Nepal: ರನ್ ವೇದಲ್ಲಿ ಆಯತಪ್ಪಿದ ವಿಮಾನ; 80 ಪ್ರಯಾಣಿಕರ ಸುರಕ್ಷಿತ ಸ್ಥಳಾಂತರ
ವಿಮಾನದಲ್ಲಿ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರೆಂಜಿ ಶೇರ್ಪಾ ತಿಳಿಸಿದ್ದಾರೆ.
ಕಾಟ್ಮಂಡು: ನೇಪಾಳದ ದೇಶೀಯ ವಿಮಾನ (Nepal’s Domestic Aircraft) ಅಂದರೆ ದೇಶದೊಳಗೇ ಸಂಚರಿಸುವ ವಿಮಾನವೊಂದು ರನ್ವೇದಲ್ಲಿ ಆಯತಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ವಿಮಾನದಲ್ಲಿ ಸುಮಾರು 80 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾರಿಗೂ ಏನೂ ಆಗಲಿಲ್ಲ. ನೇಪಾಳದ ಶ್ರೀ ಏರ್ಲೈನ್ಗೆ ಸೇರಿದ ವಿಮಾನ, ಇಂದು ಬೆಳಗ್ಗೆ 10.30ರ ಹೊತ್ತಿಗೆ ಕಾಟ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳ್ಗುಂಜ್ಗೆ ಹೊರಟಿತ್ತು. ಟೇಕ್ಆಫ್ಗೂ ಮುನ್ನ ಟ್ಯಾಕ್ಸಿ ವೇದಲ್ಲಿ ಸಂಚಾರ ಮಾಡುತ್ತಿದ್ದಾಗ ಸ್ಕಿಡ್ ಆಗಿದೆ ಎಂದು ವರದಿಯಾಗಿದೆ.
ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರೆಂಜಿ ಶೇರ್ಪಾ ತಿಳಿಸಿದ್ದಾರೆ. ಈ ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ತೆಗೆದುಕೊಂಡು ಹೋಗಲಾಗಿದ್ದು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ, ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಅನುಮೋದನೆ ಬಳಿಕವಷ್ಟೇ ಮತ್ತೆ ಹಾರಾಟ ನಡೆಸಲಾಗುವುದು ಎಂದೂ ಹೇಳಿದ್ದಾರೆ. ರನ್ವೇದಲ್ಲಿ ಹೋಗುತ್ತಿದ್ದಾಗ ವಿಮಾನದ ಎಡಗಾಲಿ ಹುಲ್ಲಿನ ಮೇಲೆ ಹೋಗಿದೆ ಎನ್ನಲಾಗಿದೆ. ಈ ವಿಮಾನ ಆಯತಪ್ಪಿ ಸಣ್ಣಮಟ್ಟದ ಅವಘಡ ಸಂಭವಿಸಿದ್ದರೂ ಏರ್ಪೋರ್ಟ್ನಲ್ಲಿ ಉಳಿದ ವಿಮಾನಗಳ ಕಾರ್ಯಾಚರಣೆ ನಡೆಯುತ್ತಲೇ ಇದೆ.
Covaxin: ಕೋವ್ಯಾಕ್ಸಿನ್ಗೆ ಅನುಮೋದನೆ ನೀಡುವ ಬಗ್ಗೆ WHO ಸಭೆ; ಸದ್ಯದಲ್ಲೇ ಅಂತಿಮ ನಿರ್ಧಾರ ಸಾಧ್ಯತೆ
Published On - 6:35 pm, Tue, 5 October 21