ರಷ್ಯಾದಲ್ಲಿ 7.4 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ ನೀಡಿದ ಪಿಟಿಡಬ್ಲ್ಯೂಸಿ
ರಷ್ಯಾದ ದೂರದ ಪೂರ್ವದ ಕಮ್ಚಟ್ಕಾ ಕರಾವಳಿಯಲ್ಲಿ ಇಂದು 7.4 ತೀವ್ರತೆಯ ಭೂಕಂಪ ಸಂಭವಿಸಿದೆ, ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದರ ಪರಿಣಾಮ ಜಪಾನ್ ಕೂಡ ತಟ್ಟಿದೆ. ರಷ್ಯಾದ ಕಮ್ಚಟ್ಕಾ ಪ್ರದೇಶದ ಆಡಳಿತ ಕೇಂದ್ರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿ ನಗರದಿಂದ ಪೂರ್ವಕ್ಕೆ 111 ಕಿಲೋಮೀಟರ್ (69 ಮೈಲು) ದೂರದಲ್ಲಿ 39.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ರಷ್ಯಾದ(Russia) ಪೂರ್ವದ ಕಮ್ಚಟ್ಕಾ ಕರಾವಳಿಯಲ್ಲಿ ಶನಿವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ಪ್ರಕಾರ, ಭೂಕಂಪದಿಂದ ಯಾವುದೇ ಅಪಾಯ ಸಂಭವಿಸಿಲ್ಲ. ರಷ್ಯಾದ ಕಮ್ಚಟ್ಕಾ ಪ್ರದೇಶದ ಆಡಳಿತ ಕೇಂದ್ರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿ ನಗರದಿಂದ ಪೂರ್ವಕ್ಕೆ 111 ಕಿಲೋಮೀಟರ್ (69 ಮೈಲು) ದೂರದಲ್ಲಿ 39.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಸಮೀಕ್ಷೆ ಪ್ರಕಾರ 7.5 ತೀವ್ರತೆಯನ್ನು ನೀಡಿತ್ತು. ಆದರೆ ಅದನ್ನು ಇನ್ನು ಕೆಳಗೆ ಇಳಿದಿದೆ. ರಷ್ಯಾದ ಕೆಲವು ಹತ್ತಿರದ ಕರಾವಳಿಗಳಲ್ಲಿ ಒಂದು ಮೀಟರ್ (3.3 ಅಡಿ) ಎತ್ತರದ ಅಪಾಯಕಾರಿ ಅಲೆಗಳು ಏಳಬಹುದು ಎಂದು PTWC ಆರಂಭದಲ್ಲಿ ಎಚ್ಚರಿಸಿದೆ. ಜುಲೈನಲ್ಲಿ, ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಇದು ಪೆಸಿಫಿಕ್‌ನಾದ್ಯಂತ ನಾಲ್ಕು ಮೀಟರ್ ಎತ್ತರದವರೆಗೆ ಸುನಾಮಿಯನ್ನು ಉಂಟುಮಾಡಿತು.
ಇದನ್ನೂ ಓದಿ: ಬಾಲ್ಟಿಕ್ ಸಮುದ್ರದಲ್ಲಿರುವ ರಷ್ಯಾದ ಅತಿದೊಡ್ಡ ತೈಲ ಟರ್ಮಿನಲ್ ಮೇಲೆ ಉಕ್ರೇನ್ ಡ್ರೋನ್ ದಾಳಿ
ಇದರ ಪರಿಣಾಮ ಜಪಾನ್‌ಗೆ ಕೂಡ ತಟ್ಟಿತ್ತು. 2011 ರಲ್ಲಿ ಜಪಾನ್‌ನಲ್ಲಿ 9.1 ತೀವ್ರತೆಯ ಭೂಕಂಪನವು 15,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ಈ ಭೂಕಂಪದ ನಂತರ ದೊಡ್ಡ ಮಟ್ಟದಲ್ಲಿ 8.8 ತೀವ್ರತೆಯ ಭೂಕಂಪ ಕೂಡ ಸಂಭವಿಸಿತ್ತು. ಜುಲೈನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಜಪಾನ್ ಅಧಿಕಾರಿಗಳು ಸುಮಾರು ಎರಡು ಮಿಲಿಯನ್ ಜನರು ಎತ್ತರದ ಪ್ರದೇಶಗಳಿಗೆ ಹೋಗುವಂತೆ ಹೇಳಿದ್ದರು.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 am, Sat, 13 September 25




