Russia-Ukraine War: ತಕ್ಷಣ ಉಕ್ರೇನ್ ಬಿಟ್ಟು ಹೊರಡಿ; ಭಾರತೀಯ ಪ್ರಜೆಗಳಿಗೆ ಮತ್ತೆ ರಾಯಭಾರ ಕಚೇರಿ ಸೂಚನೆ
1 ವಾರದ ಹಿಂದೆ ಉಕ್ರೇನ್ ತೊರೆಯುವಂತೆ ಹೇಳಿದ್ದ ಸಲಹೆ ನೀಡಿದ್ದ ಭಾರತೀಯ ರಾಯಭಾರ ಕಚೇರಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದರಿಂದ ಎರಡನೇ ಬಾರಿ ಭಾರತೀಯರಿಗೆ ಸೂಚನೆ ನೀಡಿದೆ.
ನವದೆಹಲಿ: ರಷ್ಯಾ- ಉಕ್ರೇನ್ (Russia-Ukraine War) ನಡುವೆ ಹೆಚ್ಚುತ್ತಿರುವ ಹಗೆತನವನ್ನು ಗಮನದಲ್ಲಿಟ್ಟುಕೊಂಡು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಕ್ಷಣವೇ ಉಕ್ರೇನ್ ದೇಶವನ್ನು ತೊರೆಯುವಂತೆ ಅಲ್ಲಿನ ಎಲ್ಲಾ ಭಾರತೀಯರಿಗೆ ಸೂಚನೆ ನೀಡಿದೆ. ಉಕ್ರೇನ್ ತೊರೆಯುವಂತೆ ಭಾರತ ಮತ್ತೆ ಭಾರತೀಯರಿಗೆ ಮನವಿ ಮಾಡಿದ್ದು, ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್ ಬಿಟ್ಟು ಭಾರತಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ. 1 ವಾರದ ಹಿಂದೆ ಉಕ್ರೇನ್ ತೊರೆಯುವಂತೆ ಹೇಳಿದ್ದ ಸಲಹೆ ನೀಡಿದ್ದ ಭಾರತೀಯ ರಾಯಭಾರ ಕಚೇರಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದರಿಂದ ಎರಡನೇ ಬಾರಿ ಭಾರತೀಯರಿಗೆ ಸೂಚನೆ ನೀಡಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಲಭ್ಯವಿರುವ ಮಾರ್ಗಗಳ ಮೂಲಕ ತಕ್ಷಣವೇ ಯುದ್ಧ ಪೀಡಿತ ದೇಶ ಉಕ್ರೇನನ್ನು ತೊರೆಯುವಂತೆ ಸಲಹೆಯನ್ನು ನೀಡಿದೆ. ಅಕ್ಟೋಬರ್ 19ರಂದು ನೀಡಲಾದ ಹಿಂದಿನ ಸಲಹೆಯನ್ನು ಅನುಸರಿಸಿ ಕೆಲವು ಭಾರತೀಯರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಇದನ್ನೂ ಓದಿ: Pravasi Gujarati Parv 2022: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ದಿಟ್ಟತನದ ನಿರ್ಧಾರ ತಳೆದಿದೆ; ಟಿವಿ9 ಸಿಇಒ ಬರುಣ್ ದಾಸ್
“ಅಕ್ಟೋಬರ್ 19ರಂದು ರಾಯಭಾರ ಕಚೇರಿ ನೀಡಿದ ಸಲಹೆಯ ಮುಂದುವರಿಕೆಯಾಗಿ, ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ” ಎಂದು ರಾಯಭಾರ ಕಚೇರಿ ತಿಳಿಸಿದೆ. ಹಿಂದೆ ನೀಡಲಾಗಿದ್ದ ಸಲಹೆಯ ಮೇರೆಗೆ ಕೆಲವು ಭಾರತೀಯ ಪ್ರಜೆಗಳು ಈಗಾಗಲೇ ಉಕ್ರೇನ್ ತೊರೆದಿದ್ದಾರೆ ಎಂದು ತಿಳಿಸಿದೆ. ದೇಶದಿಂದ ನಿರ್ಗಮಿಸಲು ಉಕ್ರೇನಿಯನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸುವಂತೆ ರಾಯಭಾರ ಕಚೇರಿ ಹೇಳಿದೆ.
Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022
ಸುಮಾರು ಮೂರು ವಾರಗಳ ಹಿಂದೆ ಕ್ರೈಮಿಯಾದಲ್ಲಿ ಸಂಭವಿಸಿದ ಬೃಹತ್ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ಮಾಸ್ಕೋ ವಿವಿಧ ಉಕ್ರೇನಿಯನ್ ನಗರಗಳನ್ನು ಗುರಿಯಾಗಿಟ್ಟುಕೊಂಡು ಪ್ರತೀಕಾರದ ಕ್ಷಿಪಣಿ ದಾಳಿಗಳನ್ನು ನಡೆಸುವುದರೊಂದಿಗೆ ರಷ್ಯಾ ಮತ್ತು ಉಕ್ರೇನ್ ನಡುವೆ ಹಗೆತನದ ತೀವ್ರತೆ ಹೆಚ್ಚಾಗಿದೆ.
ಇದನ್ನೂ ಓದಿ: Russia-Ukraine War: ಆದಷ್ಟು ಬೇಗ ಉಕ್ರೇನ್ ಬಿಟ್ಟು ಹೊರಡಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಇತರೆ ಪ್ರಜೆಗಳು ಲಭ್ಯವಿರುವ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ತಕ್ಷಣ ಉಕ್ರೇನ್‌ನಿಂದ ಹೊರಡುವಂತೆ ಸೂಚಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.