AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಕೊನೆಯ ಸೈನಿಕ ಅಫ್ಘಾನ್ ನೆಲದಲ್ಲಿ ಇರುವವರೆಗೂ ಸರ್ಕಾರ ರಚಿಸುವುದಿಲ್ಲ: ತಾಲಿಬಾನ್

ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮತ್ತೆ ಸೇನೆಯನ್ನು ಕಳುಹಿಸಿಕೊಟ್ಟಿವೆ.

ಅಮೆರಿಕದ ಕೊನೆಯ ಸೈನಿಕ ಅಫ್ಘಾನ್ ನೆಲದಲ್ಲಿ ಇರುವವರೆಗೂ ಸರ್ಕಾರ ರಚಿಸುವುದಿಲ್ಲ: ತಾಲಿಬಾನ್
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಯೋಧ
TV9 Web
| Edited By: |

Updated on: Aug 23, 2021 | 11:01 PM

Share

ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಧಿಯನ್ನು ವಿಸ್ತರಿಸಬೇಕು ಎಂಬ ಪ್ರಸ್ತಾವವನ್ನು ತಾಲಿಬಾನ್ ಸಾರಾಸಗಟಾಗಿ ತಿರಸ್ಕರಿಸಿದೆ. ಈ ನಡುವೆ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶ ಬಿಟ್ಟು ಹೊರಗೆ ಹೋಗಲು ಬಯಸುವವರು ಕಿಕ್ಕಿರಿದು ತುಂಬಿದ್ದಾರೆ. ಹೇಗಾದರೂ ಸರಿ ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಬೇಕು ಎಂದು ಸಾವಿರಾರು ಜನರು ಹಾತೊರೆಯುತ್ತಿದ್ದಾರೆ. ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಅಮೆರಿಕ ಸೇರಿದಂತೆ ಹಲವು ದೇಶಗಳು ಮತ್ತೆ ಸೇನೆಯನ್ನು ಕಳುಹಿಸಿಕೊಟ್ಟಿವೆ. ಅಮೆರಿಕ ಯೋಧರು ನೆಲೆ ನಿಲ್ಲುವ ಅವಧಿಯನ್ನು ಆಗಸ್ಟ್​ 31ರವರೆಗೂ ವಿಸ್ತರಿಸಬೇಕು ಎಂಬ ಒತ್ತಾಯವೂ ಪ್ರಬಲವಾಗುತ್ತಿದೆ.

ಆದರೆ ತಾಲಿಬಾನ್ ಈ ಪ್ರಸ್ತಾವವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಕುರಿತು ಸ್ಕೈ ನ್ಯೂಸ್ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್, ಒಪ್ಪಿತ ಅವಧಿಯಿಂದಾಚೆಗೂ ಅಫ್ಘಾನಿಸ್ತಾನದ ನೆಲದಲ್ಲಿ ಉಳಿಯುವುದನ್ನು ಸಹಿಸಲು ಆಗುವುದಿಲ್ಲ. ಇದು ಆಕ್ರಮಣವನ್ನು ಮುಂದುವರಿಸಿದಂತೆ ಎಂದು ಹೇಳಿದ್ದಾರೆ. ಜನರನ್ನು ಸ್ಥಳಾಂತರಿಸಲು ಅಮೆರಿಕ ಅಥವಾ ಬ್ರಿಟನ್​ಗೆ ಹೆಚ್ಚುವರಿ ಸಮಯ ಬೇಕು ಎಂದಾದರೆ ನಮ್ಮ ಉತ್ತರ ಇಲ್ಲ ಎಂದಾಗಿರುತ್ತದೆ. ನಿಗದಿತ ಅವಧಿಗಿಂತಲೂ ಹೆಚ್ಚು ಸಮಯ ಅವರು ಇಲ್ಲಿ ಉಳಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಸಿದೆ.

ಅಮೆರಿಕದ ಕಟ್ಟಕಡೆಯ ಯೋಧ ಅಫ್ಘಾನಿಸ್ತಾನ ನೆಲದಿಂದ ಹೊರಗೆ ಹೋಗುವವರೆಗೂ ಹೊಸ ಸರ್ಕಾರದ ರೂಪುರೇಷೆಯನ್ನಾಗಲಿ, ಸಚಿವ ಸಂಪುಟವನ್ನಾಗಲಿ ರೂಪಿಸುವುದಿಲ್ಲ ಎಂದು ತಾಲಿಬಾನ್ ಮೂಲಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾಬೂಲ್ ವಿಮಾನ ನಿಲ್ದಾಣದ ಅಘಾತಕಾರಿ ದೃಶ್ಯಗಳು ಅಫ್ಘಾನಿಸ್ತಾನದಿಂದ ಹೊರಹೋಗಲು ನೂಕುನುಗ್ಗಲು ಉಂಟಾಗಿದ್ದು, ವಿಮಾನ ನಿಲ್ದಾಣದಲ್ಲಿ ಭಯಾನಕ ದೃಶ್ಯಗಳು ಕಾಣಿಸುತ್ತಿವೆ. ಈವರೆಗೆ ವಿಮಾನ ನಿಲ್ದಾಣದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ಕೆಲವರು ಮೃತಪಟ್ಟಿದ್ದಾರೆ. ಇಬ್ಬರು ವಿಮಾನದಿಂದ ಬಿದ್ದು ಸತ್ತಿದ್ದಾರೆ.

ಸ್ಥಳೀಯ ಗಾರ್ಡ್​ಗಳು ಮತ್ತು ಅಪರಿಚಿತ ದುಷ್ಕರ್ಮಿಗಳೊಂದಿಗೆ ಸೋಮವಾರವೂ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಒಬ್ಬ ಅಫ್ಘಾನ್ ಪುರುಷ ಸಾವನ್ನಪ್ಪಿದ್ದಾನೆ ಎಂದು ಜರ್ಮನ್ ರಕ್ಷಣಾ ಇಲಾಖೆ ಹೇಳಿದೆ. ಜರ್ಮನ್ ಮತ್ತು ಅಮೆರಿಕ ಪಡೆಗಳು ಸಹ ಗುಂಡಿನ ಚಕಮಕಿಯಲ್ಲಿ ಪಾಲ್ಗೊಂಡಿದ್ದವು ಎಂದು ಹೇಳಿಕೆ ತಿಳಿಸಿದೆ.

1996ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ್ದ ತಾಲಿಬಾನ್ ಷರಿಯಾ ಕಾನೂನನ್ನು ಕಠಿಣ ರೀತಿಯಲ್ಲಿ ಜಾರಿಗೊಳಿಸಿತ್ತು. ಆ ಕರಾಳ ನೆನಪಿನಿಂದ ಇಂದಿಗೂ ವಿಶ್ವ ಹೊರ ಬಂದಿಲ್ಲ. ಹೀಗಾಗಿಯೇ ಜನರು ಅಫ್ಘಾನಿಸ್ತಾನದಿಂದ ಹೊರಗೆ ಹೋಗಲು ಹಾತೊರೆಯುತ್ತಿದ್ದಾರೆ. ಈ ಬಾರಿ ಕಾಬೂಲ್ ವಶಪಡಿಸಿಕೊಂಡ ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ತಾಲಿಬಾನ್ ಸರ್ಕಾರಿ ಪಡೆಗಳು ಮತ್ತು ಅಧಿಕಾರಿಗಳಿಗೆ ಕ್ಷಮೆ ನೀಡಿರುವುದಾಗಿ ಹೇಳಿತ್ತು. ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವ ಭರವಸೆಯನ್ನೂ ನೀಡಿತ್ತು.

(We will not form until Amerias Last Soldier in Afghanistan says Taliban)

ಇದನ್ನೂ ಓದಿ: ತಾಲಿಬಾನ್​ಗೆ ಪಂಜ್​ಶಿರ್ ಪ್ರಾಂತ್ಯದ ಸವಾಲು: ಫಲಿತಾಂಶದ ಬಗ್ಗೆ ವಿಶ್ವ ಸಮುದಾಯದಲ್ಲಿ ಕುತೂಹಲ

ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ