AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lyon fire ಫ್ರಾನ್ಸ್​​​ನ ಲಿವೋನ್ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ದುರಂತ, 5 ಮಕ್ಕಳು ಸೇರಿದಂತೆ 10 ಮಂದಿ ಸಾವು

ಇಲ್ಲಿಯವರೆಗೆ ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಲಿವೋನ್ ಮತ್ತು ರೋನ್ ಪ್ರದೇಶದ ಸ್ಥಳೀಯ ಪ್ರಾಧಿಕಾರ ತಿಳಿಸಿದೆ. ಸುಮಾರು 170 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

Lyon fire ಫ್ರಾನ್ಸ್​​​ನ ಲಿವೋನ್ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ದುರಂತ, 5 ಮಕ್ಕಳು ಸೇರಿದಂತೆ 10 ಮಂದಿ ಸಾವು
ಫ್ರಾನ್ಸ್ ನಲ್ಲಿ ಬೆಂಕಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Dec 16, 2022 | 2:13 PM

Share

ಪ್ಯಾರಿಸ್: ಫ್ರೆಂಚ್ ನಗರದ ಲಿವೋನ್ ಬಳಿಯ ವಾಲ್ಕ್ಸ್-ಎನ್-ವೆಲಿನ್‌ನಲ್ಲಿರುವ (Vaulx-en-Velin) ವಸತಿ ಕಟ್ಟಡದಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ದುರಂತ (Fire Accident)ಸಂಭವಿಸಿದ್ದು ಐದು ಮಕ್ಕಳು ಸೇರಿದಂತೆ ಹತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. ಇಲ್ಲಿಯವರೆಗೆ ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಲಿವೋನ್ ಮತ್ತು ರೋನ್ ಪ್ರದೇಶದ ಸ್ಥಳೀಯ ಪ್ರಾಧಿಕಾರ ತಿಳಿಸಿದೆ. ಸುಮಾರು 170 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.ಶುಕ್ರವಾರ ಮುಂಜಾನೆ ವಾಲ್ಕ್ಸ್-ಎನ್-ವೆಲಿನ್‌ನಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ದುರಂತ ಸಂಭವಿಸಿದ ಜಾಗದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಬೋರ್ನ್ ಪ್ರದೇಶದ ನಗರಗಳು ಮತ್ತು ವಸತಿ ಸಚಿವ ಪ್ರತಿನಿಧಿ ಒಲಿವಿಯರ್ ಕ್ಲೈನ್ ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದು ಸಾವಿನ ಸಂಖ್ಯೆ  ನಡುಕವುಂಟು ಮಾಡುತ್ತದೆ ಎಂದಿದ್ದಾರೆ.  ಬೆಂಕಿಯ ಕಾರಣ ಇನ್ನೂ ತಿಳಿದಿಲ್ಲ ಎಂದು ಆಂತರಿಕ ಸಚಿವ ಗೆರಾರ್ಡ್ ಡಾರ್ಮಾನಿನ್ ಹೇಳಿದ್ದಾರೆ. ಅದೇ ವೇಳೆ “ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ” ಜನರನ್ನು ರಕ್ಷಿಸಿದ ಅಗ್ನಿಶಾಮಕ ದಳದ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.  ಸಾವನ್ನಪ್ಪಿದ ಮಕ್ಕಳೆಲ್ಲರೂ ಮೂರರಿಂದ 15 ವರ್ಷದೊಳಗಿನವರು ಎಂದು ಅವರು ಹೇಳಿದರು.

ಬೆಂಕಿಯ ಕಿಡಿಗೆ ಕಾರಣವೇನು ಎಂಬುದರ ಕುರಿತು ವಿಚಾರಣೆಯನ್ನು ಶುಕ್ರವಾರದ ನಂತರ ಪ್ರಾರಂಭಿಸಲಾಗುವುದು ಎಂದು  ಡಾರ್ಮಾನಿನ್ ಹೇಳಿದ್ದಾರೆ.ನಾನು ಕಿರುಚಾಟದಿಂದ ಎಚ್ಚರಗೊಂಡಿದ್ದೇನೆ … ನಾವು ಜನರಿಗೆ ಸಹಾಯ ಮಾಡಲು ಬಯಸಿದ್ದೆವು. ಹೊಗೆದಟ್ಟವಾಗಿತ್ತು. ನಾನು ಸತ್ತ ಮಹಿಳೆಯನ್ನು ನೋಡಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಲೆ ಪ್ರೋಗ್ರೆಸ್ ಡಿ ಲಿಯಾನ್ ಪತ್ರಿಕೆಗೆ ಹೇಳಿದ್ದಾರೆ.

ಇದನ್ನೂ ಓದಿ:ಥಾಯ್ಲೆಂಡ್​​ನ ರಾಜಕುಮಾರಿ ಬಜ್ರಕಿತಿಯಾಭಾಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಚಿಂತಾಜನಕ

ನಾನು ನನ್ನ ಮಗುವಿಗೆ ಶಾಲೆಗೆ ಹೋಗಬೇಡ ಎಂದು ಹೇಳಿದ್ದೇನೆ, ಅವನು ಆಘಾತಕ್ಕೊಳಗಾಗಿದ್ದಾನೆ. ಅದು ಅವನಿಗೆ ಆಘಾತವನ್ನುಂಟುಮಾಡಿತು, ಅಂತಹ ಕಿರುಚಾಟಗಳು, ಭಯಾನಕ ಕಿರುಚಾಟಗಳು. ನನ್ನ ಕಾಲುಗಳು ನಡುಗುತ್ತಿವೆ ಎಂದು ಇನ್ನೊಬ್ಬ ನೆರೆಹೊರೆಯವರು ಹೇಳಿದ್ದಾರೆ.

ಬೆಂಕಿ ಕಾಣಿಸಿಕೊಂಡ ಫ್ಲಾಟ್‌ಗಳ ಬ್ಲಾಕ್ ಲಿಯಾನ್ ಉಪನಗರಗಳಲ್ಲಿನ ವಸತಿ ಯೋಜನೆಯ ಭಾಗವಾಗಿದೆ. ಬೆಂಕಿ ಮೇಲ್ಭಾಗಕ್ಕೆ ಹರಡುವ ಮೊದಲು ನೆಲ ಮಹಡಿಯಲ್ಲಿ ಕಾಣಿಸಿಕೊಂಡಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮತ್ತಷ್ಟು ವಿದೇಶ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Fri, 16 December 22