‘ರಕ್ತಪಾತ ತಡೆಯಲು ಅಫ್ಘಾನಿಸ್ತಾನ ತೊರೆದೆ’ – ಅಶ್ರಫ್ ಘನಿ ಹೇಳಿಕೆ
Ashraf Ghani: ಇಂದಿನಿಂದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವದ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ ಅಶ್ರಫ್ ಘನಿ ಹೇಳಿದ್ದಾರೆ.
ಅಫ್ಘಾನಿಸ್ತಾನ (Afghanistan) ಅಧ್ಯಕ್ಷರ ಪ್ಯಾಲೆಸ್ಗೆ ಉಗ್ರರು ದಾಳಿ ನಡೆಸಿ ಕಾಬೂಲ್ ತಾಲಿಬಾನ್(Taliban) ವಶಕ್ಕೆ ಪಡೆದಿದ್ದರಿಂದ ರಕ್ತಪಾತವನ್ನು ತಡೆಯಲು ದೇಶವನ್ನು ತೊರೆದೆ ಎಂದು ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಹೇಳಿಕೆ ನೀಡಿದ್ದಾರೆ. ಇಂದಿನಿಂದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವದ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ ಅಶ್ರಫ್ ಘನಿ ಹೇಳಿದ್ದಾರೆ.
ನಾನು ಕಠಿಣವಾದ ಆಯ್ಕೆಯನ್ನು ಎದುರಿಸಬೇಕಾಯಿತು. ಕಳೆದ 20 ವರ್ಷಗಳಿಂದ ನನ್ನ ಜೀವನವನ್ನು ತ್ಯಜಿಸಿದ ದೇಶದ ಜನರನ್ನು ತೊರೆಯುವುದು ನನಗೆ ಕಷ್ಟವಾಯಿತು. 6 ಮಿಲಿಯನ್ ಜನರಿರುವ ನಗರದಲ್ಲಿ ರಕ್ತಪಾತ ನಡೆಯುವುದನ್ನು ತಡೆಯಲು ನಾನು ದೇಶವನ್ನು ತೊರೆಯಬೇಕಿತ್ತು. ದೇಶವನ್ನು ತೊರೆಯದಿದ್ದರೆ ಅನೇಕ ದೇಶಭಕ್ತರು ಪ್ರಾಣ ಕಳೆದುಕೊಳ್ಳಬೇಕಿತ್ತು. ಕಾಬೂಲ್ ನಗರವೇ ನಾಶವಾಗುತ್ತಿತ್ತು ಎಂದು ಹೇಳಿದ್ದಾರೆ.
ಅನೇಕ ಜನರು ಭಯದಲ್ಲಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಜನರು, ರಾಷ್ಟ್ರಗಳು, ವಿವಿಧ ವಲಯಗಳು, ಸಹೋದರಿಯರು ಮತ್ತು ಮಹಿಳೆಯರಿಗೆ ಕಾನೂನು ಬದ್ಧತೆ ಮತ್ತು ಜನರ ಹೃದಯ ಗೆಲ್ಲಲು ಭರವಸೆ ನೀಡುವುದು ಅಗತ್ಯವಾಗಿದೆ. ಸ್ಪಷ್ಟ ಯೋಜನೆಯನ್ನು ಮಾಡಿ ಮತ್ತು ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಿ. ನಾನು ಯಾವಾಗಲೂ ಬೌದ್ಧಿಕ ಕ್ಷಣ ಮತ್ತು ಅಭಿವೃದ್ಧಿಯ ಯೋಜನೆಗಳೊಂದಿಗೆ ರಾಷ್ಟ್ರ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಅಶ್ರಫ್ ಘನಿ ಹೇಳಿದ್ದಾರೆ.
ಇದನ್ನೂ ಓದಿ:
ಭದ್ರತಾ ಪಡೆಯನ್ನು ಮತ್ತೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಎಂದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ; ರಾಜೀನಾಮೆ ಮಾತಿಲ್ಲ
Published On - 10:29 am, Mon, 16 August 21