ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ಸ್ನೇಹಿತೆ ತಂದೆಯ ಮದುವೆ ಪ್ರಸ್ತಾಪ ನಿರಾಕರಿಸಿದ ಹದಿಹರೆಯದ ಯುವತಿಯ ಕೂದಲು, ಹುಬ್ಬು ಬೋಳಿಸಿ ಲೈಂಗಿಕ ದೌರ್ಜನ್ಯ!
ಸಂತ್ರಸ್ತೆ ನೀಡಿರುವ ಹೇಳಿಕೆ ಪ್ರಕಾರ ಫ್ಯಾಕ್ಟರಿಯೊಂದರ ಮಾಲೀಕನಾಗಿರುವ ಅವಳ ಸ್ನೇಹಿತೆಯ ತಂದೆ ವ್ಯಕ್ತಿ ಮದುವೆಯಾಗುವಂತೆ ಅವಳ ದುಂಬಾಲು ಬಿದ್ದಿದ್ದ. ಅದರೆ ಈ ಯುವತಿ ಅವನ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಅವಳನ್ನು ನಿಂದಿಸಿ, ಕಿರುಕುಳ ನೀಡಿದ್ದಾರೆ ಮತ್ತು ತಾವು ಅವಳ ಎಸಗಿದ ದುಷ್ಕೃತ್ಯಗಳ ವಿಡಿಯೋ ಮಾಡಿದ್ದಾರೆ.
ಫೈಸಲಾಬಾದ್: ಅಮಾನವೀಯ ಮತ್ತು ಉಲ್ಲೇಖಿಸಲು ಸಹ ಹೇವರಿಕೆ ಹುಟ್ಟಿಸುವ ಘಟನೆಯೊಂದು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಫೈಸಲಾಬಾದ್ ನಲ್ಲಿ (Faisalabad) ನಡೆದಿದೆ. ತನ್ನ ತಂದೆ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ಹದಿಹರೆಯದ (teenage) ಯುವತಿಯೊಬ್ಬಳಿಗೆ ಕಿರುಕುಳ ನೀಡಿ, ಅಪಮಾನಗೊಳಿಸಿದ್ದಲ್ಲದೆ ಅವಳ ಮೇಲೆ ಲೈಂಗಿಕ ದೌರ್ಜನ್ಯ (sexual assault) ನಡೆಸಲಾಗಿದೆ. ಪಾಕಿಸ್ತಾನ ಮಾಧ್ಯಮಗಳ ವರದಿಯ ಪ್ರಕಾರ ಆ ವ್ಯಕ್ತಿ ಸಂತ್ರಸ್ತೆಯ ಗೆಳತಿ ತಂದೆಯಂತೆ!
ಯುವತಿಯ ಮೇಲೆ ಆಗಸ್ಟ್ 9 ರಂದು ನಡೆಸಿದ ದೌರ್ಜನ್ಯದ ವಿಡಿಯೋ ನಿನ್ನೆಯಿಂದ ಅಂದರೆ ಬುಧವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಅಗಿದೆ. ವಿಡಿಯೋನಲ್ಲಿ ಯುವತಿಯ ಮೇಲೆ ನಡೆಸಿದ ದೌರ್ಜನ್ಯ ಸೆರೆಯಾಗಿದ್ದು ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ಧ್ವನಿ ಕೇಳಿಸುತ್ತದೆ.
ಯುವತಿಯ ಮೇಲೆ ಹಲ್ಲೆ ನಡೆಸಿದ ದುರುಳರು, ಅವಳಿಂದ ಬೂಟು ನೆಕ್ಕಿಸಿ, ತಲೆಗೂದಲು ಕಟ್ ಮಾಡಿ ಹುಬ್ಬುಗಳನ್ನು ಬೋಳಿಸಿದ್ದಾರೆ.
ಸಂತ್ರಸ್ತೆ ನೀಡಿರುವ ಹೇಳಿಕೆ ಪ್ರಕಾರ ಫ್ಯಾಕ್ಟರಿಯೊಂದರ ಮಾಲೀಕನಾಗಿರುವ ಅವಳ ಸ್ನೇಹಿತೆಯ ತಂದೆ ವ್ಯಕ್ತಿ ಮದುವೆಯಾಗುವಂತೆ ಅವಳ ದುಂಬಾಲು ಬಿದ್ದಿದ್ದ. ಅದರೆ ಈ ಯುವತಿ ಅವನ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಅವಳನ್ನು ನಿಂದಿಸಿ, ಕಿರುಕುಳ ನೀಡಿದ್ದಾರೆ ಮತ್ತು ತಾವು ಅವಳ ಎಸಗಿದ ದುಷ್ಕೃತ್ಯಗಳ ವಿಡಿಯೋ ಮಾಡಿದ್ದಾರೆ. ಅವಳ ಸ್ನೇಹಿತೆಯೂ ತನ್ನ ತಂದೆಯ ಮದುವೆ ಪ್ರಸ್ತಾಪ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಳಂತೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಈ ಅಮಾನವೀಯ ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಮುಖ ಅರೋಪಿ (ಮದುವೆ ಪ್ರಸ್ತಾಪ ಮುಂದಿಟ್ಟ ಸ್ನೇಹಿತೆಯ ತಂದೆ), ಒಬ್ಬ ಮನೆಗೆಲಸದಾಕೆ ಮತ್ತು ಅವನ ಫ್ಯಾಕ್ಟರಿಯ ಒಬ್ಬ ನೌಕರ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿದ್ದಾರೆ.
ಎಲ್ಲ ಬಂಧಿತರನ್ನು ಮ್ಯಾಜಿಸ್ಟ್ರೇಟ್ ಒಬ್ಬರೆದುರು ಹಾಜರುಪಡಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ. ಬಂಧಿತರಲ್ಲಿ ಪ್ರಮುಖ ಆರೋಪಿಯ ಹೆಂಡತಿಯೂ ಸೇರಿದ್ದು ವಿಡಿಯೋನಲ್ಲಿ ಕೇಳಿಸುವ ಹೆಣ್ಣಿನ ಧ್ವನಿ ಅವಳದ್ದೇ ಎನ್ನಲಾಗಿದೆ.
ಪೊಲೀಸರು ಪ್ರಮುಖ ಅರೋಪಿಯ ಮನೆ ಶೋಧಿಸಿದಾಗ ಅವನ ಮನೆಯಲ್ಲಿ ಮದ್ಯದ ಬಾಟಲಿ ಮತ್ತು ಆಯುಧಗಳು ಪತ್ತೆಯಾಗಿದ್ದರಿಂದ ಅವನ ವಿರುದ್ಧ ಫೈಸಲಾಬಾದ್ ನ ಖುರಿಯನ್ ವಾಲಾ ಪೊಲೀಸ್ ಠಾಣೆಯಲ್ಲಿ ಒಂದು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.