AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾವು ಕೀವ್ ಮೇಲೆ ದಾಳಿ ನಡೆಸಲು 2 ಲಕ್ಷ ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ: ಉಕ್ರೇನ್

ರಷ್ಯಾವು ಕೀವ್(Kyiv) ಮೇಲೆ ದಾಳಿ ನಡೆಸಲು 2 ಲಕ್ಷ ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಉಕ್ರೇನ್ ಹೇಳಿದೆ. ದಿ ಎಕನಾಮಿಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಈ ಕುರಿತು ಹೇಳಿಕೆ ನೀಡಿದ್ದು, 2023 ರ ಆರಂಭದಲ್ಲಿ ಕೀವ್ ಮೇಲೆ ಹೊಸ ರಷ್ಯಾದಿಂದ ದಾಳಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ರಷ್ಯಾವು ಕೀವ್ ಮೇಲೆ ದಾಳಿ ನಡೆಸಲು 2 ಲಕ್ಷ ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ: ಉಕ್ರೇನ್
UkraineImage Credit source: NDTV
TV9 Web
| Updated By: ನಯನಾ ರಾಜೀವ್|

Updated on: Dec 16, 2022 | 7:03 AM

Share

ರಷ್ಯಾವು ಕೀವ್(Kyiv) ಮೇಲೆ ದಾಳಿ ನಡೆಸಲು 2 ಲಕ್ಷ ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಉಕ್ರೇನ್ ಹೇಳಿದೆ. ದಿ ಎಕನಾಮಿಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಈ ಕುರಿತು ಹೇಳಿಕೆ ನೀಡಿದ್ದು, 2023 ರ ಆರಂಭದಲ್ಲಿ ಕೀವ್ ಮೇಲೆ ಹೊಸ ರಷ್ಯಾದಿಂದ ದಾಳಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ರಷ್ಯಾವು ಸುಮಾರು 200,000 ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ. ಅವರು ಕೀವ್​ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಸಿದ್ಧವಾಗಿದ್ದಾರೆ ಇದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಮತ್ತಷ್ಟು ಓದಿ: Ukraine Crisis: ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್​ನ 137 ಜನರ ಮರಣ; ರಷ್ಯಾ- ಉಕ್ರೇನ್ ಬೆಳವಣಿಗೆಯ ಮುಖ್ಯಾಂಶಗಳು ಇಲ್ಲಿವೆ

ಈಗಾಗಲೇ ನಡೆದಿರುವ ವಿದ್ಯುತ್ ಜಾಲದ ಮೇಲಿನ ದಾಳಿಯಿಂದ ದೇಶದಾದ್ಯಂತ ಭಾರಿ ವಿದ್ಯುತ್ ಕಡಿತವನ್ನು ಉಂಟುಮಾಡಿದೆ, ಲಕ್ಷಾಂತರ ಉಕ್ರೇನಿಯನ್ನರು ಚಳಿ ಮತ್ತು ಕತ್ತಲೆಯಲ್ಲಿದ್ದಾರೆ. ನಾವು ಶತ್ರುಗಳನ್ನು ಸೋಲಿಸುತ್ತೇವೆ ಎಂಬ ಭರವಸೆ ಇದೆ ಆದರೆ ಸಂಪನ್ಮೂಲಗಳು ಬೇಕು ಎಂದು ಹೇಳಿದ್ದಾರೆ.

ರಷ್ಯಾವು ಒಂದು ವಾರದ ಬಳಿಕ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದೊಡ್ಡ ಪ್ರಮಾಣದ ಡ್ರೋನ್ ದಾಳಿ ನಡೆಸಿದೆ. ಕಟ್ಟಡಗಳನ್ನು ಗುರಿಯಾಗಿಸಿ ಇರಾನ್ ನಿರ್ಮಿತ ಶಾಹಿದ್ ಡ್ರೋನ್​ಗಳಿಂದ ದಾಳಿ ನಡೆಸಲಾಗಿದೆ. ಕನಿಷ್ಠ ಐದು ಕಟ್ಟಡಗಳಿಗೆ ಹಾನಿ ಮಾಡಿದೆ. ನಾಗರಿಕರು ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆದಿದ್ದು, ಸಾವು-ನೋವಿನ ವರದಿಯಾಗಿಲ್ಲ.

ಹೊಡೆದುರುಳಿಸಿದ ಡ್ರೋನ್​ಗಳ ಪೈಕಿ ಒಂದರ ಅವಶೇಷದಲ್ಲಿ ರಿಜಾನ್​ಗಾಗಿ ಎಂಬ ಪ್ರತೀಕಾರದ ಸಂದೇಶವಿದೆ, ಕಳೆದ ವಾರ ಉಕ್ರೇನ್ ಪಡೆಗಳು ಡ್ರೋನ್ ದಾಳಿಯಲ್ಲಿ ಹಾನಿಗೀಡಾದ ರಷ್ಯಾದ ಎರಡು ವಾಯುನೆಲೆಯಲ್ಲಿ ರಿಜಾನ್ ಕೂಡ ಇತ್ತು.

ರಕ್ಷಣಾತ್ಮಕ ಕ್ರಮವಾಗಿ ಉಕ್ರೇನ್​ನ ಪ್ರತಿ ದಾಳಿ ನಡೆಸಿ 13 ಡ್ರೋನ್​ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ದೊಡ್ಡ ಹಾನಿ ಸಾಧ್ಯತೆಯನ್ನು ತಡೆಯಲಾಗಿದೆ. ಕೆರ್ಸಾನ್ ನಗರದ ಆಡಳಿತ ಕಚೇರಿ ಕಟ್ಟಡದ ಮೇಲೂ ರಷ್ಯಾದಿಂದ ದಾಳಿ ನಡೆದಿದ್ದು, ಆರು ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ