ನವದೆಹಲಿ: ರಂಜಾನ್ (Ramadan) ಊಟ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಗ್ದಾದ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಶಾಲಾ ಶಿಕ್ಷಕರು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ ಎಂದು ಇರಾಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಶಿಯಾಗಳ ಪವಿತ್ರ ನಗರವಾದ ಕರ್ಬಲಾದಿಂದ ಮಿನಿಬಸ್‌ನಲ್ಲಿ ರಂಜಾನ್ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿಯ ಸುಮಾರಿಗೆ ಬ್ಯಾಬಿಲೋನ್ ಪ್ರಾಂತ್ಯದಲ್ಲಿ ಅಪಘಾತ (Accident) ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತಿಯಾದ ವೇಗ ಮತ್ತು ಹಿಂದಿದ್ದ ವಾಹನದ ಚಾಲಕನ ಗಮನ ಬೇರೆಡೆ ಹೋಗಿದ್ದರಿಂದ ಅವರ ವಾಹನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ರಸ್ತೆ ಸಂಚಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಅಪಘಾತದ ವೇಳೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಘರ್ಷ, ನಿರ್ಲಕ್ಷ್ಯ ಮತ್ತು ಸ್ಥಳೀಯ ಭ್ರಷ್ಟಾಚಾರವು ತೈಲ-ಸಮೃದ್ಧ ಇರಾಕ್‌ನ ರಸ್ತೆಗಳು ಮತ್ತು ಸೇತುವೆಗಳನ್ನು ಒಳಗೊಂಡಂತೆ ಮೂಲಸೌಕರ್ಯವನ್ನು ದುರುಪಯೋಗಪಡಿಸಿಕೊಂಡಿದೆ. ಇಲ್ಲಿನ ಹಲವು ರಸ್ತೆಗಳು ಹೊಂಡಗಳಿಂದ ಕೂಡಿದ್ದು, ರಾತ್ರಿ ವೇಳೆ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿರುತ್ತವೆ. ಇದರಿಂದ ಅಪಘಾತದ ಸಂಖ್ಯೆಯೂ ಹೆಚ್ಚಾಗಿದೆ.
41 ಮಿಲಿಯನ್ ಜನರಿರುವ ಇರಾಕ್‌ನಲ್ಲಿ ಕಳೆದ ವರ್ಷ ಸುಮಾರು 1,000 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಂಚಾರ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Shocking Video: ಪುಣೆ- ಅಹಮದಾಬಾದ್ ಹೆದ್ದಾರಿಯಲ್ಲಿ ಕಾರು- ಬಸ್ ನಡುವೆ ಭೀಕರ ಅಪಘಾತ; ಓರ್ವ ಸಾವು, 25 ಜನರ ಸ್ಥಿತಿ ಗಂಭೀರ
Shocking Video: 2 ಟ್ರಕ್ಗಳ ಮಧ್ಯೆ ಸಿಲುಕಿ ಕಾರು ಅಪ್ಪಚ್ಚಿ; ಭೀಕರ ಅಪಘಾತದಲ್ಲಿ ಓರ್ವ ಸಾವು