ಕಾಬೂಲ್​ ಏರ್​ಪೋರ್ಟ್​ನಲ್ಲಿ ಮತ್ತೆ 7 ಮಂದಿ ಸಾವು; ಬ್ರಿಟನ್​ ಸೇನೆಯಿಂದ ಮಾಹಿತಿ

ಕಾಬೂಲ್​ ಏರ್​ಪೋರ್ಟ್​ ಹೊರಗೆ ಅಪಾಯವಿದೆ. ಹಾಗಾಗಿ ಅಲ್ಲಿಂದ ಪಾರಾಗಬೇಕು ಎಂಬ ಕಾರಣಕ್ಕೆ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎಂದು ಯುಎಸ್​ ಸೇನೆ ಎಚ್ಚರಿಕೆ ನೀಡಿದೆ.

ಕಾಬೂಲ್​ ಏರ್​ಪೋರ್ಟ್​ನಲ್ಲಿ ಮತ್ತೆ 7 ಮಂದಿ ಸಾವು; ಬ್ರಿಟನ್​ ಸೇನೆಯಿಂದ ಮಾಹಿತಿ
ಕಾಬೂಲ್​ ಏರ್​ಪೋರ್ಟ್ (ಪ್ರಾತಿನಿಧಿಕ ಚಿತ್ರ)​
Follow us
TV9 Web
| Updated By: Lakshmi Hegde

Updated on: Aug 22, 2021 | 2:52 PM

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಜನಸಂದಣಿ, ನೂಕಾಟಗಳು ಮುಂದುವರಿದಿದ್ದು ಮತ್ತೆ 7 ಮಂದಿ ಮೃತಪಟ್ಟಿದ್ದಾಗಿ ಇಂದು ಬ್ರಿಟಿಷ್​ ಸೇನೆ ತಿಳಿಸಿದೆ. ತಾಲಿಬಾನ್​​ ಆಡಳಿತಕ್ಕೆ ಒಳಪಟ್ಟ ಅಫ್ಘಾನಿಸ್ತಾನದಿಂದ ಪಾರಾಗುವವರು ಇನ್ನೂ ಅಪಾಯದಲ್ಲೇ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದೂ ಹೇಳಿದೆ. ಅಫ್ಘಾನಿಸ್ತಾನದಿಂದ ಜನರನ್ನು ರಕ್ಷಿಸುವ ಕೆಲಸ ತುಂಬ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆಯೂ ನಾವು ಸುರಕ್ಷಿತವಾಗಿ ಜನರನ್ನು ಅಲ್ಲಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದೇವೆ ಎಂದು ಯುಕೆ ಸೈನ್ಯ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್​ ಏರ್​ಪೋರ್ಟ್​ ಹೊರಗೆ ಅಪಾಯವಿದೆ. ಹಾಗಾಗಿ ಅಲ್ಲಿಂದ ಪಾರಾಗಬೇಕು ಎಂಬ ಕಾರಣಕ್ಕೆ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎಂದು ಅಫ್ಘಾನಿಸ್ತಾನದಲ್ಲಿರುವ ಯುಎಸ್​ ರಾಯಭಾರಿ ಕಚೇರಿ, ಅಲ್ಲಿರುವ ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದ ಒಂದು ದಿನದಲ್ಲೇ ಹೀಗೊಂದು ಬೆಳವಣಿಗೆ ನಡೆದಿದೆ. ಕಾಬೂಲ್​ ಏರ್​ಪೋರ್ಟ್ ಸುತ್ತಲೂ ತಾಲಿಬಾನಿಗಳು ಇದ್ದಾರೆ. ಕೆಲವರನ್ನು ಬೆದರಿಸಿ ಕಳಿಸುತ್ತಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಕಾಬೂಲ್​ ಏರ್​ಪೋರ್ಟ್​ನಲ್ಲಿ ಸಿಕ್ಕಾಪಟೆ ನೂಕುನುಗ್ಗಲು ಆಗುತ್ತಿರುವುದರಿಂದಲೂ ಜೀವ ಹಾನಿಯಾಗುತ್ತಿದೆ.  ಈ ಮಧ್ಯೆ ಕಾಬೂಲ್​ ಏರ್​ಪೋರ್ಟ್​ ಮೇಲೆ ಅಫ್ಘಾನಿಸ್ತಾನದಲ್ಲಿರುವ ಇಸ್ಲಾಮಿಕ್​ ಸ್ಟೇಟ್​​ನ ಶಾಖೆಯಿಂದ ದಾಳಿಯಾಗಬಹುದು ಎಂಬ ಆತಂಕ ಯುಎಸ್​ಗೆ ಶುರುವಾಗಿದೆ. ಹಾಗಾಗಿಯೇ ಅಲ್ಲಿರುವ ತಮ್ಮ ದೇಶದ ನಾಗರಿಕರಿಗೆ ಕಾಬೂಲ್​ ಏರ್​ಪೋರ್ಟ್​ಗೆ ಬರಬೇಡಿ ಎನ್ನುತ್ತಿದೆ.

ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಮುಂದೆ ಮೈಮರೆತು ಬಳುಕಿದ ನೀರೆಯರು: ಇದು ಅಗೌರವ ಎಂದ ನೆಟ್ಟಿಗರು

ಅಫ್ಘಾನಿಸ್ತಾನದಿಂದ ಬಂದವರಿಗೆ ಭಾರತದಲ್ಲಿ ಉಚಿತ ಪೋಲಿಯೊ ಲಸಿಕೆ: ಕೇಂದ್ರ ಆರೋಗ್ಯ ಸಚಿವ