Lahore Blast: ಲಾಹೋರ್​ನ ಅನಾರ್ಕಲಿ ಬಜಾರ್​​ನಲ್ಲಿ ಬಾಂಬ್ ಸ್ಫೋಟ; 3 ಸಾವು, 22ಕ್ಕೂ ಹೆಚ್ಚು ಜನರಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Jan 20, 2022 | 4:44 PM

ಲಾಹೋರ್​​ನ ಅನಾರ್ಕಲಿ ಬಜಾರ್​​ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. 22ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Lahore Blast: ಲಾಹೋರ್​ನ ಅನಾರ್ಕಲಿ ಬಜಾರ್​​ನಲ್ಲಿ ಬಾಂಬ್ ಸ್ಫೋಟ; 3 ಸಾವು, 22ಕ್ಕೂ ಹೆಚ್ಚು ಜನರಿಗೆ ಗಾಯ
ಅನಾರ್ಕಲಿ ಬಜಾರ್​ನಲ್ಲಿ ನಡೆದ ಸ್ಫೋಟ
Follow us on

ಲಾಹೋರ್: ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಬಜಾರ್ (Anarkali Bazar) ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 22ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬೈಕ್​ಗೆ ಜೋಡಿಸಲಾದ ಬಾಂಬ್ ಸ್ಫೋಟಗೊಂಡ (Bomb Blast) ಕಾರಣದಿಂದ ಈ ಸ್ಫೋಟ ಸಂಭವಿಸಿದೆ.

ಸಾವು-ನೋವುಗಳು ಮತ್ತು ಗಾಯಗೊಂಡವರ ಸಂಖ್ಯೆಯನ್ನು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ ಎಂದು ಲಾಹೋರ್ ಕಾರ್ಯಾಚರಣೆಯ ಡಿಐಜಿ ಡಾ. ಮೊಹಮ್ಮದ್ ಅಬಿದ್ ಖಾನ್ ಹೇಳಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.

ಇಂದು ನಡೆದ ಬಾಂಬ್ ಸ್ಫೋಟದಿಂದ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಸ್ಫೋಟದ ಸ್ಥಳದ ಬಳಿ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Kulgam Blast: ಕಾಶ್ಮೀರದ ಕುಲ್ಗಾಮ್​ನಲ್ಲಿ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ

Ludhiana Blast: ಲುಧಿಯಾನ ಕೋರ್ಟ್ ಸ್ಫೋಟದ ಹಿಂದೆ ಖಲಿಸ್ತಾನಿ, ಡ್ರಗ್ಸ್ ಸ್ಮಗ್ಲರ್ ಕೈವಾಡ ಪತ್ತೆ

Published On - 4:44 pm, Thu, 20 January 22