ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್​ಪ್ಲೇಟ್​ ಇರುವ ಜೀಪ್ ಪತ್ತೆ

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್ ಪ್ಲೇಟ್​ ಇರುವ ಜೀಪ್ ಪತ್ತೆಯಾಗಿದೆ. ನೇಪಾಳ ಪೊಲೀಸರು ಚಿತ್ವಾನ್ ಜಿಲ್ಲೆಯಲ್ಲಿರುವ ತ್ರಿಶೂಲಿ ನದಿಯಲ್ಲಿ ಜೀಪ್​ನ್ನು ಪತ್ತೆ ಮಾಡಿದ್ದಾರೆ. ವಾಹನವೊಂದು ನದಿಗೆ ಬಿದ್ದಿರುವ ಶಂಕೆಯ ಮೇರೆಗೆ ಹುಡುಕಾಡಿದಾಗ ಜೀಪ್ ಕಂಡುಬಂದಿದೆ.

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್​ಪ್ಲೇಟ್​ ಇರುವ ಜೀಪ್ ಪತ್ತೆ
ನದಿ

Updated on: Jan 16, 2024 | 10:15 AM

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್ ಪ್ಲೇಟ್​ ಇರುವ ಜೀಪ್ ಪತ್ತೆಯಾಗಿದೆ. ನೇಪಾಳ ಪೊಲೀಸರು ಚಿತ್ವಾನ್ ಜಿಲ್ಲೆಯಲ್ಲಿರುವ ತ್ರಿಶೂಲಿ ನದಿಯಲ್ಲಿ ಜೀಪ್​ನ್ನು ಪತ್ತೆ ಮಾಡಿದ್ದಾರೆ. ವಾಹನವೊಂದು ನದಿಗೆ ಬಿದ್ದಿರುವ ಶಂಕೆಯ ಮೇರೆಗೆ ಹುಡುಕಾಡಿದಾಗ ಜೀಪ್ ಕಂಡುಬಂದಿದೆ.

ಸುತ್ತಮುತ್ತಲಿನ ಸ್ಥಳೀಯರು ವಾಹನವೊಂದು ನದಿಗೆ ಬಿದ್ದಿರುವ ಶಂಕೆಯ ಮೇರೆಗೆ ಪೊಲೀಸರಿಗೆ ಕರೆ ಮಾಡಿದ್ದರು. ನಂತರ ಡೈವರ್​ಗಳ ಸಮೇತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಜೀಪ್ ರಸ್ತೆಯಿಂದ ನೇರವಾಗಿ 85 ಮೀಟರ್​ ಆಳದ ನದಿಗೆ ಬಿದ್ದಿದೆ,

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: Nepal Accident: ನೇಪಾಳ ರಸ್ತೆ ಅಪಘಾತ, 6 ಮಂದಿ ಭಾರತೀಯ ಯಾತ್ರಾರ್ಥಿಗಳು ಸೇರಿ 7 ಮಂದಿ ಸಾವು

ಭಾಲುಬಾಂಗ್​ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಕೇವಲ 7 ಮಂದಿ ಗುರುತು ಮಾತ್ರ ಪತ್ತೆಯಾಗಿದೆ.
ಪ್ಯಾಸೆಂಜರ್ ಬಸ್ ಬಂಕೆಯ ನೇಪಾಲ್​ಗಂಜ್​ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು.

ಆದರೆ ಆಯತಪ್ಪಿ ಸೇತುವೆಯಿಂದ ಕೆಳಗೆ ರಾಪ್ತಿ ನದಿಗೆ ಬಿದ್ದಿತ್ತು. ಇಬ್ಬರು ಭಾರತೀಯರು ಸೇರಿದಂತೆ ಎಂಟು ಮಂದಿ ಪ್ರಯಾಣಿಕರ ಗುರುತು ಪತ್ತೆಯಾಗಿದೆ ಎಂದು ಪೊಲೀಸ್​ ಇನ್​ಸ್ಪೆಕ್ಟರ್ ಉಜ್ವಲ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us