AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ, ಲಾಕ್​ಡೌನ್ ವಿರುದ್ಧ ನಡೆದ ಪ್ರತಿಭಟನೆಗಳಿಗೆ ‘ವಿದೇಶಿ ಶಕ್ತಿಗಳನ್ನು’ ದೂರಿದ ಉನ್ನತಾಧಿಕಾರಿ

ಚೀನಾದ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಗಳು, ಬೀಜಿಂಗ್ ನಲ್ಲಿ ನೆಲೆಸಿರುವ ಡಿಪ್ಲೊಮ್ಯಾಟ್ ಗಳು, ಪತ್ರಕರ್ತರು ಮೊದಲಾದವರೆಲ್ಲ ಸೋಂಕಿಗೊಳಗಾಗಿದ್ದು ವೈರಸ್ ತಾರತಮ್ಯವೇನೂ ಪ್ರದರ್ಶಿಸುತ್ತಿಲ್ಲ.

ಚೀನಾದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ, ಲಾಕ್​ಡೌನ್ ವಿರುದ್ಧ ನಡೆದ ಪ್ರತಿಭಟನೆಗಳಿಗೆ ‘ವಿದೇಶಿ ಶಕ್ತಿಗಳನ್ನು’ ದೂರಿದ ಉನ್ನತಾಧಿಕಾರಿ
ಬೀಜಿಂಗ್ ನಗರದ ಟೆಸ್ಟಿಂಗ್ ಸೆಂಟರ್ ಮುಂದೆ ಗುಂಪು ಗುಂಪು ಜನ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 15, 2022 | 6:49 PM

Share

ಬೀಜಿಂಗ್: ಕೊರೋನಾ ವೈರಸ್ ಚೀನಾವನ್ನು ಕಾಡುವುದು ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ನಿಮಗೆ ನೆನಪಿರಬಹುದು, ಕಠಿಣ ಜೀರೋ-ಕೋವಿಡ್ (Zero-Covid) ನಿಬಂಧನೆಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು (protests) ನಡೆದ ಬಳಿಕ ಅಲ್ಲಿನ ಸರ್ಕಾರ ಎರಡು ವಾರಗಳ ಹಿಂದೆ ನಿಬಂಧನೆಗಳನ್ನು ತೆರವುಗೊಳಿಸಿತ್ತು. ಆದರೆ, ಕಳೆದ ಕೆಲದಿನಗಳಿಂದ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿದ್ದು ಆ ದೇಶದ ಡಿಪ್ಲೋಮ್ಯಾಟ್ ಗಳು (diplomats) ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ವಿದೇಶಿ ಶಕ್ತಿಗಳು (foreign forces) ಕಾರಣವೆಂದು ಆರೋಪಿಸಿ ದೂಷಿಸುತ್ತಿದ್ದಾರೆ. ಬೀಜಿಂಗ್ ನಗರದ ಕ್ಲಿನಿಕ್ ಗಳ ಮುಂದೆ ಸೋಂಕಿತರು ಫುಟ್ ಪಾತ್ ಗಳ ವರೆಗೆ ಸಾಲುಗಳಲ್ಲಿ ಥರಗುಟ್ಟುವ ಚಳಿಯಲ್ಲಿ ನಡುಗುತ್ತಾ ನಿಂತು ಚಿಕಿತ್ಸೆಗಾಗಿ ಕಾಯುತ್ತಿರುವ ವಿಡಿಯೋಗಳು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಐವಿ ಡ್ರಿಪ್ ಗಳನ್ನು ಹಾಕಿಕೊಂಡು ಕಾರುಗಳಲ್ಲಿ ಮತ್ತು ಕ್ಲಿನಿಕ್ ಗಳ ಪಾರ್ಕಿಂಗ್ ಲಾಟ್ ಗಳಲ್ಲಿ ಸೋಂಕಿತರು ತಮ್ಮ ಸರದಿಗಾಗಿ ಕಾಯುತ್ತಿರುವ ವಿಡಿಯೋಗಳು ಸಹ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿವೆ.

ತೀವ್ರ ಸ್ವರೂಪದ ಜ್ವರದಿಂದ ಬಳಲುತ್ತಿರುವವರು ಕ್ಲಿನಿಕ್ ಗಳ ಮುಂದೆ ಕಾಯುತ್ತಿದ್ದರೆ, ಕೊರೋನಾ ವೈರಸ್ ನ ಒಮೈಕ್ರಾನ್ ರೂಪಾಂತರಿ ಬೀಜಿಂಗ್ ಮಹಾನಗರದ ಅಪಾರ್ಟ್ ಮೆಂಟ್ ಬ್ಲಾಕ್ ಗಳಲ್ಲಿ ತಾಂಡವ ನೃತ್ಯ ನಡೆಸುತ್ತಿದೆ. ಎರಡು ವಾರಗಳ ಹಿಂದೆ ಜೀರೋ-ಕೋವಿಡ್ ನಿಬಂಧನೆಗಳಿಗೆ ಒಳಪಟ್ಟಿದ್ದ ಎಲ್ಲ ವಸತಿ ಸಂಕೀರ್ಣಗಳಲ್ಲಿ ಈಗ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

ಇದನ್ನೂ ಓದಿ:  ISRO: ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿ 1,100 ಕೋಟಿ ರೂ. ಗಳಿಸಿದ ಇಸ್ರೋ

ಚೀನಾದ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಗಳು, ಬೀಜಿಂಗ್ ನಲ್ಲಿ ನೆಲೆಸಿರುವ ಡಿಪ್ಲೊಮ್ಯಾಟ್ ಗಳು, ಪತ್ರಕರ್ತರು ಮೊದಲಾದವರೆಲ್ಲ ಸೋಂಕಿಗೊಳಗಾಗಿದ್ದು ವೈರಸ್ ತಾರತಮ್ಯವೇನೂ ಪ್ರದರ್ಶಿಸುತ್ತಿಲ್ಲ.

ಏತನ್ಮಧ್ಯೆ, ಚೀನಾದ ಹಿರಿಯ ಡಿಪ್ಲೊಮ್ಯಾಟ್ ಒಬ್ಬರು ಕಳೆದ ತಿಂಗಳು; ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಮತ್ತು ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿ ವಿರುದ್ಧ ಸ್ಲೋಗನ್ ಗಳನ್ನೊಳಗೊಂಡ ಜಿರೋ-ಕೋವಿಡ್ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಕಾರಣವಾಗಿದ್ದು ಪಿಡುಗನ್ನು ತಡೆಯಲು ವಿಫಲಗೊಂಡ ಸ್ಥಳೀಯ ಆಡಳಿತಗಳು ಅಂತ ದೂರಿ, ಕೆಲ ವಿದೇಶೀ ಶಕ್ತಿಗಳು ಕೂಡಲೇ ಪರಿಸ್ಥಿತಿಯ ಲಾಭ ಪಡೆದವು ಎಂದಿದ್ದಾರೆ.

ಬೀಜಿಂಗ್, ಶಾಂಘೈ, ಗ್ವಾಂಗ್ಡಂಗ್ ಮತ್ತು ಇನ್ನಿತರ ನಗರಗಳಲ್ಲಿ ಅಪರೂಪದ ಪ್ರತಿಭಟನೆಗಳು ಭುಗಿಲೆದ್ದ ನಂತರ ಫ್ರಾನ್ಸ್ ಗೆ ಚೀನಾದ ರಾಯಭಾರಿಯಾಗಿರುವ ಲು ಶಾಯೆ ಕಾಮೆಂಟ್ ಮಾಡಿರುವರೆಂದು ಹಾಂಗ್ ಕಾಂಗ್ ಮೂಲದ ಚೀನಾ ಮಾರ್ನಿಂಗ್ ಪೋಸ್ಟ್ ಗುರುವಾರ ವರದಿ ಮಾಡಿದೆ. ಡಿಸೆಂಬರ್ 7 ರಂದು ರೆಸೆಪ್ಷನ್ ಒಂದರಲ್ಲಿ ಲು ಅವರು ಮಾಡಿದ ಕಾಮೆಂಟ್ ಗಳನ್ನು ಚೀನಾ ರಾಯಭಾರಿ ಕಚೇರಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ:  ತವಾಂಗ್​​ನಲ್ಲಿ ಭಾರತ- ಚೀನಾ ಸಂಘರ್ಷ: ಡಿ.9ರಂದು ನಡೆದಿದ್ದೇನು? ಈಗ ಹೇಗಿದೆ ಪರಿಸ್ಥಿತಿ?

‘ಮೊದಲಿಗೆ, ಸ್ಥಳೀಯ ಆಡಳಿತಗಳು ಕೋವಿಡ್ ಪಿಡುಗನ್ನು ನಿಯಂತ್ರಿಸಲು ಮತ್ತು ಚೀನಾ ಸರ್ಕಾರದ ನೀತಿಗಳನ್ನು ಸಮಗ್ರವಾಗಿ ಜಾರಿಗೆ ತರಲು ವಿಫಲಗೊಂಡ ಕಾರಣ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಚೀನಾ ಜನ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಅಂತ ನಾನು ಭಾವಿಸಿದ್ದೆ. ಆದರೆ ವಿದೇಶಿ ಶಕ್ತಿಗಳು ಕೂಡಲೇ ಈ ಪ್ರತಿಭಟನೆಗಳ ಲಾಭ ಪಡೆದವು,’ ಎಂದು ಲು ಹೇಳಿದ್ದಾರೆ.

‘ನಿಜವಾದ ಪ್ರತಿಭಟನೆಗಳು ಕೇವಲ ಮೊದಲ ದಿನ ಮಾತ್ರ ನಡೆದವು ಅಂತ ನಾನಂದುಕೊಳ್ಳುತ್ತೇನೆ. ಎರಡನೇ ದಿನವೇ ವಿದೇಶಿ ಶಕ್ತಿಗಳು ಚಿತ್ರಣದಲ್ಲಿ ಬಂದವು,’ ಎಂದು ಲು ಹೇಳಿದ್ದಾರೆ. ಈ ಹಿಂದೆಯೂ ಲು ಅವರು ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದರಿಂದ ಅವರನ್ನು ಉನ್ನತ ಪ್ರೊಫೈಲ್ ‘ವುಲ್ಫ್ ವಾರಿಯರ್’ ಚೀನಾ ಡಿಪ್ಲೋಮ್ಯಾಟ್ ಎಂದು ಕರೆಯಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಜೀರೋ-ಕೋವಿಡ್ ನೀತಿಯಡಿ, ಯಾರಲ್ಲಾದರೂ ಸೋಂಕು ಕಂಡುಬಂದರೆ ಆ ವ್ಯಕ್ತಿ ಮತ್ತು ಅವನ ಸಂಪರ್ಕದಲ್ಲಿದ್ದ ಜನರರನ್ನು ಕೂಡಲೇ ಸರ್ಕಾರ ನಡೆಸುತ್ತಿದ್ದ ಕ್ವಾರಂಟಿನ್ ಹೋಮ್ ಗಳಿಗೆ ಕರೆದೊಯ್ಯಲಾಗುತಿತ್ತು. ಈ ಹೋಮ್ಗಳಲ್ಲಿ ವ್ಯವಸ್ಥೆ ಬಹಳ ಕೆಟ್ಟದ್ದಾಗಿದೆ ಎಂದು ಜನ ದೂರಿದ್ದರು.

ಆದರೆ, ಜನರ ಪ್ರತಿಭಟನೆಗಳಿಂದ ಬೇಸತ್ತ ಸರ್ಕಾರ ಡಿಸೆಂಬರ್ 3 ರಂದು ಬೀಜಿಂಗ್ ಸೇರಿದಂತೆ ಹಲವಾರು ನಗರಗಳಲ್ಲಿ ಜೀರೋ-ಕೋವಿಡ್ ಪಾಲಿಸಿಯಡಿಯ ಹಲವಾರು ನಿಬಂಧನೆಗಳನ್ನು ತೆರವುಗೊಳಿಸಿತು. ಅವುಗಳಲ್ಲಿ ಕ್ವಾರಂಟೀನ್ ಸೆಂಟರ್ ಗಳಲ್ಲಿ ಕಡ್ಡಾಯ ವಾಸದ ನಿಬಂಧನೆಯೂ ಸೇರಿತ್ತು.

ಇದನ್ನೂ ಓದಿ:  ಮಾಗಿದ ಆರ್​ವಿ ದೇಶಪಾಂಡೆಗೆ ಮರೆವು, ಡಿಕೆ ಶಿವಕುಮಾರ್ ಎದುರು ಮುಜುಗರಕ್ಕೀಡಾದ ಹಿರಿಯ ನಾಯಕ!

ಹಾಗೆಯೇ, ಚೀನಾ ಸರ್ಕಾರವು ಅನೇಕ ಟೆಸ್ಟಿಂಗ್ ಸೆಂಟರ್ ಗಳನ್ನು ಮುಚ್ಚಿದ್ದರಿಂದ ಟೆಸ್ಟ್ ಗಳಿಗೆಂದು ಆ ಸೆಂಟರ್ ಗಳಿಗೆ ಹೋದವರ ರಿಸಲ್ಟ್ ಆಧಿಕೃತ ಌಪ್ ಗಳಲ್ಲಿ ಕಾಣಿಸುವುದು ನಿಂತು ಹೋಯಿತು.

ಅದರ ಬದಲಿಗೆ, ಸೌಮ್ಯ ಸ್ವರೂಪದ ಸೋಂಕಿನ ಲಕ್ಷಣಗಳಿಗೆ ಜನ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುವಂತೆ ಸರ್ಕಾರ ಸೂಚಿಸಿತು. ಅದೇ ಸಮಯದಲ್ಲಿ ಸರ್ಕಾರೀ ಸಾಂಕ್ರಾಮಿಕ ರೋಗತಜ್ಞರು ಚೀನಾದಲ್ಲಿ ಸದ್ಯಕ್ಕೆ ಅವಾಂತರ ಸೃಷ್ಟಿಸಿರುವ ಒಮೈಕ್ರಾನ್ ರೂಪಾಂತರಿಯು ಡೆಲ್ಟಾ ರೂಪಾಂತರಿಯಷ್ಟು ಅಪಾಯಕಾರಿ ಅಲ್ಲ, ಸೋಂಕಿತರು ಮನೆಯಲ್ಲಿದ್ದು ವಿಶ್ರಾಂತಿ ಪಡೆಯುತ್ತಾ ಸೂಕ್ತ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಂಡರೆ ಗುಣಮುಖರಾಗಿಬಿಡುತ್ತಾರೆ ಎಂದು ಹೇಳಿಕೆಗಳನ್ನು ನೀಡಿದರು.

ಮತ್ತಷ್ಟು ವಿದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ