Uganda: ಹಸಿದ ಹಿಪ್ಪೊವೊಂದು 2-ವರ್ಷದ ಬಾಲಕನನ್ನು ಅನಾಮತ್ತಾಗಿ ನುಂಗಿದ ಬಳಿಕ ಅವನನ್ನು ಜೀವಂತವಾಗಿ ವಾಂತಿ ಮಾಡಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 16, 2022 | 12:31 PM

ವರದಿಯೊಂದರ ಪ್ರಕಾರ ಆಫ್ರಿಕಾದಲ್ಲಿ ಹಿಪ್ಪೊಗಳು ಪ್ರತಿವರ್ಷ ಕನಿಷ್ಟ 500 ಜನರನ್ನು ಬಲಿಪಡೆಯುತ್ತವೆ. ಸುಮಾರು ಒಂದು ಅಡಿಯಷ್ಟು ಉದ್ದದ ಕೋರೆ ಹಲ್ಲುಗಳಿಂದ ಹಿಪ್ಪೊಗಳು ತಮ್ಮ ಆಹುತಿಯನ್ನು ಅಗಿಯುತ್ತಾ ತಿನ್ನುತ್ತವೆ, ಎಂದು ಹೇಳಲಾಗಿದೆ.

Uganda: ಹಸಿದ ಹಿಪ್ಪೊವೊಂದು 2-ವರ್ಷದ ಬಾಲಕನನ್ನು ಅನಾಮತ್ತಾಗಿ ನುಂಗಿದ ಬಳಿಕ ಅವನನ್ನು ಜೀವಂತವಾಗಿ ವಾಂತಿ ಮಾಡಿತು!
ಪ್ರಾತಿನಿಧಿಕ ಚಿತ್ರ
Follow us on

Uganda: ಹಸಿದ ನೀರ್ಗುದುರೆಯೊಂದು (ಹಿಪ್ಪೊಪೊಟಾಮಸ್ ಅಥವಾ ಸಂಕ್ಷಿಪ್ತವಾಗಿ ಹಿಪ್ಪೊ) (Hippopotamus) 2-ವರ್ಷದ ಬಾಲಕನನ್ನು ಅನಾಮತ್ತಾಗಿ ನುಂಗಿದನ್ನು ಕಂಡು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಅದರ ಮೇಲೆ ಕಲ್ಲುಗಳನ್ನು ಎಸೆದಾಗ ಬಾಲಕನನ್ನು ಜೀವಂತವಾಗಿ ಹೊರಹಾಕಿದ ವಿಸ್ಮಯಕಾರಿ ಘಟನೆಯೊಂದು ಆಫ್ರಿಕನ್ ರಾಷ್ಟ್ರ ಉಗಾಂಡದಿಂದ (Uganda) ವರದಿಯಾಗಿದೆ. ರವಿವಾರದಂದು ಅನಾಮಧೇಯ ಬಾಲಕ ಕಾಟ್ವೆ ಕಬಾಟೊರೊ ಎಂಬಲ್ಲಿ ಅವನ ಮನೆಪಕ್ಕದ ಕೆರೆಯ ತೀರದಲ್ಲಿ ತನ್ನ ಪಾಡಿಗೆ ತಾನು ಆಡಿಕೊಂಡಿದ್ದಾಗ ಭಯಂಕರವಾಗಿ ಹಸಿದಿದ್ದ ಹಿಪ್ಪೊ ಅವನನ್ನು ಕೋರೆಹಲ್ಲುಗಳಿಂದ (jaws) ಗಬಕ್ಕನೆ ಹಿಡಿದು ಅನಾಮತ್ತಾಗಿ ನುಂಗಿ ಬಿಟ್ಟಿತ್ತು ಎಂದು ಕ್ಯಾಪಿಟಲ್ ಎಫ್ ಎಮ್ ಉಗಾಂಡ ವರದಿ ಮಾಡಿದೆ. ‘ಹಿಪ್ಪೊ ಎಡ್ವರ್ಡ್ ಕೆರೆಯಿಂದ ಹೊರಬಂದು ಬಾಲಕನೊಬ್ಬನ ಮೇಲೆ ಆಕ್ರಮಣ ನಡೆಸಿದ್ದು ಇದೇ ಮೊದಲ ಸಲವಾಗಿದೆ,’ ಎಂದು ಉಗಾಂಡ ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಾಲಕ ದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಅವನ್ನು ಕೂಡಲೇ ಅಸ್ಪತ್ರೆಗೆ ಕರೆದೊಯ್ದ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.

ಇದನ್ನೂ ಓದಿ:   ಚೀನಾದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ, ಲಾಕ್​ಡೌನ್ ವಿರುದ್ಧ ನಡೆದ ಪ್ರತಿಭಟನೆಗಳಿಗೆ ‘ವಿದೇಶಿ ಶಕ್ತಿಗಳನ್ನು’ ದೂರಿದ ಉನ್ನತಾಧಿಕಾರಿ

ನಂತರ ಅವನನ್ನು ಹೆಚ್ಚಿನ ಚಿಕಿತ್ಸೆಗೆ ಹತ್ತಿರದ ಪಟ್ಟಣ ಬೇರಾಗೆ ಒಯ್ದು ದಾಖಲಿಸಲಾಯಿತು. ಈ ಪಟ್ಟಣವು ಕಾಂಗೋ ಗಣತಂತ್ರದ ಗಡಿಭಾಗದಲ್ಲಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಾಲಕನಿಗೆ ರೆಬೀಸ್ ವ್ಯಾಕ್ಸಿನ್ ನೀಡಿದ ಬಳಿಕ ಅವನ ಪೋಷಕರೊಂದಿಗೆ ಮನೆಗೆ ಕಳಿಸಲಾಯಿತು.

ವರದಿಯೊಂದರ ಪ್ರಕಾರ ಆಫ್ರಿಕಾದಲ್ಲಿ ಹಿಪ್ಪೊಗಳು ಪ್ರತಿವರ್ಷ ಕನಿಷ್ಟ 500 ಜನರನ್ನು ಬಲಿಪಡೆಯುತ್ತವೆ. ಸುಮಾರು ಒಂದು ಅಡಿಯಷ್ಟು ಉದ್ದದ ಕೋರೆ ಹಲ್ಲುಗಳಿಂದ ಹಿಪ್ಪೊಗಳು ತಮ್ಮ ಆಹುತಿಯನ್ನು ಅಗಿಯುತ್ತಾ ತಿನ್ನುತ್ತವೆ, ಎಂದು ಹೇಳಲಾಗಿದೆ.

ಜರ್ನಲ್ ಆಫ್ ಆಕ್ಸಫರ್ಡ್ ಮೆಡಿಕಲ್ ಕೇಸ್ ವರದಿಯ ಪ್ರಕಾರ ಹಿಪ್ಪೊ ಅಕ್ರಮಣಗಳು ಶೇಕಡ 29 ರಿಂದ ಶೇಕಡ 87 ರಷ್ಟು ಮಾರಣಾಂತಿಕವಾಗಿರುತ್ತವೆ.

ಮತ್ತಷ್ಟು ವಿಶ್ವ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ