಸಿಗರೇ ಆಗಿದ್ದರು ಎಂದು ವರದಿಯಾಗಿದೆ. ಬಲ್ಕನ್​ ದೇಶಗಳ ಇತಿಹಾಸದಲ್ಲಿಯೇ ಇದು ಭಯಂಕರವಾದ ಅಪಘಾತ ಎಂದೂ ಹೇಳಲಾಗಿದೆ.  ಇನ್ನು ಗಾಯಗೊಂಡ ಏಳುಮಂದಿಯನ್ನು ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಆಂತರಿಕ ಸಚಿವಾಲಯದ ಸಚಿವ ಬಾಯ್ಕೊ ರಾಶ್ಕೋವ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಬಸ್​​ನೊಳಗೆ ಗುಂಪುಗುಂಪಾಗಿ ಸುಟ್ಟು ಬೂದಿಯಾಗಿದ್ದಾರೆ ಎಂದಿದ್ದಾರೆ. ವೈರಲ್​ ಆದ ವಿಡಿಯೋಗಳು ನೋಡಲು ಸಾಧ್ಯವಿಲ್ಲದಷ್ಟು ಭಯಾನಕವಾಗಿವೆ. ಇಂಥ ಸನ್ನಿವೇಶವನ್ನು ನಾನು ಮೊದಲೆಂದೂ ನೋಡಿಯೇ ಇರಲಿಲ್ಲ ಎಂದೂ ತಿಳಿಸಿದ್ದಾರೆ.  ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಬಸ್​ ಹೆದ್ದಾರಿಯ ಬ್ಯಾರಿಯರ್​ (ಬೇಲಿ)ಗೆ ಡಿಕ್ಕಿ ಹೊಡೆದು ನಿಂತಿದೆ. ಬೆಂಕಿ ಹೊತ್ತಿ ಉರಿಯಲು ಪ್ರಾರಂಭವಾದ ಬಳಿಕ ಹೀಗಾಯಿತೋ, ಅಥವಾ ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತೋ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಇದೆ.

ಸೋಫಿಯಾದಿಂದ ಪಶ್ಚಿಮಕ್ಕೆ 45 ಕಿಮೀ ದೂರದಲ್ಲಿರುವ ಸ್ಟ್ರುಮಾ ಹೆದ್ದಾರಿಯಲ್ಲಿ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಆ್ಯಕ್ಸಿಡೆಂಟ್​ ನಡೆದಿದೆ. ಇದರಲ್ಲಿ ಇದ್ದವರು ಇಸ್ತಾನ್​ಬುಲ್​​ಗೆ ವೀಕೆಂಡ್​ ಪ್ರವಾಸಕ್ಕೆ ತೆರಳಿದ್ದರು. ಅವರೆಲ್ಲ ವಾಪಸ್​ ಬರುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರನ ದಾಖಲು ಮಾಡಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನು ಬಗ್ಗೆ ನಮ್ಮ ವರದಿ ಬಹಿರಂಗಪಡಿಸಿ: ಸುಪ್ರೀಂಕೋರ್ಟ್ ನೇಮಕ ಮಾಡಿದ ಸಮಿತಿ ಸದಸ್ಯರ ಮನವಿ

Click on your DTH Provider to Add TV9 Kannada