AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಯ್ಲೆಂಡ್​​ನ ರಾಜಕುಮಾರಿ ಬಜ್ರಕಿತಿಯಾಭಾಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಚಿಂತಾಜನಕ

ಕುಸಿದುಬಿದ್ದ ಕೂಡಲೇ, ರಾಜಕುಮಾರಿ ಬಜ್ರಕಿತಿಯಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ತಕ್ಷಣದ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ನಲ್ಲಿ ಬ್ಯಾಂಕಾಕ್‌ಗೆ ಕರೆದೊಯ್ಯಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅರಮನೆಯ ಮೂಲಗಳು ಹೇಳಿವೆ.

ಥಾಯ್ಲೆಂಡ್​​ನ ರಾಜಕುಮಾರಿ ಬಜ್ರಕಿತಿಯಾಭಾಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಚಿಂತಾಜನಕ
ರಾಜಕುಮಾರಿ ಬಜ್ರಕಿತಿಯಾಭಾ Image Credit source: AFP
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 16, 2022 | 12:53 PM

Share

ಥಾಯ್ಲೆಂಡ್‌ನ (Thailand) ಸಿಂಹಾಸನದ ಉತ್ತರಾಧಿಕಾರಿ, ರಾಜಕುಮಾರಿ ಬಜ್ರಕಿತಿಯಾಭಾ (Princess Bajrakitiyabha) ಹೊರಗೆ ಹೋಗಿದ್ದಾಗ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ರಾಜಕುಮಾರಿ ಬಜ್ರಕಿತಿಯಾಭಾ ಅವರು ಬ್ಯಾಂಕಾಕ್‌ನ ಈಶಾನ್ಯ ಪ್ರದೇಶದಲ್ಲಿ ತನ್ನ ನಾಯಿಗಳಿಗೆ ತರಬೇತಿ ನೀಡುತ್ತಿದ್ದಾಗ ಹೃದಯಾಘಾತವಾಗಿದೆ (heart attack). ಕುಸಿದುಬಿದ್ದ ಕೂಡಲೇ, ರಾಜಕುಮಾರಿ ಬಜ್ರಕಿತಿಯಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ತಕ್ಷಣದ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ನಲ್ಲಿ ಬ್ಯಾಂಕಾಕ್‌ಗೆ ಕರೆದೊಯ್ಯಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅರಮನೆಯ ಮೂಲಗಳು ಹೇಳಿವೆ. ಥಾಯ್ ರಾಜ ವಜಿರಾಲಾಂಗ್‌ಕಾರ್ನ್ ಅವರು ತಮ್ಮ 44 ವರ್ಷದ ಮಗಳೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದು, ಥಾಯ್ ರಾಜಮನೆತನವು ರಾಜಕುಮಾರಿಯ ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ರಾಜಕುಮಾರಿ ಬಜ್ರಕಿತಿಯಾಭಾ ಕುಸಿದುಬಿದ್ದ ತಕ್ಷಣ, ಒಂದು ಗಂಟೆಗೂ ಹೆಚ್ಚು ಕಾಲ CPR ಮಾಡಲಾಯಿತು. ಆದರೆ ಪ್ರಯತ್ನಗಳು ವಿಫಲವಾದವು ಎಂದು ದಿ ಮಿರರ್ ವರದಿ ಮಾಡಿದೆ. ಆಕೆಗೆ ಆಮ್ಲಜನಕ ಬೆಂಬಲ ನೀಡಿದ್ದು ಆಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿಪಿಆರ್ ಅನ್ನು ಒಂದು ಗಂಟೆಗೂ ಹೆಚ್ಚು ಕಾಲ ನಡೆಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆಯಿಲ್ಲ. ಆಕೆಯನ್ನು ಇಸಿಎಂಒ ಯಂತ್ರದಲ್ಲಿ ಇರಿಸಲಾಗಿದೆ ಎಂದು ಕೆಲವು ಮೂಲಗಳು ಹೇಳುತ್ತಿವೆ, ಇದರರ್ಥ ಆಕೆ ಮರಣಹೊಂದಿದ್ದಾಳೆ ಅಥವಾ ಕೃತಕವಾಗಿ ಆಕೆಯನ್ನು ಜೀವಂತವಾಗಿಡಲಾಗಿದೆ ಎಂದು ಪತ್ರಕರ್ತ ಆಂಡ್ರ್ಯೂ ಮ್ಯಾಕ್‌ಗ್ರೆಗರ್ ಮಾರ್ಷಲ್ ಟ್ವೀಟ್ ಮಾಡಿದ್ದಾರೆ.

ಈ ಘಟನೆಗಳು ಥಾಯ್ ರಾಜಪ್ರಭುತ್ವಕ್ಕೆ ಭಾರಿ ಪರಿಣಾಮಗಳನ್ನು ಬೀರುತ್ತವೆ.ಏಕೆಂದರೆ ಬಜ್ರಕಿತಿಯಾಭಾ ಅವರು ಮುಂದಿನ ರಾಣಿಯಾಗುತ್ತಾರೆ ಅಥವಾ ಆಟಿಸಂ ಹೊಂದಿರುವ ಅವರ ಕಿರಿಯ ಮಲಸಹೋದರ ದಿಪಾಂಗ್‌ಕಾರ್ನ್‌ಗೆ ರಾಜಪ್ರತಿನಿಧಿಯಾಗುತ್ತಾರೆ. ಯಾಕೆಂದರೆ ಆತನಿಗೆ ಏಕಾಂಗಿಯಾಗಿ ಅಧಿಕಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಾರ್ಷಲ್ ಹೇಳಿದ್ದಾರೆ

ಇದನ್ನೂ ಓದಿ:Uganda: ಹಸಿದ ಹಿಪ್ಪೊವೊಂದು 2-ವರ್ಷದ ಬಾಲಕನನ್ನು ಅನಾಮತ್ತಾಗಿ ನುಂಗಿದ ಬಳಿಕ ಅವನನ್ನು ಜೀವಂತವಾಗಿ ವಾಂತಿ ಮಾಡಿತು!

ರಾಜಕುಮಾರಿ ಬಜ್ರಕಿತಿಯಾಭಾ ಥಾಯ್ ರಾಜನ ಮೊದಲ ಪತ್ನಿ ರಾಜಕುಮಾರಿ ಸೋಮಸಾವಲಿ ಜತೆಗಿನ ದಾಂಪತ್ಯದಲ್ಲಿ ಹುಟ್ಟಿದ ಹಿರಿಯ ಮಗಳು. ರಾಜಕುಮಾರಿ ಬಜ್ರಕಿತಿಯಾಭಾ ಅವರು ರಾಜನ ವೈಯಕ್ತಿಕ ಸಿಬ್ಬಂದಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದಾರೆ ಮತ್ತು 2016 ರಿಂದ ಅವರ ಆಪ್ತ ವಲಯದ ಭಾಗವಾಗಿದ್ದಾರೆ. ಸಿಂಹಾಸನದ ಅಧಿಕೃತ ಉತ್ತರಾಧಿಕಾರಿಯನ್ನು ಥಾಯ್ ಕುಲಸಚಿವರು ಇನ್ನೂ ಘೋಷಿಸದಿದ್ದರೂ, ರಾಜಕುಮಾರಿ ಬಜ್ರಕಿತಿಯಾಭಾ ಅವರ ಹಿರಿತನ ಮತ್ತು ರಾಜ್ಯದಲ್ಲಿನ ಸ್ಥಾನದಿಂದಾಗಿ ಅವರೇ ಸಿಂಹಾಸನದ ಉತ್ತರಾಧಿಕಾರಿ ಎಂದು ಹೇಳಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ