ಕಂದಕಕ್ಕೆ ಬಿದ್ದ ಜೀಪ್, 3 ಸಾವು, 12 ಮಂದಿಗೆ ಗಾಯ
ಜೀಪೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ನೇಪಾಳದ ಗುಡ್ಡಗಾಡು ರಸ್ತೆಯಲ್ಲಿ ಜೀಪ್ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ.
ನೇಪಾಳ: ಜೀಪೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ನೇಪಾಳದ ಗುಡ್ಡಗಾಡು ರಸ್ತೆಯಲ್ಲಿ ಜೀಪ್ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಒಂದು ಜೀಪ್ನಲ್ಲಿದ್ದ ಒಂದೇ ಕುಟುಂಬ ಮೂವರು ಸಾವನ್ನಪ್ಪಿದ್ದಾರೆ, ಹನ್ನೆರಡು ಜನರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಒಂದೇ ಕುಟುಂಬದವರು ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಡ್ಡಗಾಡು ರಸ್ತೆಯಲ್ಲಿ ಸ್ಕಿಡ್ ಆಗಿ ನಾಲೆಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.
ಜೀಪ್ ಸುಳಿಚೌರ್‌ನಿಂದ ಗಜುಲ್‌ಗೆ 15 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಜೀಪ್ 100 ಮೀಟರ್ ಕೆಳಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
12 ಮಂದಿ ಗಾಯಗೊಂಡಿದ್ದು, ಏಳು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೊಹಲ್‌ಪುರ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
Published On - 2:31 pm, Thu, 27 October 22