Video: ಅಫ್ಘಾನ್​ ಮಾಜಿ ಸೇನಾ ಅಧಿಕಾರಿಗೆ ತಾಲಿಬಾನಿಗಳಿಂದ ಥಳಿತ; ದೃಶ್ಯ ನೋಡಿ ನೆಟ್ಟಿಗರ ಆಕ್ರೋಶ

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇಲ್ಲಿನ ಮಾಜಿ ಸೇನಾಧಿಕಾರಿಗಳು, ಸಿಬ್ಬಂದಿಯನ್ನು ಬಂಧಿಸಿ, ಚಿತ್ರಹಿಂಸೆ ನೀಡಿ, ಕೊಲ್ಲುತ್ತಿದ್ದಾರೆ ಎಂದು ಹ್ಯೂಮನ್​ ರೈಟ್​ ವಾಚ್​ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಹಿಂದೆ ವರದಿ ಮಾಡಿದ್ದವು.

Video: ಅಫ್ಘಾನ್​ ಮಾಜಿ ಸೇನಾ ಅಧಿಕಾರಿಗೆ ತಾಲಿಬಾನಿಗಳಿಂದ ಥಳಿತ; ದೃಶ್ಯ ನೋಡಿ ನೆಟ್ಟಿಗರ ಆಕ್ರೋಶ
ಆರ್ಮಿ ಅಧಿಕಾರಿಯನ್ನು ಥಳಿಸುತ್ತಿರುವ ದೃಶ್ಯ
Follow us
TV9 Web
| Updated By: Digi Tech Desk

Updated on:Dec 29, 2021 | 4:04 PM

ಕಾಬೂಲ್​: ತಾಲಿಬಾನಿಗಳು ಅಫ್ಘಾನಿಸ್ತಾನ (Taliban In Afghanistan)ವನ್ನು ವಶಪಡಿಸಿಕೊಂಡ ಬಳಿಕ  ಹಳೇ ಸರ್ಕಾರದ ಉದ್ಯೋಗಿಗಳಿಗೆ ಅಮ್ನೆಸ್ಟಿ (ಸಾಮಾನ್ಯ ಕ್ಷಮಾದಾನ) ಘೋಷಿಸಿದ್ದಾರೆ. ಆದರೆ ಅವರ ಜನರಲ್ ಅಮ್ನೆಸ್ಟಿ (General Amnesty)ಗೆ ವಿರುದ್ಧವಾಗಿ ಹಿಂದಿನ ಸರ್ಕಾರದ ಸೇನಾಧಿಕಾರಿಯೊಬ್ಬರಿಗೆ ತಾಲಿಬಾನಿಗಳು ವಿಪರೀತ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಇದು ತೀವ್ರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಆಗಸ್ಟ್​ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿ ಕಠಿಣ ಕಾನೂನು ಹೇರುತ್ತಿದ್ದಾರೆ. ಮಹಿಳೆಯರಿಗೆ ಸಂಬಂಧಪಟ್ಟಂತೆ ವಿವಿಧ ನಿರ್ಬಂಧ ವಿಧಿಸಲಾಗಿದೆ.  ಆದರೆ ಈಗ ಅಫ್ಘಾನ್​ ಮಾಜಿ ಸರ್ಕಾರದ ಸೇನಾಧಿಕಾರಿಯನ್ನು ಇಬ್ಬರು ತಾಲಿಬಾನಿಗಳು ಥಳಿಸುತ್ತಿರುವ ವಿಡಿಯೋ ನೋಡಿದ ಜನರು, ತಾಲಿಬಾನಿಗಳು ಹೇಳುವುದೇ ಒಂದು, ಮಾಡುವುದೇ ಒಂದು ಎಂದು ಹೇಳುತ್ತಿದ್ದಾರೆ. ತಾಜುಡೆನ್ ಸೊರೊಶ್ ಎಂಬುವರು ವಿಡಿಯೋ ಶೇರ್​ ಮಾಡಿಕೊಂಡು, ಅಫ್ಘಾನ್​ ಮಾಜಿ ಸರ್ಕಾರದ ಮಿಲಿಟರಿ ಅಧಿಕಾರಿ ರಹಮತುಲ್ಲಾ ಖಾದರಿಯವರಿಗೆ ತಾಲಿಬಾನಿಗಳು ಚಿತ್ರಹಿಂಸೆ ನೀಡುತ್ತಿರುವ ದೃಶ್ಯ ಇದು ಎಂದು ಹೇಳಿದ್ದಾರೆ. ಹಾಗೇ, ಖಾದರಿಯನ್ನು ಕಳೆದವಾರ ತಾಲಿಬಾನಿಗಳು ಬಂಧಿಸಿದ್ದರು ಎಂದೂ ತಿಳಿಸಿದ್ದಾರೆ.

ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೆಕ್ಮತುಲ್ಲಾ ಮಿರ್ಜಾದ, ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ಜನರಲ್​ ಅಮ್ನೆಸ್ಟಿ ಘೋಷಿಸಿದ್ದಾರೆ. ಅವರು ಅದಕ್ಕೆ ಬದ್ಧರಾಗಿರಬೇಕು. ಅವರು ತಾವು ಹೇಳಿದ್ದೇ ಒಂದು, ಮಾಡುವುದೇ ಮತ್ತೊಂದು ಮಾಡಿದರೆ ಜನರ ನಂಬಿಕೆ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ, ತಾಲಿಬಾನ್​ನ ಉನ್ನತ ಸ್ಥಾನದಲ್ಲಿರುವ ಸದಸ್ಯ ಅನಾಸ್​ ಹಕ್ಕಾನಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ತಾಲಿಬಾನ್ ಘೋಷಿಸಿರುವ ಸಾಮಾನ್ಯ ಕ್ಷಮಾದಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಹಂತಕ್ಕೆ ತಲುಪಬಾರದು ಎಂದಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಅನಾಸ್ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖವಾಗಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇಲ್ಲಿನ ಮಾಜಿ ಸೇನಾಧಿಕಾರಿಗಳು, ಸಿಬ್ಬಂದಿಯನ್ನು ಬಂಧಿಸಿ, ಚಿತ್ರಹಿಂಸೆ ನೀಡಿ, ಕೊಲ್ಲುತ್ತಿದ್ದಾರೆ ಎಂದು ಹ್ಯೂಮನ್​ ರೈಟ್​ ವಾಚ್​ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಹಿಂದೆ ವರದಿ ಮಾಡಿದ್ದವು. ಆದರೆ  ತಾಲಿಬಾನ್ ಇದನ್ನು ನಿರಾಕರಿಸಿತ್ತು.  ಆದರೆ ಇದೀಗ ವೈರಲ್​ ಆದ ವಿಡಿಯೋ ತಾಲಿಬಾನ್​ನ ಎಲ್ಲ ಹೇಳಿಕೆಗಳಿಗೂ ತದ್ವಿರುದ್ಧವಾಗಿದೆ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಪ್ರಮುಖ ರಾಜಕೀಯ ವಿಶ್ಲೇಷಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್​ ನಿಧನರಾಗಿ ಇಂದಿಗೆ 2 ತಿಂಗಳು

Published On - 12:53 pm, Wed, 29 December 21

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ