ಪೊಲೀಸರು ನನ್ನ ಮನೆಯನ್ನು ಸುತ್ತುವರಿದಿದ್ದಾರೆ, ಬಂಧನ ಸನ್ನಿಹಿತವಾಗಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್
ಪಾಕಿಸ್ತಾನವು ವಿನಾಶದ ಹಾದಿಯಲ್ಲಿದೆ ಎಂದು ನಾನು ಇಂದು ಭಯಪಡುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದ ಖಾನ್, ಇಂದು ಬುದ್ಧಿವಂತಿಕೆಯನ್ನು ಪ್ರಯೋಗಿಸದಿದ್ದರೆ, ನಾವು ಏನೇನೂ ಮಾಡಲು ಸಾಧ್ಯವಾದ ಹಂತವನ್ನು ತಲುಪಬಹುದು ಎಂದು ನಾನು ಹೆದರುತ್ತೇನೆ ಎಂದ ಇಮ್ರಾನ್ ಖಾನ್
ಮತ್ತೊಂದು ಬಂಧನಕ್ಕಾಗಿ ಪೊಲೀಸರು ಲಾಹೋರ್‌ನಲ್ಲಿರುವ ತಮ್ಮ ಮನೆಯನ್ನು ಸುತ್ತುವರಿದಿದ್ದಾರೆ ಎಂದು ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬುಧವಾರ ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿದ ಖಾನ್ ಬಹುಶಃ ನನ್ನ ಮುಂದಿನ ಬಂಧನಕ್ಕೂ ಮುನ್ನ ನನ್ನ ಕೊನೆಯ ಟ್ವೀಟ್ ಇದು ಎಂದು ಹೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ಬಂಧಿಸಲು ಪಂಜಾಬ್ ಪೊಲೀಸರು ಪಿಟಿಐ ಅಧ್ಯಕ್ಷರ ಜಮಾನ್ ಪಾರ್ಕ್ ನಿವಾಸದ ಹೊರಗೆ ತಲುಪಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಖಾನ್ ಅವರ ನಿವಾಸವನ್ನು ಪೊಲೀಸ್ ಅಧಿಕಾರಿಗಳು ಸುತ್ತುವರಿದಿದ್ದಾರೆ ಎಂದು ಅದು ಹೇಳಿದೆ. ಪಾಕಿಸ್ತಾನವು ವಿನಾಶದ ಹಾದಿಯಲ್ಲಿದೆ ಎಂದು ನಾನು ಇಂದು ಭಯಪಡುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದ ಖಾನ್, ಇಂದು ಬುದ್ಧಿವಂತಿಕೆಯನ್ನು ಪ್ರಯೋಗಿಸದಿದ್ದರೆ, ನಾವು ಏನೇನೂ ಮಾಡಲು ಸಾಧ್ಯವಾದ ಹಂತವನ್ನು ತಲುಪಬಹುದು ಎಂದು ನಾನು ಹೆದರುತ್ತೇನೆ ಎಂದಿದ್ದಾರೆ.
ಏತನ್ಮಧ್ಯೆ, ಖಾನ್ ಅವರ ಪಕ್ಷ ಪಿಟಿಐ ತನ್ನ ಬೆಂಬಲಿಗರನ್ನು ಜಮಾನ್ ಪಾರ್ಕ್ ತಲುಪುವಂತೆ ಒತ್ತಾಯಿಸಿತು. ಎಲ್ಲರೂ, ದಯವಿಟ್ಟು ಜಮಾನ್ ಪಾರ್ಕ್‌ಗೆ ತಲುಪಿ. PDM ಆಡಳಿತವು ನಮ್ಮ ನಾಯಕನನ್ನು ಬಂಧಿಸಲು ಬಿಡಬೇಡಿ, ಕಾರ್ಯಾಚರಣೆಯು ಕೇವಲ ದುರುದ್ದೇಶದಿಂದ ಕೂಡಿದೆ. ಅವರು ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ! ಎಂದು ಪಿಟಿಐ ಟ್ವೀಟ್ ಮಾಡಿದೆ.
Reportedly scenes from outside my house while I was addressing the nation pic.twitter.com/a5vNgwMFLz
— Imran Khan (@ImranKhanPTI) May 17, 2023
ಪಂಜಾಬ್ ಪ್ರಾಂತೀಯ ಸರ್ಕಾರದ ವಕ್ತಾರ ಅಮೀರ್ ಮಿರ್, ಖಾನ್ ಅವರು ತಮ್ಮ ಮನೆಯಲ್ಲಿ ಅಡಗಿಕೊಂಡಿರುವ 40 ಶಂಕಿತರನ್ನು ಹಸ್ತಾಂತರಿಸಲು 24 ಗಂಟೆಗಳ ಕಾಲಾವಕಾಶವಿದೆ ಅಥವಾ ಪೊಲೀಸ್ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆಯಾಗಿದೆ. ಇದುವರೆಗೆ 3,400 ಶಂಕಿತರನ್ನು ಬಂಧಿಸಲಾಗಿದ್ದು, ಹೆಚ್ಚಿನ ದಾಳಿ ನಡೆಸಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಮಾನವ ಹಕ್ಕುಗಳ ಆಯೋಗ ಮಂಗಳವಾರ ತಡರಾತ್ರಿ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಪೊಲೀಸರೊಂದಿಗೆ ಘರ್ಷಣೆ ಮತ್ತು ದೇಶಾದ್ಯಂತ ಗಲಭೆ ನಡೆಸಿದ ಮಾಜಿ ಪ್ರಧಾನಿಯ ಬೆಂಬಲಿಗರನ್ನು ಮಿಲಿಟರಿ ನಿಯಮಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸುವ ಸರ್ಕಾರದ ಯೋಜನೆಯಿಂದ ಆತಂಕಗೊಂಡಿದ್ದೇವೆ ಎಂದು ಹೇಳಿದೆ.
ಕಳೆದ ವಾರ ಮಂಗಳವಾರ ಇಸ್ಲಾಮಾಬಾದ್‌ನ ನ್ಯಾಯಾಲಯದ ಕೊಠಡಿಯಿಂದ ಖಾನ್ ಅವರನ್ನು ನಾಟಕೀಯವಾಗಿ ಬಂಧಿಸಿದ ನಂತರ ಪಾಕಿಸ್ತಾನದ ರಾಜಧಾನಿ ಮತ್ತು ಇತರ ನಗರ ಪ್ರದೇಶಗಳಲ್ಲಿ ಹಿಂಸಾಚಾರದ ಅಲೆ ಆವರಿಸಿದೆ.
ಇಮಾನ್ ಖಾನ್ ಬಂಧನದ ನಂತರ ಹಿಂಸಾಚಾರ
ಖಾನ್‌ನ ಬೆಂಬಲಿಗರು ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು, ಮಿಲಿಟರಿ ಸಿಬ್ಬಂದಿ ಮತ್ತು ಸೌಲಭ್ಯಗಳ ಮೇಲೆ ದಾಳಿ ನಡೆಸಿದರು. ಹಿಂಸಾತ್ಮಕ ಘರ್ಷಣೆಗಳು 10 ಜನರ ಸಾವಿಗೆ ಕಾರಣವಾಯಿತು, ಅಧಿಕಾರಿಗಳು 4,000 ಜನರನ್ನು ಬಂಧಿಸಿದರು. ಆದಾಗ್ಯೂ, ನಂತರ ಸುಪ್ರೀಂಕೋರ್ಟ್ ಖಾನ್ ಅವರನ್ನು ಬಂಧಿಸಿದ ವಿಧಾನವನ್ನು ಟೀಕಿಸಿದ್ದು ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು.
ಇತ್ತೀಚಿನ ಬೆಳವಣಿಗೆಗಳಲ್ಲಿ, ಇಸ್ಲಾಮಾಬಾದ್‌ನ ಉನ್ನತ ನ್ಯಾಯಾಲಯವು ಖಾನ್‌ಗೆ ಜಾಮೀನಿನ ವಿಸ್ತರಣೆಯನ್ನು ಮತ್ತು ತಿಂಗಳ ಅಂತ್ಯದವರೆಗೆ ಬಂಧನದ ವಿರುದ್ಧ ರಕ್ಷಣೆ ನೀಡಿದೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್ ನಿವಾಸದಲ್ಲಿ 40 ಉಗ್ರರಿಗೆ ಆಶ್ರಯ, 24 ಗಂಟೆಯೊಳಗೆ ನಮಗೆ ಒಪ್ಪಿಸಿ ಪೊಲೀಸರು
ಕಳೆದ ವರ್ಷ ಸಂಸತ್ತಿನ ಅವಿಶ್ವಾಸ ಮತದ ನಂತರ ಖಾನ್‌ನಿಂದ ಅಧಿಕಾರ ವಹಿಸಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ, ಮಾಜಿ ಪ್ರಧಾನಿ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಲ್ಲಿರುವ ಅವರ ನಿವಾಸದಲ್ಲಿ ಮಿಲಿಟರಿ ಸ್ಥಾಪನೆಗಳ ದಾಳಿಗೆ ಸಂಬಂಧಿಸಿದ ಶಂಕಿತರಿಗೆ ಆಶ್ರಯ ನೀಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಕಸ್ಟಡಿಯಲ್ಲಿರುವಾಗ ಪುರುಷರು ಮತ್ತು ಮಹಿಳೆಯರು ಸೇರಿದಂತೆ ತನ್ನ ಬಂಧಿತ ಬೆಂಬಲಿಗರು ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಖಾನ್ ಟ್ವೀಟ್ ಮಾಡಿ ಆರೋಪಿಸಿದರು. ಮಹಿಳಾ ಪ್ರತಿಭಟನಾಕಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಆದರೆ ಇದನ್ನು ಸಾಬೀತು ಪಡೆಸಲು ಅವರು ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ