ಪ್ಯಾರಿಸ್: ಹೊಕ್ಕುಳಬಳ್ಳಿಯನ್ನೂ ಕತ್ತರಿಸದೆ ಶಿಶುವನ್ನು ಹೋಟೆಲ್​ ರೂಮಿನಿಂದ ಎಸೆದ ತಾಯಿ

ಆಗ ತಾನೆ ಹುಟ್ಟಿದ ಶಿಶುವನ್ನು ತಾಯಿಯೊಬ್ಬಳು ಹೋಟೆಲ್​ನಿಂದ ಕೆಳಗೆ ಎಸೆದಿರುವ ಘಟನೆ ಪ್ಯಾರಿಸ್​ನಲ್ಲಿ ನಡೆದಿದೆ. ತಾಯಿಯೊಬ್ಬಳು ಶಿಶುವಿನ ಹೊಕ್ಕುಳಬಳ್ಳಿಯನ್ನೂ ಕತ್ತರಿಸದೆ ಹೋಟೆಲ್​ ರೂಮಿನ ಕಿಟಕಿಯಿಂದ ಕೆಳಗೆ ಎಸೆದಿರುವ ಘಟನೆ ಪ್ಯಾರಿಸ್​ನಲ್ಲಿ ನಡೆದಿದೆ. 18 ವರ್ಷದ ಅಮೆರಿಕ ಯುವತಿ ಈ ಕೃತ್ಯವೆಸಗಿದ್ದಾಳೆ ಎಂದು ತಿಳಿದುಬಂದಿದೆ. ಪೂರ್ವ ಪ್ಯಾರಿಸ್​ನ 20ನೇ ಅರೋಂಡಿಸ್​ಮೆಂಟ್​ನಲ್ಲಿರುವ ಹೋಟೆಲ್​ನ ಎರಡನೇ ಮಹಡಿಯಿಂದ ಶಿಶುವನ್ನು ಎಸೆದಿದ್ದಾಳೆ.

ಪ್ಯಾರಿಸ್: ಹೊಕ್ಕುಳಬಳ್ಳಿಯನ್ನೂ ಕತ್ತರಿಸದೆ ಶಿಶುವನ್ನು ಹೋಟೆಲ್​ ರೂಮಿನಿಂದ ಎಸೆದ ತಾಯಿ
ಹೋಟೆಲ್
Image Credit source: People.com

Updated on: Feb 25, 2025 | 11:37 AM

ಪ್ಯಾರಿಸ್, ಫೆಬ್ರವರಿ 25: ಆಗ ತಾನೆ ಹುಟ್ಟಿದ ಶಿಶುವನ್ನು ತಾಯಿಯೊಬ್ಬಳು ಹೋಟೆಲ್​ನಿಂದ ಕೆಳಗೆ ಎಸೆದಿರುವ ಘಟನೆ ಪ್ಯಾರಿಸ್​ನಲ್ಲಿ ನಡೆದಿದೆ. ತಾಯಿಯೊಬ್ಬಳು ಶಿಶುವಿನ ಹೊಕ್ಕುಳಬಳ್ಳಿಯನ್ನೂ ಕತ್ತರಿಸದೆ ಹೋಟೆಲ್​ ರೂಮಿನ ಕಿಟಕಿಯಿಂದ ಕೆಳಗೆ ಎಸೆದಿರುವ ಘಟನೆ ಪ್ಯಾರಿಸ್​ನಲ್ಲಿ ನಡೆದಿದೆ. 18 ವರ್ಷದ ಅಮೆರಿಕ ಯುವತಿ ಈ ಕೃತ್ಯವೆಸಗಿದ್ದಾಳೆ ಎಂದು ತಿಳಿದುಬಂದಿದೆ. ಪೂರ್ವ ಪ್ಯಾರಿಸ್​ನ 20ನೇ ಅರೋಂಡಿಸ್​ಮೆಂಟ್​ನಲ್ಲಿರುವ ಹೋಟೆಲ್​ನ ಎರಡನೇ ಮಹಡಿಯಿಂದ ಶಿಶುವನ್ನು ಎಸೆದಿದ್ದಾಳೆ.

ನವಜಾತ ಶಿಶುವಿಗೆ ತುರ್ತು ಆರೈಕೆ ನೀಡಲಾಯಿತು ಆದರೆ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಬರ್ಟ್​ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಹೊಕ್ಕುಳಬಳ್ಳಿಯೂ ಹಾಗೆಯೇ ಇತ್ತು, ಮಗುವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೋಟೆಲ್​ನಿಂದ ಕೆಳಗೆ ಎಸೆಯಲಾಗಿತ್ತು. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

18 ವರ್ಷದ ವಿದ್ಯಾರ್ಥಿನಿ ತಾಯಿ ಹೋಟೆಲ್‌ನ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ಮಗುವಿಗೆ ಜನ್ಮ ನೀಡಿ, ನಂತರ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಫ್ರೆಂಚ್ ಅಧಿಕಾರಿಗಳು ಕೊಲೆ ತನಿಖೆಯನ್ನು ಪ್ರಾರಂಭಿಸಿದ್ದಾರೆ, ಯುರೋಪ್​ನಲ್ಲಿ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಮಗುವಿನ ತಾಯಿ ಯುನೈಟೆಡ್ ಸ್ಟೇಟ್ಸ್‌ನ ಇತರ ವಿದ್ಯಾರ್ಥಿಗಳೊಂದಿಗೆ ಪ್ಯಾರಿಸ್‌ಗೆ ಅಧ್ಯಯನ ಪ್ರವಾಸದಲ್ಲಿದ್ದರು ಎಂದು ವರದಿ ಮಾಡಿದೆ.

ಮತ್ತಷ್ಟು ಓದಿ: ಮಹಾಕುಂಭಕ್ಕೆ ಕರೆದೊಯ್ದು ಪತ್ನಿಯ ಕೊಂದು, ಮಕ್ಕಳ ಬಳಿ ನಿಮ್ಮಮ್ಮ ಕಳೆದುಹೋದ್ಲು ಎಂದಿದ್ದ ವ್ಯಕ್ತಿ, ನಡೆದಿದ್ದೇನು?

ಯುವತಿಗೆ ತಾನು ಗರ್ಭಧರಿಸಿರುವುದು ತಿಳಿದಿರಲಿಲ್ಲ, ಅದನ್ನು ತಿಳಿದಾಕ್ಷಣ ಆಕೆಗೆ ಅದನ್ನು ಸ್ವೀರಿಸಲು ಸಾಧ್ಯವಾಗಲಿಲ್ಲ, ಪ್ರಕರಣವನ್ನು ಕೊಲೆ ಎಂದು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಹೆರಿಗೆಯ ನಂತರ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅದು ತಿಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:35 am, Tue, 25 February 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us