ಅಮೆರಿಕ: ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಹಿಳೆ ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಡೇನಿಯಲ್ ಅಯೋಕಾ ಎನ್ನುವ ಮಹಿಳೆ ಲಾಸ್ ಏಂಜಲೀಸ್ನಲ್ಲಿ ವಾಸವಿದ್ದಳು. ಕ್ಯಾಲಿಫೋರ್ನಿಯಾದಲ್ಲಿ ಗ್ರಹಣ ಸಂಭವಿಸುವ ಗಂಟೆಗಳ ಮೊದಲು ಆಕೆ ತನ್ನಿಬ್ಬರು ಪ್ರೀತಿಪಾತ್ರರನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾಳೆ.

ಜ್ಯೋತಿಷ್ಯವನ್ನು ನಂಬಬೇಕು ಆದರೆ ಪ್ರಾಣ ಕಳೆದುಕೊಳ್ಳುವ ಮಟ್ಟಿಗಲ್ಲ, ಆದರೆ ಈ ಮಹಿಳೆ ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಡೇನಿಯಲ್ ಅಯೋಕಾ ಎನ್ನುವ ಮಹಿಳೆ ಲಾಸ್ ಏಂಜಲೀಸ್ನಲ್ಲಿ ವಾಸವಿದ್ದಳು. ಕ್ಯಾಲಿಫೋರ್ನಿಯಾದಲ್ಲಿ ಗ್ರಹಣ ಸಂಭವಿಸುವ ಗಂಟೆಗಳ ಮೊದಲು ಆಕೆ ತನ್ನಿಬ್ಬರು ಪ್ರೀತಿಪಾತ್ರರನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾಳೆ.
ಗ್ರಹಣವು ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಆಕೆ ಟಿವಿಯಲ್ಲಿ ನೋಡಿದ್ದಾಳೆ. ಬಳಿಕ ಜಾನ್ಸನ್ಗೆ ಇರಿದು ಕಾರಿನಲ್ಲಿ 8 ತಿಂಗಳ ಮಗು ಹಾಗೂ 9 ವರ್ಷದ ಮಗಳೊಂದಿಗೆ ಕುಳಿತು ಹೋಗಿದ್ದಾಳೆ, ವೇಗವಾಗಿ ಕಾರು ಚಲಾಯಿಸಿ ಇಬ್ಬರು ಮಕ್ಕಳನ್ನು ಕಾರಿನಿಂದ ಕೆಳಗೆ ತಳ್ಳಿ ಬಳಿಕ 100 ಕಿ.ಮೀ ದೂರ ಚಲಿಸಿ ಮರಕ್ಕೆ ಡಿಕ್ಕಿ ಹೊಡೆಸಿದ್ದಾಳೆ.
ಘಟನೆಯಲ್ಲಿ 8 ತಿಂಗಳ ಮಗು ಸಾವನ್ನಪ್ಪಿದ್ದು, ಹಿರಿಯ ಮಗಳು ಗಾಯಗೊಂಡಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ. ಆದರೆ ಪೊಲೀಸರು ಗ್ರಹಣಕ್ಕೆ ಹೆದರಿ ಸಾಯುವಂತಹ ಯಾವುದೇ ಲಕ್ಷಗಳು ಕಂಡುಬಂದಿಲ್ಲ, ಕೊಲೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: Viral News: ಭೀಕರ ಅಪಘಾತದಲ್ಲಿ ಯುವಕನ ಕಣ್ಣಿನೊಳಗೆ ನುಗ್ಗಿದ ಬೈಕ್‌ನ ಬ್ರೇಕ್ ಹ್ಯಾಂಡಲ್
ಅಪಘಾತದಲ್ಲಿ ಜಾನ್ಸನ್ ಅವರ ದೇಹವು ತುಂಬಾ ವಿರೂಪಗೊಂಡಿದೆ ಮತ್ತು ಗುರುತಿಸುವುದು ಕಷ್ಟಕರವಾಗಿತ್ತು. ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸರಿಗೆ ರಕ್ತಸಿಕ್ತ ಹೆಜ್ಜೆಗುರುತುಗಳು ಮತ್ತು 29 ವರ್ಷದ ಜಾನ್ಸನ್ ಅವರ ದೇಹ ಪತ್ತೆಯಾಗಿದೆ. ಅವರ ಹೃದಯಕ್ಕೆ ಚೂರಿ ಇರಿಯಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Thu, 11 April 24