Plane Crash: ಅಮೆಜಾನ್ ದಟ್ಟ ಕಾಡಿನಲ್ಲಿ ವಿಮಾನ ಪತನ, ಪವಾಡವೆಂಬಂತೆ ಬದುಕುಳಿದ 4 ಮಕ್ಕಳು, 2 ವಾರಗಳ ಬಳಿಕ ಪತ್ತೆ
ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು.
ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಪವಾಡವೆಂಬಂತೆ 11 ತಿಂಗಳ ಮಗು ಸೇರಿದಂತೆ 4 ಮಕ್ಕಳು ಜೀವ ಉಳಿಸಿಕೊಂಡಿದ್ದಾರೆ. ಅಪಘಾತದಲ್ಲೇನೋ ಜೀವ ಉಳಿಯಿತು ಆದರೆ ಅಪಘಾತವಾಗಿ 2 ವಾರಗಳ ವರೆಗೆ ಆ ದಟ್ಟ ಅರಣ್ಯದಲ್ಲಿ ಪ್ರಾಣಿಗಳಿಂದಲೂ ತಮ್ಮ ಜೀವ ಕಾಪಾಡಿಕೊಂಡಿದ್ದಾರೆ.
ಮಿಲಿಟರಿ ಸತತ ಹುಡುಕಾಟ ನಡೆಸುತ್ತಿತ್ತು, ಎರಡು ವಾರಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿತ್ತು, 100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು. 11 ತಿಂಗಳ ಮಗು, 13 ವರ್ಷ, 9 ಹಾಗೂ 4 ವರ್ಷದ ಮಕ್ಕಳಿದ್ದರು. ಅಪಘಾತದ ನಂತರ ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನ ಮೂಲಕ ಅಲೆದಾಡುತ್ತಿದ್ದರು.
ಅಲ್ಲಿರುವ ಕೋಲುಗಳನ್ನು ಬಳಸಿ ಮನೆಯ ರೀತಿ ನಿರ್ಮಿಸಿಕೊಂಡಿದ್ದರು ಅದನ್ನು ಕಂಡ ಬಳಿಕ ಯಾರೋ ಬದುಕುಳಿದಿದ್ದಾರೆ ಎನ್ನುವ ನಂಬಿಕೆ ಬಂದಿತ್ತು. ಮಗುವಿನ ಹಾಲಿನ ಬಾಟಲಿ, ಅರ್ಧ ತಿಂದಿದ್ದ ಹಣ್ಣಿನ ತುಂಡು ಪತ್ತೆಯಾಗಿತ್ತು, ಪೈಲಟ್ ಹಾಗೂ ಇಬ್ಬರು ವಯಸ್ಕರ ಶವವನ್ನು ಸೈನಿಕರು ಪತ್ತೆ ಮಾಡಿದ್ದರು.
ಮತ್ತಷ್ಟು ಓದಿ: Nepal Air Crash: ಯೇತಿ ಏರ್‌ಲೈನ್ಸ್ ವಿಮಾನ ಪತನಕ್ಕೆ ಎಂಜಿನ್ ಸಮಸ್ಯೆ ಕಾರಣ: ವರದಿ
ಈ 4 ಮಕ್ಕಳು ಮೃತ ರಾನೋಕ್ ಅವರ ಮಕ್ಕಳಾಗಿದ್ದರು, 40 ಮೀಟರ್ ಎತ್ತರದ ವರೆಗೆ ಬೆಳೆಯುವ ದೈತ್ಯ ಮರಗಳು, ಕಾಡು ಪ್ರಾಣಿಗಳು, ಭಾರಿ ಮಳೆ ನಡುವೆ ಹುಡುಕಾಟ ಸ್ವಲ್ಪ ಕಷ್ಟವಾಗಿತ್ತು. ಸಹಾಯಕ್ಕಾಗಿ 3 ಹೆಲಿಕಾಪ್ಟರ್ ಬಳಸಲಾಗಿತ್ತು, ವಿಮಾನ ಪತನಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಡಾರ್‌ಗಳಿಂದ ವಿಮಾನವು ಕಣ್ಮರೆಯಾಗುವ ಕೆಲವೇ ನಿಮಿಷಗಳ ಮೊದಲು ಪೈಲಟ್ ಎಂಜಿನ್‌ನಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದ್ದರು.
ಕಳೆದ 2 ವರ್ಷಗಳ ಹಿಂದೆ ಅಮೆಜಾನ್ ಕಾಡಿನಲ್ಲಿ ಪೈಲಟ್ ಒಬ್ಬರು ಸಿಲುಕಿಕೊಂಡಿದ್ದರು 5 ವಾರಗಳ ವರೆಗೆ ಹಕ್ಕಿಯ ಮೊಟ್ಟೆಗಳನ್ನು ತಿಂದು ಜೀವ ಉಳಿಸಿಕೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ