100ಕ್ಕೂ ಹೆಚ್ಚು ನಾವಿಕರನ್ನು ಹೊತ್ತೊಯ್ಯುತ್ತಿದ್ದ ಹಡಗು ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಡೆ

ಥಾಯ್ ನೌಕಾಪಡೆಯ 100ಕ್ಕೂ ನಾವಿಕರು ಹೊತ್ತೊಯ್ಯುತ್ತಿದ್ದ ಹಡಗು ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಿದೆ. 100ಕ್ಕೂ ಹೆಚ್ಚು ನಾವಿಕರು ಸಮುದ್ರ ನೀರಿನಲ್ಲಿ ಮುಳುಗಿದ್ದು, ಇದೀಗ ನಾವಿಕರನ್ನು ನೀರಿನಿಂದ ರಕ್ಷಿಸಲು ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ.

100ಕ್ಕೂ ಹೆಚ್ಚು ನಾವಿಕರನ್ನು ಹೊತ್ತೊಯ್ಯುತ್ತಿದ್ದ ಹಡಗು ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಡೆ
A ship carrying more than 100 sailors sank in the Gulf of Thailand
Updated By: ಅಕ್ಷಯ್​ ಪಲ್ಲಮಜಲು​​

Updated on: Dec 19, 2022 | 10:26 AM

ಥಾಯ್ಲೆಂಡ್: ಥಾಯ್ (thailand) ನೌಕಾಪಡೆಯ 100ಕ್ಕೂ ನಾವಿಕರು ಹೊತ್ತೊಯ್ಯುತ್ತಿದ್ದ ಹಡಗು (ship) ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಿದೆ. 100ಕ್ಕೂ ಹೆಚ್ಚು ನಾವಿಕರು ಸಮುದ್ರ ನೀರಿನಲ್ಲಿ ಮುಳುಗಿದ್ದು, ಇದೀಗ ನಾವಿಕರನ್ನು ನೀರಿನಿಂದ ರಕ್ಷಿಸಲು ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಬೆಳಗಿನ ಜಾವದ ವೇಳೆ 75 ನಾವಿಕರು ರಕ್ಷಿಸಲಾಗಿದ್ದು, 31 ಮಂದಿ ಇನ್ನೂ ನೀರಿನಲ್ಲಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.

ಬಲವಾದ ಗಾಳಿಯು ಸಮುದ್ರದ ನೀರಿಗೆ ಬಿಸಿದ ನಂತರ HTMS ಸುಖೋಥೈ ಕಾರ್ವೆಟ್ ಹಡಗಿನ ಮೇಲೆ ಅಪ್ಪಿಳಿಸಿತ್ತು ಮತ್ತು ಇದು ಭಾನುವಾರ ಸಂಜೆ ಹಡಗಿನ ವಿದ್ಯುತ್ ಸಂಪರ್ಕ ಕಡಿತಗೊಳಿತು. ರಾಯಲ್ ಥಾಯ್ ನೌಕಾಪಡೆಯು ಮೂರು ಯುದ್ಧನೌಕೆಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಮೊಬೈಲ್ ಪಂಪಿಂಗ್ ಯಂತ್ರಗಳೊಂದಿಗೆ ರವಾನಿಸಿತು, ನಾವಿಕರನ್ನು ಸಮುದ್ರದಿಂದ ಹೊರ ತೆಗೆದುಹಾಕಲು ಇನ್ನೊಂದು ಪರ್ಯಯ ಹಡಗುಗಳನ್ನು ಬಳಸಲಾಗಿತ್ತು ಆದರೆ ಬಲವಾದ ಗಾಳಿಯ ಕಾರಣ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಥಾಯ್ಲೆಂಡ್​ನಲ್ಲಿ ಗುಂಡಿನ ದಾಳಿ; 22 ಮಕ್ಕಳು ಸೇರಿದಂತೆ 34 ಮಂದಿ ಸಾವು

ವಿದ್ಯುತ್ ಕಡಿತದಿಂದ ಹೆಚ್ಚಿನ ಸಮುದ್ರದ ನೀರು ಹಡಗಿನೊಳಗೆ ಹರಿಯುವಂತೆ ಮಾಡಿತು, ಇದರಿಂದ ಹಡಗು ಮುಳಿಗಿದೆ ಎಂದು ಹೇಳಿದ್ದಾರೆ. ಯುದ್ಧನೌಕೆಯು ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಬಂಗ್‌ಸಫನ್ ಜಿಲ್ಲೆಯ ಪಿಯರ್‌ನಿಂದ 32 ಕಿಲೋಮೀಟರ್ (20 ಮೈಲುಗಳು) ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಉತ್ತರ ಮತ್ತು ಮಧ್ಯ ಥೈಲ್ಯಾಂಡ್​ನಲ್ಲಿ ಈ ವರ್ಷ ಅತ್ಯಂತ ಶೀತ ತಾಪಮಾನವನ್ನು ನೋಡುತ್ತಿರುವಾಗ ಈ ಘಟನೆ ನಡೆದಿದೆ. ದಕ್ಷಿಣ ಥೈಲ್ಯಾಂಡ್ ಇತ್ತೀಚಿನ ದಿನಗಳಲ್ಲಿ ಚಂಡಮಾರುತಗಳು ಮತ್ತು ಪ್ರವಾಹವನ್ನು ಸಂಭವಿಸುತ್ತಿದೆ. ಈ ಘಟನೆಯ ನಂತರ ಎಲ್ಲ ಹಡಗುಗಳು ದಡದಲ್ಲಿ ಇರುವಂತೆ ಎಚ್ಚರಿಕೆ ನೀಡಲಾಯಿತು.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Mon, 19 December 22