ಅಮೆರಿಕ: ದಕ್ಷಿಣ ಕೆರೋಲಿನಾದಲ್ಲಿ ನಿಕ್ಕಿ ಹ್ಯಾಲೆ ವಿರುದ್ಧ ಟ್ರಂಪ್ಗೆ ಭರ್ಜರಿ ಜಯ
ದಕ್ಷಿಣ ಕೆರೋಲಿನಾದಲ್ಲಿ ನಿಕ್ಕಿ ಹ್ಯಾಲೆ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರಿ ಜಯಗಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಿಂದಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸ್ಪರ್ಧಿಸಲು ಟ್ರಂಪ್ ಮತ್ತಷ್ಟು ಹತ್ತಿರವಾದಂತಾಗಿದೆ. ಇದು ನಿಕ್ಕಿ ಹ್ಯಾಲೆ ಅವರ ತವರು ರಾಜ್ಯ, ಆದರೂ ಜನರು ನಿಕ್ಕಿ ಹ್ಯಾಲೆ ಬದಲಾಗಿ ಡೊನಾಲ್ಡ್ ಟ್ರಂಪ್ಗೆ ಮತ ಹಾಕಿದ್ದಾರೆ

ವಾಷಿಂಗ್ಟನ್, ಫೆಬ್ರವರಿ 25: ಈ ವರ್ಷದ ನವೆಂಬರ್ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಏತನ್ಮಧ್ಯೆ ದಕ್ಷಿಣ ಕೆರೋಲಿನಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತಮ್ಮ ಪ್ರತಿಸ್ಪರ್ಧಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ. ಇದರಿಂದಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸ್ಪರ್ಧಿಸಲು ಟ್ರಂಪ್ ಮತ್ತಷ್ಟು ಹತ್ತಿರವಾದಂತಾಗಿದೆ.
ಇದು ನಿಕ್ಕಿ ಹ್ಯಾಲೆ ಅವರ ತವರು ರಾಜ್ಯ, ಆದರೂ ಜನರು ನಿಕ್ಕಿ ಹ್ಯಾಲೆ ಬದಲಾಗಿ ಡೊನಾಲ್ಡ್ ಟ್ರಂಪ್ಗೆ ಮತ ಹಾಕಿದ್ದಾರೆ.ಚುನಾವಣೆ ನಂತರ ಬಂದ ಸಮೀಕ್ಷೆಗಳಲ್ಲಿ ಅವರ ಗೆಲುವು ಖಚಿತ ಎನ್ನಲಾಗಿತ್ತು. ಕ್ರಿಮಿನಲ್ ಆರೋಪಗಳ ಹೊರತಾಗಿಯೂ, ಟ್ರಂಪ್ ಇಲ್ಲಿ ದೊಡ್ಡ ಮುನ್ನಡೆ ಸಾಧಿಸಿದ್ದಾರೆ. ಎರಡು ಬಾರಿ ಗರ್ವನರ್ ಚುನಾವಣೆಯಲ್ಲಿ ಗೆದ್ದಿದ್ದ ದಕ್ಷಿಣ ಕೆರೋಲಿನಾ ಮೂಲದ ಹ್ಯಾಲೆ ಅವರು ಟ್ರಂಪ್ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್ಗೆ ಸವಾಲೆಸೆದಿರುವ ಏಕೈಕ ಅಭ್ಯರ್ಥಿ ಹ್ಯಾಲೆ. ಈ ಸೋಲಿನ ನಂತರ ಅವರು ಅಧ್ಯಕ್ಷೀಯ ಅಭ್ಯರ್ಥಿಯ ರೇಸ್ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಅಯೋವಾ, ನ್ಯೂ ಹ್ಯಾಂಪ್ಶೈರ್, ನೆವಾಡಾ, ಯುಎಸ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಈಗ ಹ್ಯಾಲೆ ಅವರ ತವರು ರಾಜ್ಯ ದಕ್ಷಿಣ ಕೆರೋಲಿನಾ ಇದುವರೆಗೆ ಐದು ಸ್ಪರ್ಧೆಗಳಲ್ಲಿ ಟ್ರಂಪ್ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ: Donald Trump: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ರೆಡಿ; ಡೊನಾಲ್ಡ್ ಟ್ರಂಪ್ ಘೋಷಣೆ
ಹ್ಯಾಲೆಗೆ ಇನ್ನೂ ಭರವಸೆ ಇದೆ ಟ್ರಂಪ್ ಅಡಿಯಲ್ಲಿ ಯುಎನ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಹ್ಯಾಲೆ, ಈ ವಾರ ತನ್ನ ಪ್ರಚಾರವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಈಗ ಮಾರ್ಚ್ 5ರಂದು 15 ರಿಪಬ್ಲಿಕನ್ ರಾಜ್ಯಗಳಲ್ಲಿ ಮತ ಚಲಾಯಿಸಲಾಗಿದೆ. ಹ್ಯಾಲಿ ಇತ್ತೀಚೆಗಷ್ಟೇ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿ ಟ್ರಂಪ್ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ, ಮುಂಬರುವ ಚುನಾವಣೆಯಲ್ಲಿ ಟ್ರಂಪ್ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಮತದಾರರಿಗೆ ಎಚ್ಚರಿಕೆ ನೀಡಿದ್ದರು. ಆದರೆ ರಿಪಬ್ಲಿಕನ್ ಮತದಾರರು ಟ್ರಂಪ್ ಹೊರತುಪಡಿಸಿ ಬೇರೆ ಯಾವುದೇ ಅಭ್ಯರ್ಥಿಯನ್ನು ನಂಬುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ.
ಟ್ರಂಪ್ ನಿರಂತರ ಗೆಲುವು ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಟ್ರಂಪ್ ನ್ಯೂ ಹ್ಯಾಂಪ್ಶೈರ್ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ನ್ಯೂ ಹ್ಯಾಂಪ್ಶೈರ್ನಲ್ಲಿ ಚಲಾವಣೆಯಾದ ಶೇ.75ರಷ್ಟು ಮತಗಳ ಪೈಕಿ ಶೇ. 54.4ರಷ್ಟು ಮತಗಳನ್ನು ಟ್ರಂಪ್ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




