Canada: ಕೆನಡಾದಲ್ಲಿ ಫೈಟರ್ ಜೆಟ್ ಶೂಟೌಟ್; ಅಮೆರಿಕ ಯುದ್ಧವಿಮಾನದಿಂದ 3ನೇ ಅಪರಿಚಿತ ವಸ್ತು ನಾಶ

UFO Shot Down By US Jet In Canada: ಕೆನಡಾ ಮತ್ತು ಅಮೆರಿಕದ ವಾಯುಪ್ರದೇಶದ ಮೇಲೆ ನಿಯಮ ಮೀರಿ ಸಂಚರಿಸುತ್ತಿದ್ದ ಕಾರಣಕ್ಕೆ ಮೂರು ಆಕಾಶಕಾಯ ವಸ್ತುಗಳನ್ನು ಹೊಡೆದುರಳಿಸಲಾಗಿದೆ. ಕೆನಡಾದ ಯುಕೋನ್ ಪ್ರಾಂತ್ಯದ ಆಗಸದ ಮೇಲೆ ಹಾರುತ್ತಿದ್ದ ವಸ್ತುವೊಂದನ್ನು ಅಮೆರಿಕದ ಯುದ್ಧವಿಮಾನ ಶೂಟ್ ಮಾಡಿ ನಾಶಗೊಳಿಸಿದೆ.

Canada: ಕೆನಡಾದಲ್ಲಿ ಫೈಟರ್ ಜೆಟ್ ಶೂಟೌಟ್; ಅಮೆರಿಕ ಯುದ್ಧವಿಮಾನದಿಂದ 3ನೇ ಅಪರಿಚಿತ ವಸ್ತು ನಾಶ
ಎಫ್22 ರಾಪ್ಟರ್, ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 12, 2023 | 9:03 AM

ವಾಷಿಂಗ್ಟನ್: ಅಮೆರಿಕ ಮತ್ತು ಕೆನಡಾ ದೇಶಗಳು ತಮ್ಮ ವಾಯು ಪ್ರದೇಶದ ವ್ಯಾಪ್ತಿಯಲ್ಲಿ (Canada And US Air Space) ಕಾಣುವ ಯಾವುದೇ ಅಪರಿಚಿತ ವಸ್ತುವನ್ನು (UFO) ಸುಮ್ಮನೆ ಬಿಡದಿರಲು ನಿರ್ಧರಿಸಿದಂತಿದೆ. ಶುಕ್ರವಾರ ಅಮೆರಿಕದ ಅಲಾಸ್ಕ ಪ್ರಾಂತ್ಯದ ಆಗಸದ ಮೇಲೆ ಹಾರಾಡುತ್ತಿದ್ದ ಆಪರಿಚಿತ ಆಕಾಶಕಾಯವೊಂದನ್ನು ಅಮೆರಿಕದ ರಕ್ಷಣಾ ಪಡೆ ಹೊಡೆದುರುಳಿಸಿದ ಘಟನೆ ನಡೆದಿತ್ತು. ಅದಾಗಿ ಮರುದಿನ, ಅಂದರೆ ಶನಿವಾರ ಕೆನಡಾದ ಯೂಕೋನ್ (Yukon, Canada) ಪ್ರಾಂತ್ಯದ ಆಗಸದ ಮೇಲೆ ಕಾಣಿಸಿದ ಮತ್ತೊಂದು ಅಪರಿಚಿತ ವಸ್ತುವನ್ನು ಹೊಡೆದುರುಳಿಸಲಾಗಿದೆ. ಇದು ಕೆನಡಾ ಮತ್ತು ಅಮೆರಿಕದಲ್ಲಿ ನಡೆದಿರುವ 3ನೇ ಘಟನೆಯಾಗಿದೆ.

ಯುಕೋನ್​ನ ವಾಯುಪ್ರದೇಶದ 40 ಸಾವಿರ ಅಡಿ ಎತ್ತರದಲ್ಲಿ ಈ ವಸ್ತು ಹಾರಾಡುತ್ತಿತ್ತು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇದನ್ನು ಹೊಡೆದುರುಳಿಸಬೇಕೆಂದು ಆದೇಶ ನೀಡಿದರು. ಬಳಿಕ ಕೆನಡಾ ಮತ್ತು ಅಮೆರಿಕದ ಯುದ್ಧವಿಮಾನಗಳು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದವು. ಅಮೆರಿಕದ ಎಫ್-22 ವಿಮಾನ ಈ ವಸ್ತುವನ್ನು ನಾಶ ಮಾಡಿತು ಎನ್ನಲಾಗಿದೆ.

ಕೆನಡಾದ ವಾಯುಪ್ರದೇಶ ನಿಯಮಗಳನ್ನು ಮುರಿದಿದ್ದರಿಂದ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಕೆನಡಾ ಹೇಳಿದೆ. ಸದ್ಯ ಈ ಅಪರಿಚತ ವಸ್ತುವ ಅವಶೇಷಗಳನ್ನು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: US Security: ಅಲಸ್ಕಾ ಪ್ರಾಂತ್ಯದಲ್ಲಿ ಎತ್ತರದ ಆಕಾಶಕಾಯ ಹೊಡೆದುರುಳಿಸಿದ ಅಮೆರಿಕ, ಚೀನಾ ಕೈವಾಡ ಶಂಕೆ

ಕಳೆದ ವಾರ ಚೀನಾದ ಗೂಢಚರ್ಯೆ ಬಲೂನು ಎನ್ನಲಾದ ವಸ್ತುವನ್ನು ಅಮೆರಿಕದ ಕ್ಷಿಪಣಿಗಳು ಹೊಡೆದುರುಳಿಸಿದ್ದವು. ಅಮೆರಿಕದ ಸೂಕ್ಷ್ಮ ಸ್ಥಳಗಳ ಮೇಲೆ ಹಾದು ಹೋಗಿದ್ದ ಈ ಬಲೂನು ಸಾಗರ ಪ್ರದೇಶದ ಮೇಲೆ ಬಂದ ಬಳಿಕ ನಾಶ ಮಾಡಲಾಯಿತು. ನಾಗರಿಕರ ಪ್ರದೇಶದ ಮೇಲೆ ಬಲೂನು ಹೊಡೆದರೆ ಜನರಿಗೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಕಾದುನೋಡಿ ಹೊಡೆಯಲಾಗಿತ್ತು.

ಇನ್ನು, ಶುಕ್ರವಾರ ಅಲಾಸ್ಕದಲ್ಲಿ ಅಪರಿಚಿತ ಆಕಾಶಕಾಯವನ್ನು ಹೊಡೆಯಲಾಗಿತ್ತು. ವಿಮಾನಗಳು ಪ್ರಯಾಣಿಸುವ 40 ಸಾವಿರ ಅಡಿ ಎತ್ತರದ ಮಟ್ಟದಲ್ಲಿ ಈ ಅಪರಿಚಿತ ವಸ್ತು ಗಂಟೆಗೆ 35-50 ಕಿಮೀ ವೇಗದಲ್ಲಿ ಹೋಗುತ್ತಿತ್ತೆನ್ನಲಾಗಿದೆ. ಅಲಾಸ್ಕ ಮೂಲಕ ನಾರ್ತ್ ಪೋಲ್ ಪ್ರದೇಶಕ್ಕೆ ಹೋಗುತ್ತಿದ್ದ ಈ ವಸ್ತುವನ್ನು ಅಮೆರಿಕದ ರಾಡಾರ್​ಗಳು ಮೊದಲು ಗುರುತಿಸಿ ಅಲರ್ಟ್ ಹೊರಡಿಸಲಾಯಿತು. ಬಳಿಕ ಶುಕ್ರವಾರ ಸಂಜೆ ಅಮೆರಿಕದ ಯುದ್ಧವಿಮಾನವೊಂದು ಈ ಯುಎಫ್​ಒವನ್ನು ನಾಶ ಮಾಡಿತೆನ್ನಲಾಗಿದೆ. ಆದರೆ, ಶುಕ್ರವಾರ ಮತ್ತು ಶನಿವಾರ ಹೊಡೆದುರುಳಿಸಲಾದ ಅಪರಿಚಿತ ಆಕಾಶಕಾಯಗಳು ಯಾವುವು ಎಂಬ ಸಂಗತಿ ಅಧ್ಯಯನಗಳ ಬಳಿಕ ಗೊತ್ತಾಗಬಹುದು. ಚೀನಾ ಸ್ಪೈ ಬಲೂನು ಹರಿಬಿಟ್ಟಂತೆ ಈ ಅಪರಿಚಿತ ವಸ್ತುಗಳೂ ಗೂಢಚಾರಿಕೆಗೆ ಬಳಸಿಕೊಳ್ಳಲಾಗಿತ್ತಾ ಎಂಬುದು ಗೊತ್ತಾಗಬೇಕಿದೆ.

Published On - 9:03 am, Sun, 12 February 23

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ