ಆಸ್ಟ್ರೇಲಿಯಾದ ಈ ವ್ಯಕ್ತಿ 9999ರ ಡಿಸೆಂಬರ್ 31ರವರೆಗೂ ಇಸ್ರೇಲ್ನಿಂದ ಎಲ್ಲಿಯೂ ಹೋಗುವಂತಿಲ್ಲ; ಕೋರ್ಟ್ ಆದೇಶಕ್ಕೆ ಕಾರಣವೇನು ಗೊತ್ತಾ?
2013ರಲ್ಲಿ ನಡೆದ ಪ್ರಕರಣವಾದರೂ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಪೆರ್ಟ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಸ್ರೇಲಿ ಮಹಿಳೆಯನ್ನು ಮದುವೆಯಾದ ತಪ್ಪಿಗೆ ಈ ಕಷ್ಟ ಅನುಭವಿಸುತ್ತಿದ್ದೇನೆ ಎಂದಿದ್ದಾರೆ.
ಇಸ್ರೇಲ್ನಲ್ಲಿರುವ ಆಸ್ಟ್ರೇಲಿಯಾದ ಈ ವ್ಯಕ್ತಿಗೆ ಒಂದು ವಿಚಿತ್ರ ಶಿಕ್ಷೆ ವಿಧಿಸಲಾಗಿದೆ. ಈ ವ್ಯಕ್ತಿಯ ಪತ್ನಿ ಇಸ್ರೇಲ್ನವರಾಗಿದ್ದು, ಪತಿಗೆ ವಿಧಿಸಲಾದ ಶಿಕ್ಷೆಗೆ ಇವರೇ ಕಾರಣ. ಈಕೆ ತನ್ನ ಪತಿಯ ವಿರುದ್ಧ ವಿಚ್ಛೇದನ ಕೇಸ್ ಹಾಕಿದ್ದು, ಅದರ ಅನ್ವಯ ಇನ್ನು 8000 ವರ್ಷಗಳ ಕಾಲ ಅವರು ಇಸ್ರೇಲ್ ತೊರೆಯುವಂತಿಲ್ಲ. ಅಂದರೆ 9999ನೇ ಇಸ್ವಿ, ಡಿಸೆಂಬರ್ 31ರವರೆಗೂ ಅವರು ಇಸ್ರೇಲ್ ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ರಜಾದಿನಗಳನ್ನು ಕಳೆಯಲೂ ಕೂಡ ಹೋಗುವಂತಿಲ್ಲ !
ಈ ಶಿಕ್ಷೆಗೆ ಒಳಗಾದವರ ಹೆಸರು ನೋಮ್ ಹಪರ್ಟ್. ಮಗುವಿನ ಭವಿಷ್ಯದ ಬೆಳವಣಿಗಾಗಿ ಅವರು 3.34 ಮಿಲಿಯನ್ ಡಾಲರ್ಗಳಷ್ಟು (18.19 ಕೋಟಿ ರೂ.) ಹಣವನ್ನು ಪತ್ನಿಗೆ ಪಾವತಿ ಮಾಡಿದರೆ ಇಸ್ರೇಲ್ ಬಿಡಬಹುದು ಅದಾಗದೆ ಇದ್ದರೆ, 9999ನೇ ಇಸ್ವಿ ಡಿಸೆಂಬರ್ 31ರವರೆಗೆ ಇಸ್ರೇಲ್ನಿಂದ ಹೊರಗೆಲ್ಲೂ ಹೋಗುವಂತಿಲ್ಲ ಎಂದು ಸ್ಥಳೀಯ ನ್ಯಾಯಾಲಯವೊಂದು ಆದೇಶ ನೀಡಿದೆ. ಈ ಹಪರ್ಟ್ ಅವರು 2012ರಲ್ಲಿ ಇಸ್ರೇಲ್ಗೆ ಹೋಗಿದ್ದಾರೆ. ಅದಕ್ಕೂ ಒಂದು ವರ್ಷ ಮೊದಲು ಅವರ ಮಾಜಿ ಪತ್ನಿ ಇಸ್ರೇಲ್ಗೆ ವಾಪಸ್ ಹೋಗಿದ್ದರು. ನಂತರ ಮಕ್ಕಳನ್ನು ನೋಡಲೆಂದು, ಅವರೊಂದಿಗೆ ಇರಲೆಂದು ಹಪರ್ಟ್ ಕೂಡ ಹೋಗಿದ್ದರು. ಆದರೆ 2013ರಲ್ಲಿ ಪತ್ನಿ ಇವರ ವಿರುದ್ಧ ವಿಚ್ಛೇದನ ಕೇಸ್ ದಾಖಲಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಹಪೆರ್ಟ್ ಅವರು, ಅವರ ಇಬ್ಬರೂ ಮಕ್ಕಳು 18 ವರ್ಷ ತುಂಬುವವರೆಗೆ ಪ್ರತಿತಿಂಗಳೂ 5 ಸಾವಿರ ಇಸ್ರೇಲಿ ಶೆಕೆಲ್ಗಳನ್ನು ನೀಡಬೇಕು. ಅದಾಗದೆ ಇದ್ದರೆ ಇನ್ನು 8000 ಸಾವಿರ ವರ್ಷಗಳ ಕಾಲ, ಇಸ್ರೇಲ್ ಬಿಟ್ಟು ಎಲ್ಲಿಗೂ ಹೋಗಬಾರದು. ಕೆಲಸಕ್ಕಾಗಲೀ, ರಜಾದಿನಗಳನ್ನು ಕಳೆಯಲಾಗಲಿ ಎಲ್ಲಿಯೂ ಹೋಗುವಂತಿಲ್ಲ ಎಂದು ಆದೇಶ ನೀಡಿದೆ.
2013ರಲ್ಲಿ ನಡೆದ ಪ್ರಕರಣವಾದರೂ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಪೆರ್ಟ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಸ್ರೇಲಿ ಮಹಿಳೆಯನ್ನು ಮದುವೆಯಾದ ತಪ್ಪಿಗೆ ಈ ಕಷ್ಟ ಅನುಭವಿಸುತ್ತಿದ್ದೇನೆ. ಇಸ್ರೇಲಿ ಕಾನೂನುಗಳಿಂದ ದೌರ್ಜನ್ಯಕ್ಕೆ ಒಳಗಾದ ವಿದೇಶಿಗರಲ್ಲಿ ನಾನೂ ಒಬ್ಬ. ನನಗೆ ಯಾವುದೇ ಕೆಲಸಕ್ಕೂ ಹೊರಗೆ ಹೋಗಲು ಸಾಧ್ಯವಾಗದೆ, ಇಲ್ಲೇ ಲಾಕ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿರುವ ದೇಶಗಳಲ್ಲಿ ಇಸ್ರೇಲ್ ಕೂಡ ಒಂದು. ಇಲ್ಲಿ ಮಹಿಳೆಯರು, ತಾವು ಡಿವೋರ್ಸ್ ಕೊಟ್ಟ ಬಳಿಕ ಮಕ್ಕಳ ಭವಿಷ್ಯಕ್ಕೆ ಹಣ ನೀಡುವ ಕಾರಣಕ್ಕೆ ಅವರ ತಂದೆ (ತಮ್ಮ ಮಾಜಿ ಪತಿ)ಗೆ ಪ್ರಯಾಣ ನಿಷೇಧ ಹೇರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: 2021ರಲ್ಲಿ ಬಿಕಿನಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ತಾರೆಯರು ಇವರೇ..; ಚಿತ್ರಗಳು ಇಲ್ಲಿವೆ