AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್ ನೆಲದಲ್ಲಿ ಅಮೆರಿಕ ಸೇನೆಗೆ ನೆರವು ನೀಡಿದವರಿಗೆ ಸ್ವಾಗತ ಎಂದ ಜೋ ಬೈಡೆನ್

ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಮಗೆ ನೆರವಾದವರಿಗೆ ಆಹ್ವಾನವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

ಅಫ್ಘಾನ್ ನೆಲದಲ್ಲಿ ಅಮೆರಿಕ ಸೇನೆಗೆ ನೆರವು ನೀಡಿದವರಿಗೆ ಸ್ವಾಗತ ಎಂದ ಜೋ ಬೈಡೆನ್
ಜೋ ಬೈಡನ್​
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 23, 2021 | 11:42 PM

Share

ವಾಷಿಂಗ್​ಟನ್: ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ಕಳೆದ 20 ವರ್ಷಗಳಿಂದ ನೆರವು ನೀಡಿದವರಿಗೆ ದೇಶದಲ್ಲಿ ನೆಲೆ ಕಲ್ಪಿಸುತ್ತೇವೆ. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಮಗೆ ನೆರವಾದವರಿಗೆ ಆಹ್ವಾನವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

‘ನೀವು ತಾಲಿಬಾನಿಗಳನ್ನು ನಂಬುವಿರಾ?’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋ ಬೈಡೆನ್, ‘ನಾನು ನಿಮ್ಮನ್ನೂ ಸೇರಿ ಯಾರನ್ನೂ ನಂಬುವುದಿಲ್ಲ. ನಿಮ್ಮನ್ನು ನಾನು ಪ್ರೀತಿಸುತ್ತೇನೆ. ಆದರೆ ಹೆಚ್ಚಿನ ಜನರನ್ನು ನಾನು ನಂಬುವುದಿಲ್ಲ’ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿ, ಆಡಳಿತ ನಡೆಸುವುದು ಸುಲಭದ ಮಾತಲ್ಲ. ಇದು ಸಾಧ್ಯವಾಗಲು ತಾಲಿಬಾನ್ ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ವಿವಿಧ ಗುಂಪುಗಳನ್ನು ಒಗ್ಗೂಡಿಸಬೇಕಾಗುತ್ತದೆ. ಅದು ಸಾಧ್ಯವಾಗಬೇಕಾದರೆ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಬೈಡೆನ್ ಹೇಳಿದ್ದರು.

ಇತರ ದೇಶಗಳಿಂದ ಮಾನ್ಯತೆ ಪಡೆಯಲು ಅವರು ಯತ್ನಿಸುತ್ತಿದ್ದಾರೆ. ಇತರ ದೇಶಗಳಿಗೆ ನಮಗೂ ರಾಜತಾಂತ್ರಿಕ ಸಂಬಂಧವನ್ನೂ ಸಂಪೂರ್ಣ ಕಡಿದುಕೊಳ್ಳಬೇಕು ಎಂದು ಅವರು ಬಯಸಲಿಲ್ಲ.

‘ಅಮೆರಿಕ ಪಡೆಗಳ ವಿರುದ್ಧ ತಾಲಿಬಾನ್ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಮೆರಿಕನ್ನರು ದೇಶ ಬಿಡಲು ಅವರು ಅಡ್ಡಿಪಡಿಸಲೂ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಹೇಳಲು ಆಗುವುದಿಲ್ಲ’ ಎಂದರು.

(We Welcome Afghanistan People who helped US Army in last 20 years)

ಇದನ್ನೂ ಓದಿ: ಅಮೆರಿಕದ ಕೊನೆಯ ಸೈನಿಕ ಅಫ್ಘಾನ್ ನೆಲದಲ್ಲಿ ಇರುವವರೆಗೂ ಸರ್ಕಾರ ರಚಿಸುವುದಿಲ್ಲ: ತಾಲಿಬಾನ್

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ