AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

FIFA World Cup 2026: ಬಹುನಿರೀಕ್ಷಿತ ಫಿಫಾ ಫುಟ್​ಬಾಲ್ ವಿಶ್ವಕಪ್ ಜೂನ್ 11 ರಿಂದ ಶುರುವಾಗಲಿದೆ. ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ವಿಶ್ವಕಪ್​ನ ಫೈನಲ್ ಪಂದ್ಯವು ಜುಲೈ 19 ರಂದು ನಡೆಯಲಿದೆ. ಇನ್ನು ಈ ವಿಶ್ವಕಪ್​ಗಾಗಿ ಇಂಟರ್ನ್ಯಾಷನಲ್ ಫುಟ್‌ಬಾಲ್ ಅಸೋಸಿಯೇಷನ್ ಬೋರ್ಡ್ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಈ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!
Messi - Neymar - RonaldoImage Credit source: YT
ಝಾಹಿರ್ ಯೂಸುಫ್
|

Updated on:Jun 03, 2026 | 12:42 PM

Share

ಫುಟ್‌ಬಾಲ್ ಜಗತ್ತಿನ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ! ಈ ಬಾರಿಯ ಫಿಫಾ ವಿಶ್ವಕಪ್ (FIFA World cup 2026)​ ಕೇವಲ ತಂಡಗಳ ಸಂಖ್ಯೆಯಿಂದ ಮಾತ್ರವಲ್ಲ, ಆಟದ ನಿಯಮಗಳಿಂದಲೂ ಜಾಗತಿಕ ಗಮನ ಸೆಳೆಯುತ್ತಿದೆ. ಇಂಟರ್ನ್ಯಾಷನಲ್ ಫುಟ್‌ಬಾಲ್ ಅಸೋಸಿಯೇಷನ್ ಬೋರ್ಡ್ (IFAB) ಈ ಬಾರಿ ಹೊಸ ನಿಯಮಗಳಿಗೆ ಅನುಮೋದನೆ ನೀಡಿದ್ದು, ಆ ನಿಯಮಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ವಿಎಆರ್ (VAR) ವ್ಯಾಪ್ತಿ ವಿಸ್ತರಣೆ:

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ವ್ಯವಸ್ಥೆಗೆ  ಹೆಚ್ಚಿನ ಅಧಿಕಾರ ನೀಡಲಾಗಿದೆ. ಮೈದಾನದಲ್ಲಿ ರೆಫರಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ, ಈ ಕೆಳಗಿನ ಸಂದರ್ಭಗಳಲ್ಲಿ VAR ಹಸ್ತಕ್ಷೇಪ ಮಾಡಬಹುದು:

  • ಎರಡನೇ ಹಳದಿ ಕಾರ್ಡ್ ಪರಿಶೀಲನೆ: ರೆಫರಿ ತಪ್ಪಾಗಿ ಎರಡನೇ ಹಳದಿ ಕಾರ್ಡ್ ನೀಡಿ ಆಟಗಾರನನ್ನು ಹೊರಹಾಕುವುದನ್ನು ತಡೆಯಲು VAR ಮರುಪರಿಶೀಲನೆ ನಡೆಸಬಹುದು.
  •  ಕಾರ್ನರ್ ಕಿಕ್ ರದ್ದು: ಆಫ್-ಸೈಡ್ ಅಥವಾ ರೆಫರಿ ತಪ್ಪಿನಿಂದ ಎದುರಾಳಿ ತಂಡಕ್ಕೆ ಸಿಕ್ಕ ಕಾರ್ನರ್ ಕಿಕ್ ಅನ್ನು ರದ್ದುಗೊಳಿಸಬಹುದು.
  •  ಪ್ರೀ-ರಿಸ್ಟಾರ್ಟ್ ಫೌಲ್ಸ್: ಸೆಟ್-ಪೀಸ್ (ಫ್ರೀ-ಕಿಕ್ ಅಥವಾ ಕಾರ್ನರ್) ಆರಂಭವಾಗುವ ಮುನ್ನವೇ ಆಟಗಾರರು ಮಾಡುವ ಫೌಲ್‌ಗಳನ್ನು ಪತ್ತೆಹಚ್ಚಬಹುದು.

ಸಮಯ ವ್ಯರ್ಥ ಮಾಡುವ ತಂತ್ರಗಳಿಗೆ ಬ್ರೇಕ್:

ಪಂದ್ಯದ ನಿಗದಿತ ಸಮಯವನ್ನು ಕಾಪಾಡಿಕೊಳ್ಳಲು ಈ ಬಾರಿ ಕಟ್ಟುನಿಟ್ಟಾದ ಕೌಂಟ್‌ಡೌನ್‌ ನಿಯಮಗಳನ್ನು ತರಲಾಗಿದೆ. ಈ ನಿಯಮಗಳ ಮೂಲಕ ರೆಫರಿ ತೆಗೆದುಕೊಳ್ಳಲಿರುವ ಕ್ರಮಗಳ ಪಟ್ಟಿ ಈ ಕೆಳಗಿನಂತಿದೆ:

  • 5 ಸೆಕೆಂಡ್ ರಿಸ್ಟಾರ್ಟ್ ಟೈಮರ್: ಗೋಲ್ ಕಿಕ್ ಮತ್ತು ಥ್ರೋ-ಇನ್ ಮಾಡುವಾಗ ರೆಫರಿಗಳು ಕೈ ಎತ್ತಿ 5 ಸೆಕೆಂಡುಗಳ ಕೌಂಟ್‌ಡೌನ್ ತೋರಿಸುತ್ತಾರೆ. ಥ್ರೋ-ಇನ್ ತಡವಾದರೆ ಚೆಂಡು ಎದುರಾಳಿ ತಂಡಕ್ಕೆ ಸಿಗುತ್ತದೆ. ಗೋಲ್ ಕಿಕ್ ತಡವಾದರೆ ಎದುರಾಳಿಗೆ ಕಾರ್ನರ್ ಕಿಕ್ ನೀಡಲಾಗುತ್ತದೆ.
  •  10 ಸೆಕೆಂಡ್ ಸಬ್‌ಸ್ಟಿಟ್ಯೂಷನ್: ಮೈದಾನದಿಂದ ಹೊರಹೋಗುವ ಆಟಗಾರ 10 ಸೆಕೆಂಡುಗಳ ಒಳಗೆ ಹತ್ತಿರದ ಬೌಂಡರಿ ಲೈನ್ ದಾಟಬೇಕು. ತಡ ಮಾಡಿದರೆ, ಹೊಸ ಆಟಗಾರ ಮೈದಾನಕ್ಕೆ ಬರಲು 1 ನಿಮಿಷ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಆ ತಂಡ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ.

ಕಠಿಣ ಶಿಸ್ತು ಕ್ರಮಗಳು:

ಆಟಗಾರರು ಮೈದಾನದಲ್ಲಿ ತೋರುವ ಅಸಭ್ಯ ವರ್ತನೆಯನ್ನು ತಡೆಗಟ್ಟಲು ಈ ಬಾರಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳು ಯಾವುದೆಂದರೆ:

  • ಬಾಯಿ ಮುಚ್ಚಿಕೊಳ್ಳುವುದಕ್ಕೆ ನಿಷೇಧ: ರೆಫರಿ ಅಥವಾ ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸುವಾಗ ಯಾವುದೇ ಆಟಗಾರ ಕೈ ಅಥವಾ ಜರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವಂತಿಲ್ಲ. ಜನಾಂಗೀಯ ಅಥವಾ ನಿಂದನಾತ್ಮಕ ಪದಗಳನ್ನು ಮರೆಮಾಚುವುದನ್ನು ತಡೆಯಲು ಈ ನಿಯಮ ತರಲಾಗಿದ್ದು, ಇದನ್ನು ಉಲ್ಲಂಘಿಸಿದರೆ ನೇರ ‘ರೆಡ್ ಕಾರ್ಡ್’ ನೀಡಲಾಗುತ್ತದೆ.
  •  ಕ್ಯಾಪ್ಟನ್-ಓನ್ಲಿ ನಿಯಮ: ಕೇವಲ ತಂಡದ ನಾಯಕ ಮಾತ್ರ ರೆಫರಿ ಬಳಿ ಬಂದು ನಿರ್ಧಾರಗಳನ್ನು ಪ್ರಶ್ನಿಸಬಹುದು. ಉಳಿದ ಆಟಗಾರರು ರೆಫರಿಯನ್ನು ಮುತ್ತುವರಿದರೆ ತಕ್ಷಣ ಹಳದಿ ಕಾರ್ಡ್ ನೀಡಲಾಗುತ್ತದೆ.

ಆಟಗಾರರಿಗೆ ಕಡ್ಡಾಯ ಬ್ರೇಕ್:

ಈ ಬಾರಿಯ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಬೇಸಿಗೆಯಲ್ಲಿ. ಪಂದ್ಯಗಳನ್ನು ಆಯೋಜಿಸಲಿರುವ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಕೆಲವು ನಗರಗಳಲ್ಲಿ ತಾಪಮಾನವು 38°C (100°F) ಗಿಂತಲೂ ಹೆಚ್ಚಿರುತ್ತದೆ. ಹೀಗಾಗಿ ಕಡ್ಡಾಯ ಬ್ರೇಕ್ ನಿಯಮ ಜಾರಿಗೆ ತರಲಾಗಿದೆ. ಅದರಂತೆ ಈ ಬಾರಿ ಆಟಗಾರರಿಗೆ ಈ ಕೆಳಗಿನ ನಿಯಮಗಳು ಅನ್ವಯವಾಗಲಿದೆ:

  • ಕಡ್ಡಾಯ ಹೈಡ್ರೇಶನ್ ಬ್ರೇಕ್: ಹವಾಮಾನ ಹೇಗಿದ್ದರೂ ಪಂದ್ಯದ ಪ್ರತಿ ಅರ್ಧದ 22ನೇ ನಿಮಿಷದಲ್ಲಿ ಆಟಗಾರರಿಗೆ 3 ನಿಮಿಷಗಳ ಕಡ್ಡಾಯ ಡ್ರಿಂಕ್ಸ್​ ಬ್ರೇಕ್ ವಿರಾಮ ನೀಡಲಾಗುತ್ತದೆ.
  •  ಹೊರ ಹೊಗಲೇಬೇಕು: ಗಾಯದ ನೆಪದಲ್ಲಿ ಆಟವನ್ನು ನಿಲ್ಲಿಸುವ ಔಟ್‌ಫೀಲ್ಡ್ ಆಟಗಾರರು ಮೈದಾನದ ಹೊರಗೆ ಕನಿಷ್ಠ 60 ಸೆಕೆಂಡುಗಳ ಕಾಲ ಚಿಕಿತ್ಸೆ ಪಡೆಯಬೇಕು. ತಲೆಗೆ ಪೆಟ್ಟಾದಾಗ ಅಥವಾ ಗೋಲ್‌ಕೀಪರ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

48 ತಂಡಗಳ ಟೂರ್ನಮೆಂಟ್:

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿಯಲಿವೆ. ಕಳೆದ ಬಾರಿ ಅಂದರೆ, ಖತಾರ್ ವಿಶ್ವಕಪ್​ನಲ್ಲಿ 32 ತಂಡಗಳು ಕಣಕ್ಕಿಳಿದಿದ್ದವು. ಇದೀಗ ತಂಡಗಳ ಸಂಖ್ಯೆ ಹೆಚ್ಚಳದೊಂದಿಗೆ ಟೂರ್ನಿಯ ಸ್ವರೂಪ ಬದಲಾಗಿದೆ. ಅದರಂತೆ ಈ ಬಾರಿ ಈ ಕೆಳಗಿನ ಸ್ವರೂಪದಲ್ಲಿ ಟೂರ್ನಿ ನಡೆಯಲಿದೆ..

  • 12 ಗ್ರೂಪ್: ಕಣಕ್ಕಿಳಿಯುವ 48 ತಂಡಗಳನ್ನು ಒಟ್ಟು 12 ಗುಂಪುಗಳಾಗಿ (Group A ರಿಂದ Group L) ವಿಂಗಡಿಸಲಾಗಿದೆ.
  • 4 ತಂಡಗಳ ಗ್ರೂಪ್: ಪ್ರತಿಯೊಂದು ಗುಂಪಿನಲ್ಲೂ ತಲಾ 4 ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡಲಿದೆ.
  • ಟಾಪ್ 2 ತಂಡಗಳು: ಪ್ರತಿ 12 ಗುಂಪುಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 24 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ.
  • 3ನೇ ಸ್ಥಾನದ ತಂಡ ಕ್ಕೂ ಚಾನ್ಸ್: ಎಲ್ಲಾ 12 ಗುಂಪುಗಳಲ್ಲಿ 3ನೇ ಸ್ಥಾನ ಪಡೆದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 8 ತಂಡಗಳಿಗೆ ಮುಂದಿನ ಹಂತಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಈ ತಂಡಗಳ ಪಾಯಿಂಟ್ಸ್​, ಗಳಿಸಿದ ಗೋಲು, ಗೋಲುಗಳ ವ್ಯತ್ಯಾಸವನ್ನು ಪರಿಗಣಿಸಿ ಈ 8 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
  • ನಾಕೌಟ್​ಗೆ 32 ತಂಡಗಳು: ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಒಟ್ಟು 32 ತಂಡಗಳು (24 + 8) ನಾಕೌಟ್ ಹಂತಕ್ಕೆ ಪ್ರವೇಶಿಸುತ್ತವೆ.

ಹೆಚ್ಚುವರಿ ನಾಕೌಟ್ ಹಂತ:

ಇಷ್ಟು ವರ್ಷ ಫಿಫಾ ವಿಶ್ವಕಪ್‌ನಲ್ಲಿ ಗುಂಪು ಹಂತ ಮುಗಿದ ತಕ್ಷಣ ‘ರೌಂಡ್ ಆಫ್ 16’ (ಪ್ರೀ-ಕ್ವಾರ್ಟರ್ ಫೈನಲ್) ನಡೆಯುತ್ತಿತ್ತು. ಆದರೆ ಈ ಬಾರಿ ಮೊಟ್ಟಮೊದಲ ಬಾರಿಗೆ ‘ರೌಂಡ್ ಆಫ್ 32’ ಹಂತವನ್ನು ಪರಿಚಯಿಸಲಾಗಿದೆ. ಅದರಂತೆ ಈ ಬಾರಿಯ ದ್ವಿತೀಯ ಸುತ್ತಿನಲ್ಲಿ ಪ್ರೀ-ಕ್ವಾರ್ಟರ್ ಫೈನಲ್ ಬದಲಿಗೆ 32 ತಂಡಗಳ ನಡುವೆ ನಾಕೌಟ್ ಪಂದ್ಯಗಳು ನಡೆಯಲಿವೆ.

  • 16 ಪಂದ್ಯಗಳು: ನಾಕೌಟ್ ಸುತ್ತಿನಲ್ಲಿ 32 ತಂಡಗಳ ನಡುವೆ ಒಟ್ಟು 16 ಪಂದ್ಯಗಳು ನಡೆಯಲಿವೆ.
  • ಡೈರೆಕ್ಟ್ ಔಟ್: ಈ ಹಂತದಲ್ಲಿ ಸೋತ 16 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಪ್ರೀ-ಕ್ವಾರ್ಟರ್ ಫೈನಲ್:

ನಾಕೌಟ್ ಸುತ್ತಿನಲ್ಲಿ ಗೆದ್ದ 16 ತಂಡಗಳು ರೌಂಡ್ ಆಫ್-16 ಅಥವಾ ಪ್ರೀ-ಕ್ವಾರ್ಟರ್ ಫೈನಲ್ ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

ಕ್ವಾರ್ಟರ್ ಫೈನಲ್:

ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ 8 ತಂಡಗಳು ಕ್ವಾರ್ಟರ್ ಫೈನಲ್​ಗೆ ತಲುಪಲಿದೆ. ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ ನಾಲ್ಕು ತಂಡಗಳು ಸೆಮಿಫೈನಲ್​ಗೇರಲಿದೆ.

ಸೆಮಿ ಫೈನಲ್​:

ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ 4 ತಂಡಗಳು ಜುಲೈ 14, 2026 (ಮೊದಲ) ರಂದು ಮತ್ತ ಜುಲೈ 15, 2026  ರಂದು (ಎರಡನೇ) ಸೆಮಿಫೈನಲ್​ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್​ಗೇರಲಿದೆ. ಇನ್ನು ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕಂಚಿನ ಪದಕಕ್ಕಾಗಿ ಜುಲೈ 18, 2026 ರಂದು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ಫೈನಲ್ ಮ್ಯಾಚ್:

ಈ ಬಾರಿಯ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯವು ಜುಲೈ 19, 2026 ರಂದು ಅಮೆರಿಕದ ಅತ್ಯಂತ ಪ್ರಸಿದ್ಧ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಜರುಗಲಿದೆ.

Published On - 11:45 am, Wed, 3 June 26

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ