ಚಲಿಸುವ ಕಾರಿನಿಂದ ಜಿಗಿಯುವುದಾಗಿ ಹೆದರಿಸಿದ ಮಗನಿಗೆ ಕೋಲಿನಿಂದ ಹೊಡೆದ ತಾಯಿ
ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಹಾರುತ್ತೇನೆ ಎಂದು ಹೆದರಿಸಿದ ಬಾಲಕನಿಗೆ ಆತನ ತಾಯಿ ಕೋಲಿನಿಂದ ಹೊಡೆದಿದ್ದಾಳೆ. ಸುಮಾರು 8 ವರ್ಷ ವಯಸ್ಸಿನ ಆ ಬಾಲಕ ಮನೆಗೆ ಮರಳಲು ಇಷ್ಟವಿಲ್ಲದೆ ಅಮ್ಮನ ಮೇಲೆ ಕೋಪಗೊಂಡು ಜೋರಾಗಿ ಅಳುತ್ತಿದ್ದ. ಈ ವೇಳೆ ತಾಯಿ ಹೊಡೆದು ಶಿಕ್ಷೆ ನೀಡಿದ್ದಾಳೆ.

ಬೀಜಿಂಗ್: ಚೀನಾದ ಮಹಿಳೆಯೊಬ್ಬರು ತನ್ನ ಚಿಕ್ಕ ಮಗನಿಗೆ ಶಿಸ್ತು ಕಲಿಸಲು ಎಕ್ಸ್‌ಪ್ರೆಸ್‌ವೇಯಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದು, ಬಳಿಕ ಒತ್ತಾಯವಾಗಿ ಆತನನ್ನು ಕಾರಿನಿಂದ ಇಳಿಸಿದ್ದಾಳೆ. ಇದು ಪೋಷಕರ ಬಗ್ಗೆ ಆನ್‌ಲೈನ್‌ನಲ್ಲಿ ತೀವ್ರವಾದ ಚರ್ಚೆಯನ್ನು ಹುಟ್ಟುಹಾಕಿದೆ. ಈ ಘಟನೆ ಮಧ್ಯ ಹೆನಾನ್ ಪ್ರಾಂತ್ಯದಲ್ಲಿರುವ ಝೆಂಗ್‌ಝೌನಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದಿದೆ. ತಾಯಿ ಜಾಂಗ್ ಎಕ್ಸ್‌ಪ್ರೆಸ್‌ವೇಯ ತುರ್ತು ಮಾರ್ಗಕ್ಕೆ ಬಂದು ಮಗನ ಕೆಟ್ಟ ನಡವಳಿಕೆಯ ಬಗ್ಗೆ ಬುದ್ಧಿ ಕಲಿಸಲು ಅವನನ್ನು ಬಲವಂತವಾಗಿ ಕಾರಿನಿಂದ ಇಳಿಸಿದ್ದಾಳೆ.
ವರದಿಯ ಪ್ರಕಾರ, ಸುಮಾರು 8 ವರ್ಷ ವಯಸ್ಸಿನ ಹುಡುಗ ಮನೆಗೆ ಹಿಂತಿರುಗಲು ಇಷ್ಟಪಡದೆ ಕಾರಿನಿಂದ ಕೆಳಗೆ ಹಾರುವುದಾಗಿ ಅಮ್ಮನನ್ನು ಹೆದರಿಸುತ್ತಿದ್ದ. ಅವನ ಆಕ್ರೋಶದ ಸಮಯದಲ್ಲಿ, ಚಲಿಸುವ ಕಾರಿನಿಂದ ಜಿಗಿಯುವುದಾಗಿಯೂ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: Viral: ಆರತಕ್ಷತೆ ದಿನವೇ ಸಿನಿಮೀಯ ಶೈಲಿಯಲ್ಲಿ ಪ್ರಿಯಕರನ ಜೊತೆ ಓಡಿ ಹೋದ ವಧು
ಆರಂಭದಲ್ಲಿ ತನ್ನ ಮಗನನ್ನು ಬೈದು ಸುಮ್ಮನಾಗಿಸಲು ನೋಡಿದ ತಾಯಿ ನಂತರ ಆತ ಹಠ ನಿಲ್ಲಿಸದೇ ಇದ್ದಾಗ ರಸ್ತೆಯಲ್ಲೇ ಕಾರು ನಿಲ್ಲಿಸಿ ಆತನನ್ನು ಕಾರಿನಿಂದ ಇಳಿಸಿದ್ದಾಳೆ. ನಾನು ಬಾಯಿ ಮಾತಿನಲ್ಲಿ ಹೇಳಿದರೆ ಮಗ ಕೇಳಲಿಲ್ಲ. ಕಾರಿನಿಂದ ಹಾರುತ್ತೇನೆಂದು ಹೆದರಿಸಿದ. ಹೀಗಾಗಿ, ನನಗೆ ಸುರಕ್ಷಿತವಾಗಿ ಕಾರು ಚಾಲನೆ ಮಾಡಲು ತೊಂದರೆಯಾಯಿತು. ಇದರಿಂದಾಗಿ ಹೈವೇಯಲ್ಲಿ ಕಾರನ್ನು ನಿಲ್ಲಿಸಿ ಆತನಿಗೆ ಪಾಠ ಕಲಿಸಲು ನಿರ್ಧರಿಸಿದೆ. ಹೈವೇಯಲ್ಲಿ ಕಾರು ನಿಲ್ಲಿಸಿದ್ದಕ್ಕಾಗಿ ನನಗೆ ದಂಡ ವಿಧಿಸಲಾಗುತ್ತದೆ ಎಂದು ನನಗೆ ತಿಳಿದಿತ್ತು. ಆದರೆ ನಾನು ಅವನನ್ನು ಇನ್ನು ಸಹಿಸಲಾಗದ ಕಾರಣದಿಂದ ಈ ರೀತಿ ಮಾಡಿದೆ” ಎಂದು ಜಾಂಗ್ ಹೇಳಿದ್ದಾರೆ.
ಚೀನಾದ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಡೌಯಿನ್‌ನಲ್ಲಿ ಗಮನ ಸೆಳೆದಿರುವ ಘಟನೆಯ ವೀಡಿಯೊದಲ್ಲಿ ಜಾಂಗ್ ತನ್ನ ಮಗನನ್ನು ಕಾರಿನಿಂದ ಕೆಳಗಿಳಿಸಿ ಮರದ ಕೊಂಬೆಯನ್ನು ಮುರಿದು, ಆತನನ್ನು ಹೊಡೆಯುವುದನ್ನು ನೋಡಬಹುದು. ಶಿಕ್ಷೆಯ ಸಮಯದಲ್ಲಿ ಅವನು ಅಳುತ್ತಿರುವಾಗ ಅವನು ಓಡಿಹೋಗದಂತೆ ತಡೆಯಲು ಅವಳು ತನ್ನ ಕೋಟ್ ಅನ್ನು ಹಿಡಿದಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
