ಇರಾನ್​ನಲ್ಲಿ ಬಂದೂಕುಧಾರಿಯಿಂದ ಫೈರಿಂಗ್‌, ಕನಿಷ್ಠ 15 ಜನ ಸಾವು, ಹಲವರಿಗೆ ಗಾಯ

| Updated By: ರಮೇಶ್ ಬಿ. ಜವಳಗೇರಾ

Updated on: Oct 26, 2022 | 10:40 PM

ಇರಾನ್​ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿರುವ ಮಧ್ಯೆ ಶಿಯಾ ಸಮುದಾಯದ ಯಾತ್ರಾಸ್ಥಳದಲ್ಲಿ ಭಕ್ತರ ಮೇಲೆ ಬಂದೂಕುಧಾರಿಗಳು ಫೈರಿಂಗ್‌ ನಡೆಸಿದ್ದಾರೆ.

ಇರಾನ್​ನಲ್ಲಿ ಬಂದೂಕುಧಾರಿಯಿಂದ ಫೈರಿಂಗ್‌, ಕನಿಷ್ಠ 15 ಜನ ಸಾವು, ಹಲವರಿಗೆ ಗಾಯ
Gunmen attack Shiite holy site in Iran
Follow us on

ಇರಾನ್ ನಲ್ಲಿ ವಸ್ತ್ರ ಸಂಹಿತೆ ವಿರೋಧಿ ಚಳವಳಿ ವ್ಯಾಪಕಗೊಂಡಿದ್ದು, ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಇದರ ಮಧ್ಯೆ ಬಂದೂಕುಧಾರಿಗಳು ಶಿಯಾ ಸಮುದಾಯದ ಪ್ರಮುಖ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಶಿರಾಜ್​ ನಗರದಲ್ಲಿ ಈ ದುರ್ಘಟನೆ ನಡೆದಿದೆ.

ಶಿರಾಜ್‌ ನಗರದಲ್ಲಿ ಶಿಯಾ ಸಮುದಾಯದ ಭಕ್ತರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ಇಬ್ಬರು ಬಂದೂಕುಧಾರಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಇರಾನ್​ನಲ್ಲಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಅಲ್ಲಿನ ಪರಮಾಣು ಶಕ್ತಿ ಸಂಸ್ಥೆಯ ವಿವರಗಳನ್ನು ಹ್ಯಾಕ್ ಮಾಡಲಾಗಿದೆ!

ಈ ಹಿಂದೆ ಸುನ್ನಿ ಉಗ್ರಗಾಮಿಗಳು ಬಹುಸಂಖ್ಯಾತ ಶಿಯಾ ಸಮುದಾಯದ ಪವಿತ್ರ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು. ಕಳೆದ ಹಲವು ದಿನಗಳಿಂದ ಇರಾನ್​ ಸರ್ಕಾರದ ವಿರುದ್ಧ ವಸ್ತ್ರ ಸಂಹಿತೆ ವಿಚಾರ ಸೇರಿದಂತೆ ಹಲವು ವಿಚಾರಕ್ಕೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಈ ದಾಳಿ ನಡೆಸಿದ್ದು, ಆತಂಕಕ್ಕೆ ಕಾರಣವಾಗಿದೆ.

ಇರಾನ್ ನ ಕಟ್ಟುನಿಟ್ಟಾದ ಇಸ್ಲಾಮಿಕ್ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿ ಬಂಧನಕ್ಕೊಳಗಾದ 22-ವರ್ಷ-ವಯಸ್ಸಿನ ಮಹ್ಸಾ ಅಮಿನಿ ಕಸ್ಟಡಿಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ನಂತರ ಆ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಸರ್ಕಾರ ಬಲಪ್ರಯೋಗ ನಡೆಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.

ಅಸಲಿಗೆ ಇರಾನಲ್ಲಿ ಮಹಿಳೆಯರಿಗೆ ಕಡ್ಡಾಯಗೊಳಿಸಿರುವ ಹಿಜಾಬ್​ ಅನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾಗಿದ್ದು. ಆದರೆ ಕ್ರಮೇಣ ಪ್ರತಿಭಟನೆಗಳು ಅಲ್ಲಿನ ಸರ್ಕಾರವನ್ನು ನಡೆಸುತ್ತಿರುವ ಧಾರ್ಮಿಕ ಗುರುಗಳ (ಮೌಲ್ವಿ) ಕಡೆ ತಿರುಗಿದ್ದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

Published On - 10:36 pm, Wed, 26 October 22