ಜೋಸೆಫ್ ಸ್ಟಾಲಿನ್ ಮಗಳು ಮತ್ತು ಭಾರತದ ಸೊಸೆ ಸ್ವೆಟ್ಲಾನಾ ಕೆಲ ಸಮಯದವರೆಗೆ ಇಂಡೋ-ರಷ್ಯಾ ಸಂಬಂಧ ಹಾಳು ಮಾಡಿದ್ದು ನಿಮಗೆ ಗೊತ್ತೇ?
ಆಕೆಯ ಪತಿ ಹಿಂದಿನ ವರ್ಷದ ನವೆಂಬರ್ ನಲ್ಲಿ ಸ್ವರ್ಗಸ್ಥರಾಗಿದ್ದರು ಮತ್ತು ಅವರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸುವ ಪ್ರಾಮಿಸನ್ನು ಆಕೆ ಪತಿಗೆ ಮಾಡಿದ್ದಳು. ಅವರು ನಿಧನ ಹೊಂದಿ ಆರು ತಿಂಗಳು ಗತಿಸಿದ್ದವು. ಅಸ್ಥಿಯನ್ನು ವಿಸರ್ಜಿದ ಬಳಿಕ ಆಕೆ ಇಂಡಿಯದಲ್ಲೇ ಉಳಿದುಕೊಂಡಿದ್ದಳು. ಈಗ ಅಮೆರಿಕದಲ್ಲಿ ಆಶ್ರಯ ಕೋರಿ ನಮ್ಮ ರಾಯಭಾರಿ ಕಚೇರಿಗೆ ಬಂದಿದ್ದಳು,’ ಅಂತ ಸೆಲೆಸ್ಟೆ ಬರೆದಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಮೊದಲಿನಿಂದಲೂ ಬಹಳ ಚೆನ್ನಾಗಿವೆ ಅದರಲ್ಲೇನೂ ಸಂದೇಹವೇ ಬೇಡ. ರಷ್ಯಾ, ಸೋವಿಯತ್ ಯೂನಿಯನ್ ಭಾಗವಾಗಿದ್ದಾಗಲೂ ರಾಜತಾಂತ್ರಿಕ ಸಂಬಂಧಗಳು ಉತ್ತಮವಾಗಿದ್ದವು. ಈಗ ಉಕ್ರೇನ್ ಮೇಲೆ ವ್ಲಾದಿಮಿರ್ ಪುಟಿನ್ ದಂಡೆತ್ತಿ ಹೋಗಿರುವ ಸಂದರ್ಭದಲ್ಲಿ ಭಾರತ ರಷ್ಯಾದ ಕ್ರಮವನ್ನ ಖಂಡಿಸಿದೆಯಾದರೂ ಸಂಬಂಧಗಳು ಹಳಸಿಲ್ಲ. ಆದರೆ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯದಲ್ಲಿ ಸ್ವಲ್ಪ ಸಮಯದವರೆಗೆ ಬಿರುಕು ಕಾಣಿಸಿದ ಸಂದರ್ಭ ಎದುರಾಗಿದ್ದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅದು ನಡೆದಿದ್ದು 1967ರಲ್ಲಿ. ಸೋವಿಯತ್ ಒಕ್ಕೂಟದ ಮಾಜಿ ನಾಯಕ ಜೋಸೆಫ್ ಸ್ಟಾಲಿನ್ ಮಗಲು ಸ್ವೆಟ್ಲಾನಾ ಅಲ್ಲಿಲುಯೇವಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸದರಿ ಪ್ರಕರಣ ಸಂಭವಿಸಿತ್ತು. ಸ್ವೆಟ್ಲಾನಾ ಆಗ ಭಾರತಕ್ಕೆ ಬಂದರಾದರು ಮತ್ಯಾವತ್ತೂ ಸೋವಿಯತ್ ಒಕ್ಕೂಟಕ್ಕೆ ಹಿಂತಿರುಗಲಿಲ್ಲ.
ರಿಚರ್ಡ್ ಸೆಲೆಸ್ಟೆ ಬಯಾಗ್ರಫಿಯಲ್ಲಿ ಉಲ್ಲೇಖ!
ಅಮೆರಿಕದ ಮಾಜಿ ಭಾರತ ರಾಯಭಾರಿ ರಿಚರ್ಡ್ ಸೆಲೆಸ್ಟೆ ಅವರು ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದು ಅದರಲ್ಲಿ ಸ್ವೆಟ್ಲಾನಾರ ಭಾರತದಿಂದ ಅಮೆರಿಕಾಗೆ ಸೆನ್ಸೇಷನಲ್ ಪಲಾಯನ ಸಂಗತಿಯೂ ಸೇರಿದಂತೆ ಇನ್ನೂ ಹಲವಾರು ಕುತೂಹಲಕಾರಿ ವಿಷಯಗಳನ್ನು ದಾಖಲಿಸಿದ್ದಾರೆ.
1967 ರ ಮಾರ್ಚ್ ತಿಂಗಳಲ್ಲಿ ಅದೊಂದು ರಾತ್ರಿ ಸೆಲೆಸ್ಟೆ ಅವರನ್ನು ರಾತ್ರೋರಾತ್ರಿ ದೆಹಲಿಯಲ್ಲಿನ ಅಮೆರಿಕ ರಾಯಭಾರಿ ಕಚೇರಿಗೆ ಕರೆಸಲಾಯಿತು. ಅವರು ಅಲ್ಲಿ ತಲುಪಿದಾಗ ಸ್ವೆಟ್ಲಾನಾ ಎರಡು ಸೂಟ್ ಕೇಸ್ ಗಳೊಂದಿಗೆ ತನಗಾಗಿ ಕಾಯುತ್ತಿರುವುದನ್ನು ಕಂಡರು. ಅವರು ತಮ್ಮ ರಷ್ಯನ್ ಪಾಸ್ ಪೋರ್ಟ್ ತೋರಿಸಿ ತಾನು ಸ್ಟ್ಯಾಲಿನ್ ಅವರ ಮಗಳು ಅಂತ ಹೇಳಿ ಆಶ್ರಯ ಕೋರಿದರು.
ರಷ್ಯನ್ನರ ಕುತಂತ್ರ?
‘ರಷ್ಯನ್ನರು ನಮ್ಮೊಂದಿಗೆ ಯಾವುದೋ ಗೇಮ್ ಆಡಲು ತಯಾರು ನಡೆಸಿದ್ದಾರೆಂಬ ಅನುಮಾನ ಕೂಡಲೇ ನನ್ನಲ್ಲಿ ಹುಟ್ಟಿಕೊಂಡಿತ್ತು. ಕೆಲವೇ ವಾರಗಳ ಹಿಂದೆ ರಷ್ಯನ್ನರು ನವದೆಹಲಿಯಲ್ಲಿದ್ದ ರಾಯಭಾರಿ ಕಚೇರಿಗೆ ಹೊಸ ನಂಬರ್ 2 ಅಧಿಕಾರಿಯೊಬ್ಬನನ್ನು ಕಳಿಸಿದ್ದರು ಮತ್ತು ನಮಗೆ ಲಭ್ಯವಾಗಿದ್ದ ಮಾಹಿತಿ ಪ್ರಕಾರ ಅವನು ಸುಳ್ಳು ಪ್ರಚಾರ ತಂತ್ರದಲ್ಲಿ ಪರಿಣಿತನಾಗಿದ್ದ,’ ಎಂದು ಸೆಲೆಸ್ಟೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
‘.. ಸೋವಿಯತ್ ಗುಪ್ತಚರ ಸಂಸ್ಥೆ ಅಮೆರಿಕನ್ ಯುವಕರನ್ನು ನಿಯಮಿತವಾಗಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿತ್ತು. ಸ್ಟಾಲಿನ್ ಮಗಳನ್ನು ರಷ್ಯನ್ ಕುತಂತ್ರದ ಒಂದು ಭಾಗ ಅಂತ ನಾನು ಭಾವಿಸಿದ್ದೆ.’
ಭಾರತೀಯನ ಪತ್ನಿ!
‘ಆಕೆ ಹೇಳಿದ ಕತೆಯನ್ನು ನಂಬುವುದು ಸುಲಭವಾಗಿರಲಿಲ್ಲ. ಆಕೆ ತಾನು ಸ್ಟಾಲಿನ್ ಮಗಳು ಅಂತ ಹೇಳಿಕೊಂಡಳಲ್ಲದೆ ಮಾಸ್ಕೋದಲ್ಲಿನ ವಿದೇಶಿ ಭಾಷಾ ಮುದ್ರಣಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಭಾರತೀಯ ಸದೃಹಸ್ಥರೊಬ್ಬರ (ಬ್ರಿಜೇಶ್ ಸಿಂಗ್) ಪತ್ನಿ ಅಂತಲೂ ಹೇಳಿದಳು,’ ಎಂದು ಸೆಲೆಸ್ಟೆ ಬರೆದಿದ್ದಾರೆ.
ಆಕೆಯ ಪತಿ ಹಿಂದಿನ ವರ್ಷದ ನವೆಂಬರ್ ನಲ್ಲಿ ಸ್ವರ್ಗಸ್ಥರಾಗಿದ್ದರು ಮತ್ತು ಅವರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸುವ ಪ್ರಾಮಿಸನ್ನು ಆಕೆ ಪತಿಗೆ ಮಾಡಿದ್ದಳು. ಅವರು ನಿಧನ ಹೊಂದಿ ಆರು ತಿಂಗಳು ಗತಿಸಿದ್ದವು. ಅಸ್ಥಿಯನ್ನು ವಿಸರ್ಜಿದ ಬಳಿಕ ಆಕೆ ಇಂಡಿಯದಲ್ಲೇ ಉಳಿದುಕೊಂಡಿದ್ದಳು. ಈಗ ಅಮೆರಿಕದಲ್ಲಿ ಆಶ್ರಯ ಕೋರಿ ನಮ್ಮ ರಾಯಭಾರಿ ಕಚೇರಿಗೆ ಬಂದಿದ್ದಳು,’ ಅಂತ ಸೆಲೆಸ್ಟೆ ಬರೆದಿದ್ದಾರೆ.
ಗಲಾಟೆ ಮಾಡಬಹುದಾದ ಆತಂಕ!
‘ಯಾವುದೇ ಕ್ಷಣದಲ್ಲಿ ಆಕೆ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಅಥವಾ ಸೋವಿಯತ್ ರಾಯಭಾರ ಕಚೇರಿ ಆಕೆಯನ್ನು ಅಪಹರಿಸಿದೆ ಎಂದು ಆರೋಪಿಸಬಹುದೆಂಬ ಆತಂಕದಲ್ಲಿ ನಾವಿದ್ದೆವು, ಅವಳನ್ನು ಹಾಜರುಪಡಿಸಲು ನಮಗೆ ಆದೇಶಿಸಲಾಗುವುದು ಮತ್ತು ಸೋವಿಯತ್ ಗಳು ಅದುವರೆಗೆ ಮಾಡಿದ್ದ ವ್ಯರ್ಥ ಮತ್ತು ಆಧಾರರಹಿತ ಆರೋಪಗಳನ್ನು ಅವಳು ಖಚಿತಪಡಿಸುವ ಪ್ರಯತ್ನ ಮಾಡುತ್ತಾಳೆ ಅಂತ ನಾವು ಭಾವಿಸಿದ್ದೆವು,’ ಅಂತ ಅವರು ಹೇಳಿದ್ದಾರೆ.
ಆ ವಾರಾಂತ್ಯ ಅಂದರೆ-ಮಾರ್ಚ್ 5 ಸೋಮವಾರ-ದೆಹಲಿಗೆ ಆಗಮಿಸಿ ರಷ್ಯಾದ ರಾಯಭಾರ ಕಚೇರಿ ಆವರಣದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿರುವುದಾಗಿ ಸ್ವೆಟ್ಲಾನಾ ಅವರು ಅಮೇರಿಕನ್ ಅಧಿಕಾರಿಗಳಿಗೆ ಹೇಳಿದ್ದರು. ಗುರುವಾರ ನಸುಕಿನ ಜಾವ ಆಕೆ ಏರೋಫ್ಲೋಟ್ ವಿಮಾನದ ಮೂಲಕ ಮಾಸ್ಕೋಗೆ ವಾಪಸ್ಸಾಗುತ್ತಾಳೆ ಎಂದು ರಷ್ಯನ್ನರು ನಿರೀಕ್ಷಿಸಿದ್ದರು.
ಸ್ವೆಟ್ಲಾನಾ ಸಸ್ಯಾಹಾರಿ!
ಸೋವಿಯತ್ ರಾಯಭಾರಿಯು ಮಧ್ಯಾಹ್ನದ ಊಟಕ್ಕೆ ಆಕೆಯನ್ನು ಆಹ್ವಾನಿಸಿ ಪೋಲಿಷ್ ಹ್ಯಾಮ್ ಅನ್ನು ಬಡಿಸಿದಾಗ ಆಕೆ ತನ್ನ ತಟ್ಟೆಯಲ್ಲಿ ತರಕಾರಿಗಳನ್ನು ತಿಂದಳೇ ಹೊರತು ಹ್ಯಾಮ್ ಅನ್ನು ಮಾತ್ರ ಮುಟ್ಟಲಿಲ್ಲ. ಆಕೆಯ ವರ್ತನೆ ರಾಯಭಾರಿಯನ್ನು ಅಸಮಾಧಾನಗೊಳಿಸಿತ್ತು. ‘ಏನಾಗಿದೆ ನಿಮಗೆ, ನೀವೊಬ್ಬ ಸಸ್ಯಾಹಾರಿ, ಹಿಂದೂ ಆಗಿದ್ದೀರಾ?’ ಸೆಲೆಸ್ಟಾ ಆಕೆಯನ್ನು ಕೇಳಿದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದೆ.
ರಾಯಭಾರಿ ಕಚೇರಿಯಲ್ಲಿ ಆಕೆಯೊಂದಿಗೆ ಮಾತನಾಡಿದ ನಂತರ, ಅಮೆರಿಕನ್ನರಿಗೆ ಮೂರು ಆಯ್ಕೆಗಳು ಉಳಿದವು- ಭಾರತ ಸರ್ಕಾರ ಗಮನಕ್ಕೆ ತಂದು ಆಕೆ ಮಾಸ್ಕೋಗೆ ವಾಪಸ್ಸಾಗಲು ಅನುಕೂಲವಾಗುವಂತೆ ಸಹಾಯಕ್ಕಾಗಿ ಔಪಚಾರಿಕ ವಿನಂತಿಯನ್ನು ಮಾಡವುದು, ಆಕೆಯನ್ನು ನಿರ್ಲಕ್ಷ್ಯಸಿ ಕಚೇರಿಯಿಂದ ಸಾಗಹಾಕುವುದು ಅಥವಾ ಯುಎಸ್ ಗೆ ವೀಸಾ ನೀಡಿ ವಿಮಾನ್ ಟೆಕೆಟ್ ಅರ್ಧಬೆಲೆಯನ್ನು ತೆರುವಂತೆ ಆಕೆಗೆ ಹೇಳುವುದು,’ ಎಂದು ಸೆಲೆಸ್ಟಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ವೀಸಾ ನೀಡುವ ನಿರ್ಧಾರ
ಆಂತಿಮವಾಗಿ ಆಕೆಗೆ ವೀಸಾ ನೀಡುವ ನಿರ್ಧಾರಕ್ಕೆ ಬಂದ ಯುಎಸ್ ರಾಯಭಾರಿ ಕಚೇರಿ ಅಧಿಕಾರಿಗಳು, ಆಕೆ ಟಿಕೆಟ್ ವ್ಯವಸ್ಥೆಯನ್ನು ತಾನೇ ಮಾಡಿಕೊಳ್ಳುತ್ತಾಳೆಯೇ ಎಂದು ಕೇಳಿದರು.
ಅದೇ ದಿನ ರಾತ್ರಿಸ ಸುಮಾರು 8.30 ಕ್ಕೆ ಒಂದು ಕೇಬಲ್ ಸಂದೇಶವನ್ನು ರವಾನಿಸಲಾಯಿತು: ‘ಸ್ಟ್ಯಾಲಿನ್ ಮಗಳು ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯೊಬ್ಬರು ಆಶ್ರಯ ಕೇಳಿಕೊಂಡು ಸಾಯಂಕಾಲ 7.10 ಕ್ಕೆ ನಮ್ಮ ರಾಯಭಾರಿ ಕಚೇರಿಗೆ ಬಂದಿರುತ್ತಾರೆ. ಅವರ ಗುರುತು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ. ಆಕೆ ಕಚೇರಿಯಲ್ಲಿ ಗಲಾಟೆ ಎಬ್ಬಿಸಬಹುದೆಂಬ ಸಂಶಯ ನಮ್ಮಲ್ಲಿ ಹುಟ್ಟಿಕೊಂಡಿದೆ. ಆಕೆಗೆ ಯುಎಸ್ ವೀಸಾ ನೀಡಿ ರಾತ್ರಿ ಒಂದು ಗಂಟೆಗೆ ಕ್ವಾಂಟಾಸ್ ಇಟಿಡಿ ವಿಮಾನದ ಮೂಲಕ ವಾಷಿಂಗ್ಟನ್ ಬದಲು ರೋಮ್ ಗೆ ಕಳಿಸುವ ಯೋಚನೆ ಮಾಡುತ್ತಿದ್ದೇವೆ. ನಿಮ್ಮ ಸಲಹೆಯನ್ನು ಎದುರು ನೋಡುತ್ತಿದ್ದೇವೆ.’
ದೆಹಲಿಯಿಂದ ರೋಮ್ಗೆ
ಬೆಳಗಿನ ಜಾವ 1 ಗಂಟೆಯ ಫ್ಲೈಟ್ ಗೆ ಸ್ವೆಟ್ಲಾನಾ ಅವರನ್ನು ಕ್ವಾಂಟಾಸ್ ವಿಮಾನದ ಮೂಲಕ ರೋಮ್ ಗೆ ಕಳಿಸಲಾಯಿತು. ರೋಮ್ ತಲುಪಿದ ಬಳಿಕ ಅವರು ಜಿನೀವಾಗೆ ಪ್ರಯಾಣ ಬೆಳೆಸಿದರು.
‘ಮೊದಲೇ ಬಹಳ ಸೂಕ್ಷ್ಮವಾಗಿದ್ದ ಸ್ಥಿತಿ ಮರುದಿನ ಮತ್ತಷ್ಟು ಸೂಕ್ಷ್ಮವಾಯಿತು. ಪ್ರಪಂಚದ ಎಲ್ಲ್ಲಾ ಭಾಗಗಳಲ್ಲಿ ಅಮೆರಿಕ ಮತ್ತು ಸೋವಿಯತ್ ಡಿಪ್ಲೊಮ್ಯಾಟ್ ಗಳ ನಡುವೆ ನಿಗದಿಯಾಗಿದ್ದ ಮೀಟಿಂಗ್ ಗಳೆಲ್ಲ ರದ್ದಾದವು. ಇಂಡಿಯದಲ್ಲಿದ್ದ ರಷ್ಯನ್ ರಾಯಭಾರಿಯನ್ನು ಬೇರೆಡೆ ವರ್ಗಾವಣೆ ಮಾಡುವ ಉದ್ದೇಶದಿಂದ ಅವರನ್ನು ಮಾಸ್ಕೋಗೆ ವಾಪಸ್ಸು ಕರೆದಿದ್ದರಿಂದ ಸ್ವೆಟ್ಲಾನಾ ರಷ್ಯಾಗೆ ಹಿಂತಿರುಗಲಿ ಎಂದು ತವಕಿಸುತ್ತಿದ್ದರು,’ ಎಂದು ಸೆಲೆಸ್ಟಾ ಪುಸ್ತಕದಲ್ಲಿ ಬರೆದಿದ್ದಾರೆ.
ಕೆಜೆಬಿ ಗರಂ!
ತಲೆದೋರಿದ ಸ್ಥಿತಿಯಿಂದ ಉಗ್ರಾವತಾರ ತಾಳಿದ ಕೆಜೆಬಿ ಸ್ವೆಟ್ಲಾನಾ ಅವರನ್ನು ಯಾಕೆ ಅಪಹರಿಸಲಾಗಿದೆ ಅಂತ ದೆಹಲಿಯಲ್ಲಿನ ತನ್ನ ಸಿಐಎ ಕಚೇರಿಯಿಂದ ವಿವರಣೆ ಕೇಳಿತು.
‘ಸೋವಿಯೆತ್‌ಗಳು ಸ್ವೆಟ್ಲಾನಾ ಅವರ ಪಲಾಯುನ ಇಂಡಿಯಾದ ಸಮಸ್ಯೆ, ಅಮೇರಿಕನ್ ಅಲ್ಲ, ಸಮಸ್ಯೆ ಎಂದು ನಿರ್ಧಸಿದ್ದರು ಅಂತ ನಂತರ ನನಗೆ ಗೊತ್ತಾಯಿತು,’ ಎಂದು ಸೆಲೆಸ್ಟೆ ಹೇಳಿದ್ದಾರೆ .
ಪ್ರಧಾನಿ ಇಂದಿರಾ ಗಾಂಧಿ ದೂತನನ್ನು ಕಳಿಸಿದರು
‘ಭಾರತೀಯರು ಈ ಅತ್ಯಂತ ಪ್ರಮುಖ ಪ್ರವಾಸಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಸೋವಿಯತ್ ಯೂನಿಯನ್ ಕಟು ಟೀಕೆ ಮಾಡಿತು. ಒಂದೆರಡು ವಾರಗಳ ನಂತರ ಇಂದಿರಾ ಗಾಂಧಿಯವರು ಸ್ವಿಟ್ಜರ್ಲೆಂಡ್‌ನಲ್ಲಿ ತಂಗಿದ್ದ ಸ್ವೆಟ್ಲಾನಾ ಅವರನ್ನು ಭೇಟಿಯಾಗಲು ಆಗ ತಮ್ಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್.ಕೆ. ಝಾ ಅವರನ್ನು ಕಳುಹಿಸಿದರು,’ ಎಂದು ಅವರು ಬರೆದಿದ್ದಾರೆ.
ಆಕೆಯ ಪಲಾಯನ ಎರಡು ದೇಶಗಳ ನಡುವಿನ ಅತ್ಯುತ್ತಮ ಸಂಬಂಧವನ್ನು ಹಾಳುಮಾಡುತ್ತಿದೆ ಮತ್ತು ಅಕೆಯ ಮಕ್ಕಳು ತಮ್ಮ ತಾಯಿ ರಷ್ಯಾಕ್ಕೆ ಮರಳುವುದನ್ನು ಬಯಸುತ್ತಾರೆ ಎಂದು ಹೇಳುವ ಮೂಲಕ ಆಕೆ ಮಾಸ್ಕೋಗೆ ಹಿಂದಿರುಗುವಂತೆ ಮಾಡಲು ಝಾ ಪ್ರಯತ್ನಿಸಿದರು. ಅವರ ಮಕ್ಕಳಲ್ಲಿ ಒಬ್ಬರು ವೈದ್ಯರಾಗಿದ್ದರು ಮತ್ತು ಇನ್ನೊಬ್ಬರು ಶಿಕ್ಷಣತಜ್ಞರಾಗಿದ್ದರು. ಝಾ ಅವರ ಸಮ್ಮುಖದಲ್ಲೇ ಆಕೆ ತನ್ನ ಮಕ್ಕಳೊಂದಿಗೆ ಫೋನ್ ಮೂಲಕ ಮಾತಾಡಿದರು.
ನೋ ಟು ಮಾಸ್ಕೋ!
ಮಕ್ಕಳು ವಾಪಸ್ಸು ಬರುವಂತೆ ಒತ್ತಾಯಿಸಿದರಾದರೂ ಸ್ವೆಟ್ಲಾನಾ ಅದಕ್ಕೊಪ್ಪಲಿಲ್ಲ. ಯಾವುದೇ ಕಾರಣಕ್ಕೆ ನಾನು ಮಾಸ್ಕೋಗೆ ವಾಪಸ್ಸಾಗುವುದಿಲ್ಲ, ಎಂದು ಆಕೆ ಖಡಾಖಂಡಿತವಾಗಿ ಹೇಳಿದರು.
ಅಂತಿಮವಾಗಿ ಸ್ವೆಟ್ಲಾನಾ ಸ್ವಿಜರ್ ಲ್ಯಾಂಡ್ ನಿಂದ ಅಮೆರಿಕಾಗೆ ತೆರಳಿದ ಬಳಿಕ ದೆಹಲಿಯಲ್ಲಿ ಸೃಷ್ಟಿಯಾಗಿದ್ದ ಕೋಲಾಹಲ ಶಾಂತಗೊಂಡಿತು.