ಅಮೆರಿಕದ ವ್ಯಕ್ತಿಯೊಬ್ಬರಿಗೆ ಕುಟುಂಬ ಸದಸ್ಯರ ಜನ್ಮದಿನಾಂಕದಿಂದ ಒಲಿದು ಬಂದ ಅದೃಷ್ಟ

ಏಳು ವರ್ಷಗಳಿಂದ ಒಂದೇ ರೀತಿಯ ಸಂಖ್ಯೆಯನ್ನು ಬಳಸಿಕೊಂಡು ಲಾಟರಿ (Lottery) ಖರೀದಿ ಮಾಡಿದ ಅಮೆರಿಕದ ವ್ಯಕ್ತಿಯೊಬ್ಬರು  ಭಾರೀ ಮೊತ್ತದ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಬಹುಮಾನ ಪಡೆದ ವ್ಯಕ್ತಿಯನ್ನು ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಎಂದು ಗುರುತಿಸಲಾಗಿದೆ.

ಅಮೆರಿಕದ ವ್ಯಕ್ತಿಯೊಬ್ಬರಿಗೆ ಕುಟುಂಬ ಸದಸ್ಯರ ಜನ್ಮದಿನಾಂಕದಿಂದ ಒಲಿದು ಬಂದ ಅದೃಷ್ಟ
ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 16, 2023 | 1:24 PM

ಏಳು ವರ್ಷಗಳಿಂದ ಒಂದೇ ರೀತಿಯ ಸಂಖ್ಯೆಯನ್ನು ಬಳಸಿಕೊಂಡು ಲಾಟರಿ (Lottery) ಖರೀದಿ ಮಾಡಿದ ಅಮೆರಿಕದ ವ್ಯಕ್ತಿಯೊಬ್ಬರು  ಭಾರೀ ಮೊತ್ತದ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಬಹುಮಾನ ಪಡೆದ ವ್ಯಕ್ತಿಯನ್ನು ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಎಂದು ಗುರುತಿಸಲಾಗಿದ್ದು, ಅವರು ಎರಡು ಕಡೆ ಬೇರೆ ಬೇರೆ ಲಾಟರಿಯನ್ನು ಆಯ್ಕೆ ಮಾಡಿದ್ದು, ಇದೀಗ ಎರಡು ಕಡೆಯಲ್ಲೂ ಅವರಿಗೆ ಬಹುಮಾನ ಬಂದಿದೆ. ಶುಕ್ರವಾರ ನಡೆದ ‘ಲಕ್ಕಿ ಫಾರ್ ಲೈಫ್’ ಡ್ರಾದಲ್ಲಿ, ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ತಮ್ಮ ಕುಟುಂಬದ ಸದಸ್ಯರ ಜನ್ಮದಿನಾಂಕದ ಸಂಖ್ಯೆಯನ್ನು ಬಳಸಿಕೊಂಡು, ಲಾಟರಿಯನ್ನು ಆಯ್ಕೆ ಮಾಡಿದ್ದಾರೆ. ಇದೀಗ ವರ್ಷಕ್ಕೆ 25,000 ಡಾಲರ್ (₹ 2078243.75) ಎಂಬಂತೆ​​ ಬಹುಮಾನ ಬಂದಿದೆ.

ಈ ಬಗ್ಗೆ ಮಾತನಾಡಿದ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು, ನಾನು ಪ್ರತಿದಿನ ಅದೇ ಸಂಖ್ಯೆಯ ಲಾಟರಿಯನ್ನು ಆಯ್ಕೆ ಮಾಡುತ್ತಿದ್ದೆ. ಯಾವುದೇ ಲಾಟರಿಯನ್ನು ಖರೀದಿ ಮಾಡಬೇಕಾದರೆ, ನನ್ನ ಕುಟುಂಬದ ಸದಸ್ಯರ ಜನ್ಮ ದಿನದ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದೇನೆ. ಆದರೆ ಅದೆಷ್ಟೊ ಬಾರಿ ಇದರಿಂದ ಹಿನ್ನಡೆಯಾಗಿ, ನನ್ನ ನಂಬರ್​​ಗೆ ಲಾಟರಿ ಬರುತ್ತಿರಲಿಲ್ಲ. ಇದರಲ್ಲಿ ಏನೋ ಸಮಸ್ಯೆ ಇದೆ ಎಂದುಕೊಂಡಿದೆ ಎಂದು ನಗುತ್ತಾಳೆ ಹೇಳಿದ್ದಾರೆ.

ಉತ್ತರ ಕೆರೊಲಿನಾ ಶಿಕ್ಷಣ ಲಾಟರಿ ಪ್ರಕಾರ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು 2 ಡಾಲರ್​ನ (₹166.31) ಮೊದಲ ಲಾಟರಿಯನ್ನು ವೆಸ್ಟ್ ಮೌಂಟೇನ್ ಸ್ಟ್ರೀಟ್‌ನಲ್ಲಿರುವ 1 ಸ್ಟಾಪ್‌ನಿಂದ ಖರೀದಿಸಿದ್ದಾರೆ. ಶುಕ್ರವಾರ ಡ್ರಾ ಮಾಡಲಾದ ಲಾಟರಿಯಲ್ಲಿ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಪಡೆದ ಸಂಖ್ಯೆಯ ಲಾಟರಿಗೆ ಬಹುಮಾನ ಬಂದಿದೆ. ಇನ್ನೊಂದು ಲಾಟರಿ ಹೈ ಪಾಯಿಂಟ್‌ನಲ್ಲಿರುವ ಈಸ್ಟ್‌ಚೆಸ್ಟರ್ ಡ್ರೈವ್‌ನಲ್ಲಿರುವ ಚಾರ್ಲಿಯ ಔಟ್‌ಲೆಟ್‌ನಿಂದ ಡ್ರಾ ಮಾಡಲಾಗಿದೆ. ಅದಕ್ಕೂ ಕೂಡ ಬಹುಮಾನ ಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಪ್ಪನ ಅಂಗಡಿಯಿಂದ ಮಗಳು ಖರೀದಿಸಿದ ಲಾಟರಿಗೆ ಒಲಿದು ಬಂತು ಮೊದಲ ಬಹುಮಾನ ₹75 ಲಕ್ಷ

ಇತ್ತೀಚೆಗೆಷ್ಟೇ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಈ ಹಣವನ್ನು ಹೇಗೆ ಬಳಸಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಈ ಹಣವನ್ನು ನನ್ನ ಮನೆಗಾಗಿ ಉಪಯೋಗ ಮಾಡಿಕೊಳ್ಳುವೇ ಎಂದು ಹೇಳಿದ್ದಾರೆ. ಇವರು ಸೋಮವಾರದಂದು ಲಾಟರಿಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಎರಡು ಆಯ್ಕೆಯನ್ನು ನೀಡಲಾಗಿತ್ತು. ವರ್ಷಕ್ಕೆ 25,000 ಡಾಲರ್ ಅಥವಾ ಒಮ್ಮೆಗೆ 390,000 ಡಾಲರ್ (₹32436105.00)​​​ ಮೊತ್ತವನ್ನು ಪಡೆಯುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು 390,000 ಡಾಲರ್​​ನ ಒಟ್ಟು ಮೊತ್ತವನ್ನು ಆಯ್ಕೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:15 pm, Wed, 16 August 23

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ