ಕೊರೊನಾ ಲಸಿಕೆ ಸಿದ್ಧವಾದ್ರೆ.. ಇಡೀ ವಿಶ್ವಕ್ಕೆ ಹಂಚಲು ಎಷ್ಟು ಕಾರ್ಗೋ ವಿಮಾನಗಳು ಬೇಕಾಗುತ್ತೆ ಗೊತ್ತಾ!?
ಕೋವಿಡ್-19 ಲಸಿಕೆಗಳನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಸುರಕ್ಷಿತವಾಗಿ ತಲುಪಿಸುವುದು ಜಾಗತಿಕ ವೈಮಾನಿಕ ಸರಕು ಉದ್ಯಮಕ್ಕೆ ಈ ಶತಮಾನದ ಧ್ಯೇಯವಾಗಿದೆ. ಆದರೆ, ಯಾವುದೇ ಪೂರ್ವ ಯೋಜನೆ ಇಲ್ಲದೆ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ, ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳು ಈ ಕುರಿತು ಸೂಕ್ತ ಯೋಜನೆ ರೂಪಿಸಲು ಮುಂದಾಗಬೇಕೆಂದು ಅಂತಾರಾಷ್ಟ್ರೀಯ ವಾಯು ಸಂಚಾರ ಸಂಸ್ಥೆ (ಐಎಟಿಎ) ಹೇಳಿದೆ. ಜೊತೆಗೆ ಕೋವಿಡ್-19 ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಲು ತಯಾರಿ ಆರಂಭಿಸುವಂತೆ ಸರ್ಕಾರಗಳಿಗೆ ಕರೆ ನೀಡಿದೆ. ವಿತರಣೆಯ ಸಂಭಾವ್ಯ ಪ್ರಮಾಣವು ಅಗಾಧವಾಗಿದ್ದು ಜಗತ್ತಿನಲ್ಲಿ ಒಟ್ಟಾರೆ […]
ಕೋವಿಡ್-19 ಲಸಿಕೆಗಳನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಸುರಕ್ಷಿತವಾಗಿ ತಲುಪಿಸುವುದು ಜಾಗತಿಕ ವೈಮಾನಿಕ ಸರಕು ಉದ್ಯಮಕ್ಕೆ ಈ ಶತಮಾನದ ಧ್ಯೇಯವಾಗಿದೆ. ಆದರೆ, ಯಾವುದೇ ಪೂರ್ವ ಯೋಜನೆ ಇಲ್ಲದೆ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ, ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳು ಈ ಕುರಿತು ಸೂಕ್ತ ಯೋಜನೆ ರೂಪಿಸಲು ಮುಂದಾಗಬೇಕೆಂದು ಅಂತಾರಾಷ್ಟ್ರೀಯ ವಾಯು ಸಂಚಾರ ಸಂಸ್ಥೆ (ಐಎಟಿಎ) ಹೇಳಿದೆ.
ಜೊತೆಗೆ ಕೋವಿಡ್-19 ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಲು ತಯಾರಿ ಆರಂಭಿಸುವಂತೆ ಸರ್ಕಾರಗಳಿಗೆ ಕರೆ ನೀಡಿದೆ. ವಿತರಣೆಯ ಸಂಭಾವ್ಯ ಪ್ರಮಾಣವು ಅಗಾಧವಾಗಿದ್ದು ಜಗತ್ತಿನಲ್ಲಿ ಒಟ್ಟಾರೆ 7.8 ಬಿಲಿಯನ್ ಜನರಿದ್ದಾರೆ. ಪ್ರತಿಯೊಬ್ಬರುಗೂ ಲಸಿಕೆ ಒದಗಿಸಲು ಮುಂದಾದರೆ 8,000 ಜಂಬೋ ಜೆಟ್‌ಗಳು ಬೇಕಾಗುತ್ತವೆ ಎಂದು ಐಎಟಿಎ ತಿಳಿಸಿದೆ.
ಹೀಗಾಗಿ, ಐಎಟಿಎ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಜಾಗತಿಕ ಆರೋಗ್ಯ ಸಂಸ್ಥೆಗಳು ಮತ್ತು ಔಷಧ ಸಂಸ್ಥೆಗಳೊಂದಿಗೆ ಅಗತ್ಯ ಯೋಜನೆಗಳನ್ನು ರೂಪಿಸುತ್ತಿದೆ ಎಂಬ ಮಾಹಿತಿ ನೀಡಿದೆ.
Published On - 7:36 pm, Thu, 10 September 20