ದೀಪಾವಳಿ ಗಿಫ್ಟ್: 5 ಶತಮಾನದಷ್ಟು ಹಳೆಯ ಆಂಜನೇಯನ ವಿಗ್ರಹ ಭಾರತಕ್ಕೆ ಮರಳಿಸಿದ ಅಮೆರಿಕ!
ಬ್ರಿಟನ್ನಿಗೆ ಹೊಸ ಪ್ರಧಾನಿ ಬಂದು ನಮ್ಮದೇ ಕೊಹಿನೂರು ವಜ್ರ ವಾಪಸು ಮಾಡುತ್ತಾರಾ ಎಂದು ಕೇಳುತ್ತಿದ್ದವರಿಗೆ ಇತ್ತ ಅಮೆರಿಕದಿಂದ ಸಿಹಿ ಸುದ್ದಿಯೊಂದು ಬಂದಿದೆ. ದೀಪಾವಳಿ ಹಬ್ಬಕ್ಕೆ ಒಳ್ಳೆಯ ಗಿಫ್ಟ್ ದಯಪಾಲಿಸಿದೆ.
ದೀಪಾವಳಿ ಗಿಫ್ಟ್: ಅತ್ತ ಬ್ರಿಟನ್ನಿಗೆ ಭಾರತ ಮೂಲದ ರಿಷಿ ಸುನಾಕ್ ಹೊಸ ಪ್ರಧಾನಿಯಾಗಿ ಬಂದು ನಮ್ಮದೇ ಕೊಹಿನೂರು ವಜ್ರ ವಾಪಸು ಮಾಡುತ್ತಾರಾ ಎಂದು ಕೇಳುತ್ತಿದ್ದವರಿಗೆ ಇತ್ತ ಅಮೆರಿಕದಿಂದ ಸಿಹಿ ಸುದ್ದಿಯೊಂದು ಬಂದಿದೆ. ದೀಪಾವಳಿ ಹಬ್ಬಕ್ಕೆ ಒಳ್ಳೆಯ ಗಿಫ್ಟ್ ದಯಪಾಲಿಸಿದೆ.
ವೈಟ್ಹೌಸ್ನಲ್ಲಿ ದೀಪಾವಳಿ ಆಚರಿಸಿದ ಅಧ್ಯಕ್ಷ ಜೋ ಬೈಡನ್ ಅವರು 500 ವರ್ಷದ ಪುರಾತನ ಹನುಮ ವಿಗ್ರಹವನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಅಂದಹಾಗೆ 500 ವರ್ಷದ ಈ ಪುರಾತನ ಹನುಮ ವಿಗ್ರಹ ಭಾರತದಲ್ಲಿ ಕಳುವಾಗಿತ್ತು. ಭದ್ರತಾ ಪಡೆ ಆಸ್ಟ್ರೇಲಿಯಾದಲ್ಲಿ ನಮ್ಮ ಹನುಮನ ವಿಗ್ರಹವನ್ನು ವಶಕ್ಕೆ ಪಡೆದಿದ್ದರು.
Auspicious statue of Lord Hanuman, stolen from India and retrieved by US Homeland Security Investigations, was handed over to High Commissioner of India,Manpreet Vohra by US CDA Michael Goldman in Canberra. The cooperation extended by US is highly valued by India. pic.twitter.com/scF2keSWW0
— India in Australia (@HCICanberra) February 22, 2022
ತಮಿಳುನಾಡಿನಿಂದ ಕದ್ದಿದ್ದ ವಿಗ್ರಹ ಆಸ್ತ್ರೇಲಿಯಾದ ವ್ಯಾಪಾರಿ ಕೈಸೇರಿತ್ತು!
ತಮಿಳುನಾಡಿನ ಅರಿಯಲೂರು ಜಿಲ್ಲೆಯಿಂದ ದಶಕದ ಹಿಂದೆ ಕದ್ದು ವಿದೇಶಕ್ಕೆ ಕಳ್ಳಸಾಗಣೆಯಾಗಿದ್ದ ಹನುಮಂತನ ವಿಗ್ರಹ ಇದಾಗಿತ್ತು. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ 14 ಮತ್ತು 15 ನೇ ಶತಮಾನದ ನಡುವೆ ನಿರ್ಮಿಸಲಾದ ಈ ಪ್ರತಿಮೆಯು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರರ ಸ್ವಾಧೀನದಲ್ಲಿ ಕಂಡುಬಂದಿತ್ತು. ತಮಿಳುನಾಡು ದೇವಸ್ಥಾನದಿಂದ ಕಳುವಾದ ಐದು ನೂರು ವರ್ಷಗಳಷ್ಟು ಹಳೆಯದಾದ ಹನುಮಾನ್ ಕಂಚಿನ ವಿಗ್ರಹ ಇದಾಗಿದೆ. ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಅವರಿಂದ ಆಸ್ತ್ರೇಲಿಯಾದಲ್ಲಿ ಹಿಂಪಡೆಯಲಾದ ಕದ್ದ ಈ ವಿಗ್ರಹವನ್ನು ಯುಎಸ್ ಗೆ ಹಸ್ತಾಂತರಿಸಲಾಗಿತ್ತು.
ಈ ಆಂಜನೇಯ ವಿಗ್ರಹವನ್ನು ಶ್ರೀ ದೇವಿ ವಿಗ್ರಹ ಮತ್ತು ಭೂದೇವಿ ವಿಗ್ರಹದೊಂದಿಗೆ ಏಪ್ರಿಲ್ 9, 2012 ರಂದು ಅರಿಯಲೂರಿನ ವೆಲ್ಲೂರ್ ಗ್ರಾಮದ ವರದರಾಜ ಪೆರುಮಾಳ್ ದೇವಸ್ಥಾನದಿಂದ ಕಳ್ಳತನ ಮಾಡಲಾಗಿದೆ. ಮಾರ್ಚ್ 2014 ರಲ್ಲಿ, ವಿಗ್ರಹವನ್ನು ಕ್ರಿಸ್ಟೀಸ್ $ 37,500 ಗೆ ಆಸ್ಟ್ರೇಲಿಯಾದಲ್ಲಿ ಖರೀದಿದಾರರಿಗೆ ಹರಾಜು ಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆವಿಷ್ಕಾರ ಮತ್ತು ನಂತರದ ತನಿಖೆಯ ನಂತರ, ಇದು ಭಾರತದಿಂದ ಕದ್ದ ಅದೇ ವಿಗ್ರಹ ಎಂದು ಕಂಡುಬಂದಿತ್ತು. ತಮಿಳುನಾಡು ಪೊಲೀಸರ ಐಡಲ್ ವಿಂಗ್‌ಗೆ ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಈ ಪ್ರಕರಣದಲ್ಲಿ ಸಹಾಯ ಮಾಡಿದೆ.
ವಾರಣಾಸಿಯಿಂದ 100 ವರ್ಷಗಳ ಹಿಂದೆ ಕದ್ದ ಅನ್ನಪೂರ್ಣ ದೇವಿಯ 18 ನೇ ಶತಮಾನದ ಪ್ರತಿಮೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆನಡಾದ ಒಟ್ಟಾವಾದಿಂದ ಮರಳಿ ತರಲಾಯಿತು. ಒಂದು ತಿಂಗಳ ನಂತರ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಇದನ್ನು ಸ್ಥಾಪಿಸಲಾಯಿತು.
Published On - 11:05 am, Thu, 27 October 22