ಜಗತ್ತು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರಬಿಂದುವಾಗಿ ನೋಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 2ನೇ ಬಾರಿಗೆ ಮತ್ತೆ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಜೈಶಂಕರ್, ಮುಂಬೈ ಭಯೋತ್ಪಾದನಾ ದಾಳಿ ಮತ್ತು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಜಗತ್ತಿನಲ್ಲಿ ಮತ್ತೊಂದು ನ್ಯೂಯಾರ್ಕ್‌ನ 9/11 ಅಥವಾ ಮುಂಬೈನ 26/11 ದಾಳಿ ಸಂಭವಿಸಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ತನ್ನ ಭಯೋತ್ಪಾದನೆ ನಿಗ್ರಹ ಕಾರ್ಯಸೂಚಿಯನ್ನು ಪುನಶ್ಚೇತನಗೊಳಿಸಲು ಭಾರತ ನಡೆಸುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ. ಭಯೋತ್ಪಾದನೆಯ ಬೆದರಿಕೆ ನಿಜವಾಗಿಯೂ ಹೆಚ್ಚು ಗಂಭೀರವಾಗಿದೆ ಎಂದರು.
ಚೀನಾ ಮತ್ತು ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡ ಜೈಶಂಕರ್, ಡಬಲ್ ಸ್ಟಾಂಡರ್ಡ್ ಅನ್ನು ಹೇಗೆ ಎದುರಿಸುವುದು ಎಂಬುದು ಒಂದು ಸವಾಲು. ಭಯೋತ್ಪಾದನೆಯು ಮತ್ತೊಂದು ಸಾಧನ ಅಥವಾ ತಂತ್ರವಾಗಿದೆ ಎಂದು ಬಹಳ ಸಮಯದಿಂದ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ದೇಶವು ಭಯೋತ್ಪಾದನೆಯಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಬಾರದು.
ಈ ಇಬ್ಬರೂ ದಾಳಿಕೋರರಿಗೂ ಪಾಕಿಸ್ತಾನದೊಂದಿಗೆ ನೇರ ಸಂಪರ್ಕವಿದೆ. ಮತ್ತೆ ಮುಂಬೈನಲ್ಲಿ 26/11 ಅಥವಾ ನ್ಯೂಯಾರ್ಕ್‌ನಲ್ಲಿ 9/11 ದಾಳಿಗಳು ನಡೆಯಲು ನಾವು ಬಿಡುವುದಿಲ್ಲ. ಭಯೋತ್ಪಾದನೆಯ ಬೆದರಿಕೆ ನಿಜವಾಗಿಯೂ ಹೆಚ್ಚು ಗಂಭೀರವಾಗಿದೆ ಎಂದು ಹೇಳಿದರು.
ಭಯೋತ್ಪಾದನೆಯೊಂದಿಗೆ ವ್ಯವಹರಿಸುವಾಗ, ನಾವು ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶೂನ್ಯ-ಸಹಿಷ್ಣು ವಿಧಾನವನ್ನು ವ್ಯಕ್ತಪಡಿಸಬೇಕು ಎಂದರು.
ಭಯೋತ್ಪಾದನಾ ಕೃತ್ಯಗಳಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು: ಜಾಗತಿಕ ಭಯೋತ್ಪಾದನೆ ನಿಗ್ರಹ ವಿಧಾನ – ತತ್ವಗಳು ಮತ್ತು ಮಾರ್ಗಗಳು’ ಎಂಬ ವಿಷಯದ ಮೇಲೆ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಮಾತನಾಡಿದ ಜೈಶಂಕರ್, ಯಾವುದೇ ರಾಷ್ಟ್ರವು ಭಯೋತ್ಪಾದನೆಯಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಬಾರದು ಮತ್ತು ನಾವು ಯಾರೂ ಅಂತಹ ಲೆಕ್ಕಾಚಾರಗಳಿಗೆ ಎಂದಿಗೂ ಮುಂದಾಗಬಾರದು ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Fri, 16 December 22