AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ಆದಷ್ಟು ಬೇಗ ಉಕ್ರೇನ್ ಬಿಟ್ಟು ಹೊರಡಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಲಭ್ಯವಿರುವ ವಿಮಾನಗಳಲ್ಲಿ ತಕ್ಷಣ ಉಕ್ರೇನ್‌ನಿಂದ ಹೊರಡುವಂತೆ ಸೂಚಿಸಲಾಗಿದೆ.

Russia-Ukraine War: ಆದಷ್ಟು ಬೇಗ ಉಕ್ರೇನ್ ಬಿಟ್ಟು ಹೊರಡಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
ಉಕ್ರೇನ್​ನಲ್ಲಿ ರಷ್ಯಾದ ದಾಳಿ
TV9 Web
| Edited By: |

Updated on:Oct 20, 2022 | 8:50 AM

Share

ನವದೆಹಲಿ: ಮತ್ತೆ ಉಕ್ರೇನ್ ವಿರುದ್ಧ ಯುದ್ಧವನ್ನು ತೀವ್ರಗೊಳಿಸಿರುವ ರಷ್ಯಾದ (Russia-Ukraine War) ಆಕ್ರಮಣದಿಂದ ಉಕ್ರೇನ್​ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಪ್ರಯಾಣಿಸದಂತೆ ಹಾಗೂ ಉಕ್ರೇನ್​ನಲ್ಲಿದ್ದವರು ಆದಷ್ಟು ಬೇಗ ಉಕ್ರೇನ್ ಬಿಟ್ಟು ಭಾರತಕ್ಕೆ ತೆರಳಲು ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.

“ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ” ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.

ಇದೀಗ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಇತರೆ ಪ್ರಜೆಗಳು ಲಭ್ಯವಿರುವ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ತಕ್ಷಣ ಉಕ್ರೇನ್‌ನಿಂದ ಹೊರಡುವಂತೆ ಸೂಚಿಸಲಾಗಿದೆ” ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ: Russia-Ukraine War: ಉಕ್ರೇನ್ ನ್ಯಾಟೋಗೆ ಸೇರ್ಪಡೆಯಾದರೆ 3ನೇ ಮಹಾಯುದ್ಧ ಖಚಿತ; ರಷ್ಯಾ ಎಚ್ಚರಿಕೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ 4 ಉಕ್ರೇನಿಯನ್ ಪ್ರದೇಶಗಳಲ್ಲಿ ಸಮರ ಕಾನೂನನ್ನು ಘೋಷಿಸಿದ್ದರು. ಅವರ ಆದೇಶವು ಇಂದು ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಸಮರ ಸಾರಿರುವುದರಿಂದ ಖೇರ್ಸನ್‌ನಿಂದ ಪಲಾಯನ ಮಾಡುವ ಜನರ ವಿಡಿಯೋಗಳನ್ನು ರಷ್ಯಾದ ರಾಜ್ಯ ಟಿವಿ ಪ್ರಸಾರ ಮಾಡಿತ್ತು.

ರಷ್ಯಾದಿಂದ ಆಕ್ರಮಣಕ್ಕೊಳಗಾದ 8 ತಿಂಗಳ ನಂತರ ಉಕ್ರೇನ್ ಪೂರ್ವ ಮತ್ತು ದಕ್ಷಿಣದಲ್ಲಿ ಪ್ರಮುಖ ಪ್ರತಿದಾಳಿಗಳನ್ನು ನಡೆಸುತ್ತಿದೆ. ಕೆಲವು ಪ್ರದೇಶಗಳಲ್ಲಿ ರಷ್ಯಾದ ಪಡೆಗಳನ್ನು ಉಕ್ರೇನ್ ಪಡೆ ಸದೆಬಡಿದಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷದಿಂದ ಸಾವಿರಾರು ಜನರು ಮೃತಪಟ್ಟಿದ್ದಾರೆ. ಈ ಯುದ್ಧ ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿದೆ.

ಇದನ್ನೂ ಓದಿ: Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ಹಸ್ತಕ್ಷೇಪ: ಕೀವ್ ಮೇಲೆ ರಷ್ಯಾದಿಂದ ಆತ್ಮಾಹುತಿ ಡ್ರೋಣ್ ದಾಳಿ

ಪುಟಿನ್ ಅವರು ಉಕ್ರೇನ್‌ಗೆ ಹೊಂದಿಕೊಂಡಿರುವ ಎಂಟು ಪ್ರದೇಶಗಳಲ್ಲಿ ಮತ್ತು ಹೊರಗೆ ಚಲನೆಯನ್ನು ನಿರ್ಬಂಧಿಸುವ ಆದೇಶವನ್ನು ಹೊರಡಿಸಿದ್ದಾರೆ. ಹಾಗೇ, ಯುದ್ಧದ ಪ್ರಯತ್ನವನ್ನು ಹೆಚ್ಚಿಸಲು ಮಿಖಾಯಿಲ್ ಮಿಶುಸ್ಟಿನ್ ನೇತೃತ್ವದಲ್ಲಿ ವಿಶೇಷ ಸಮನ್ವಯ ಮಂಡಳಿಯನ್ನು ರಚಿಸಲು ಆದೇಶಿಸಿದ್ದಾರೆ. ಫೆಬ್ರವರಿ 24ರಂದು ಉಕ್ರೇನ್‌ನಲ್ಲಿ ರಷ್ಯಾ ತನ್ನ “ವಿಶೇಷ ಸೇನಾ ಕಾರ್ಯಾಚರಣೆ” ಆರಂಭಿಸಿದಾಗಿನಿಂದ ರಷ್ಯಾ ವಶಪಡಿಸಿಕೊಂಡ ಅತಿ ದೊಡ್ಡ ಜನಸಂಖ್ಯಾ ಕೇಂದ್ರ ಖೇರ್ಸನ್ ಆಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:50 am, Thu, 20 October 22