Shocking News: ಪ್ರೇಯಸಿಯ ಬ್ಯಾಗ್‌ನೊಳಗೆ ಮೂತ್ರ ಮಾಡಿದ ಪ್ರೇಮಿಗೆ 90,000 ರೂ. ದಂಡ!
ಆ ವ್ಯಕ್ತಿಯ ಕೋಪ ಶಮನವಾದ ಬಳಿಕ ಆ ಬ್ಯಾಗ್‌ನೊಳಗೆ ಡಿಯೋಡ್ರಂಟ್ ಸುರಿದು ತನ್ನ ಕೃತ್ಯವನ್ನು ಮುಚ್ಚಿಡಲು ಯತ್ನಿಸಿದ್ದ. ಆದರೆ, ಲ್ಯಾಬ್ ಪರೀಕ್ಷೆಯ ಫಲಿತಾಂಶ ಮನುಷ್ಯನ ಡಿಎನ್ಎ ಜೊತೆ ಹೊಂದಿಕೆಯಾಯಿತು.
ಲವ್ ಫೇಲ್ಯೂರ್ (Love Failure) ಆದಾಗ ಕೆಲವರು ಹುಚ್ಚರಂತಾಗುತ್ತಾರೆ. ಇಲ್ಲೊಬ್ಬ ಭಗ್ನಪ್ರೇಮಿ ತನ್ನ ಮಾಜಿ ಪ್ರೇಯಸಿಯ ಜೊತೆ ಜಗಳವಾಡಿದ ನಂತರ ಕೋಪದಿಂದ ಆಕೆಯ ಲಕ್ಷಾಂತರ ರೂ. ಮೌಲ್ಯದ ಲೂಯಿಸ್ ವಿಟಾನ್ (Louis Vuitton) ಬ್ಯಾಗ್ ಒಳಗೆ ಮೂತ್ರ ವಿಸರ್ಜನೆ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಆಕೆ ಕೋರ್ಟ್ ಮೆಟ್ಟಿಲೇರಿದ್ದಳು. ಐಷಾರಾಮಿ ಬ್ಯಾಗ್ ಮೇಲೆ ಮೂತ್ರ ಮಾಡಿದ ತಪ್ಪಿಗೆ ಇದೀಗ ಸಿವಿಲ್ ಕೋರ್ಟ್ ಆ 31 ವರ್ಷದ ವ್ಯಕ್ತಿಗೆ 1.5 ಮಿಲಿಯನ್ ದಕ್ಷಿಣ ಕೊರಿಯನ್ ವನ್ (90,000 ರೂ.) ಪಾವತಿಸಲು ಆದೇಶಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಆ ವ್ಯಕ್ತಿ ತನ್ನ ಪ್ರೇಯಸಿಯೊಂದಿಗೆ ತನ್ನ ಮನೆಯಲ್ಲಿ ಜಗಳವಾಡಿದ್ದ. ಆಗ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆ ಯುವತಿ ವಿನಾಕಾರಣ ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾಳೆ, ಅದರಿಂದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ವಿಷಯದ ಬಗ್ಗೆ ಅವರಿಬ್ಬರ ನಡುವೆ ವಾದ ಉಂಟಾಗಿತ್ತು. ಅವರಿಬ್ಬರ ವಾದ ಜಗಳಕ್ಕೆ ತಿರುಗಿ, ಇಬ್ಬರೂ ಹೊಡೆದಾಡಿಕೊಂಡಿದ್ದರು. ಈ ವೇಳೆ ಆ ವ್ಯಕ್ತಿ ಬೆಡ್ರೂಂಗೆ ಹೋಗಿ ಆಕೆಯ ಲಕ್ಷಾಂತರ ರೂ. ಮೌಲ್ಯದ ದುಬಾರಿ ಲೂಯಿಸ್ ವಿಟಾನ್ ಬ್ಯಾಗ್ ತೆಗೆದುಕೊಂಡು ಬಂದು, ಪ್ಯಾಂಟ್ ಬಿಚ್ಚಿ ಅವಳ ಬ್ಯಾಗ್ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ.
ಇದನ್ನೂ ಓದಿ: ‘ಬಾಹುಬಲಿ’ ದೃಶ್ಯ ಮರುಸೃಷ್ಟಿ ಮಾಡಿದ ಕಾಜಲ್ ಅಗರ್ವಾಲ್; ವೈರಲ್ ಆಯ್ತು ಹೊಸ ಫೋಟೋ
ಈ ಘಟನೆ ಕುರಿತು ಆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಆ ವ್ಯಕ್ತಿ ಆಕೆಯ ಆರೋಪಗಳನ್ನು ನಿರಾಕರಿಸಿದರು. ತಾನು ಕೋಪದಿಂದ ಮೂತ್ರ ವಿಸರ್ಜಿಸುವಂತೆ ನಟಿಸಿದ್ದೆ. ಆದರೆ, ಹಾಗೇನೂ ಮಾಡಲಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೂ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೋರೆನ್ಸಿಕ್ ಸೈನ್ಸಸ್ ಆ ಬ್ಯಾಗ್‌ನ ಒಳಭಾಗದಿಂದ ಮಾದರಿಗಳನ್ನು ಪರೀಕ್ಷಿಸಿದಾಗ ಅದರೊಳಗೆ ಮೂತ್ರದ ಅಂಶ ಇರುವುದು ದೃಢಪಟ್ಟಿತ್ತು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಆ ವ್ಯಕ್ತಿಯ ಕೋಪ ಶಮನವಾದ ಬಳಿಕ ಆ ಬ್ಯಾಗ್‌ನೊಳಗೆ ಡಿಯೋಡ್ರಂಟ್ ಸುರಿದು ತನ್ನ ಕೃತ್ಯವನ್ನು ಮುಚ್ಚಿಡಲು ಯತ್ನಿಸಿದ್ದ. ಆದರೆ, ಲ್ಯಾಬ್ ಪರೀಕ್ಷೆಯ ಫಲಿತಾಂಶ ಮನುಷ್ಯನ ಡಿಎನ್ಎ ಜೊತೆ ಹೊಂದಿಕೆಯಾಯಿತು. ಇದರಿಂದಾಗಿ ಆತನ ಮಾಜಿ ಪ್ರೇಯಸಿ ತನಗೆ ಪರಿಹಾರ ಕೊಡಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಳು.
ಇದನ್ನೂ ಓದಿ:Viral Video: ಸ್ವಾತಂತ್ರ್ಯೋತ್ಸವದ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಪೊಲೀಸರ ವಿಡಿಯೋ ವೈರಲ್; ಆಮೇಲೇನಾಯ್ತು? ಈ ಕುರಿತು ವಿಚಾರಣೆ ನಡೆಸಿದ ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಆ ಯುವತಿಯ ಹಾಳಾದ ಡಿಸೈನರ್ ಹ್ಯಾಂಡ್‌ಬ್ಯಾಗ್‌ಗೆ ಪರಿಹಾರವಾಗಿ 90,000 ರೂ. ಹಣವನ್ನು ಪಾವತಿಸಲು ಆ ವ್ಯಕ್ತಿಗೆ ಆದೇಶಿಸಿತು. ಇದು ಆರೋಪಿಯ ಮೊದಲ ಅಪರಾಧವಾಗಿರುವುದರಿಂದ ಕಡಿಮೆ ಶಿಕ್ಷೆಯನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.