ಕೋವಿಡ್ ಸಮಯದಲ್ಲಿ ಭಾರತ ನೀಡಿದ ಸಹಾಯಕ್ಕೆ ಧನ್ಯವಾದ ತಿಳಿಸಿದ ಶೇಖ್ ಹಸೀನಾ

ಬಾಂಗ್ಲಾದೇಶದ ಪ್ರಧಾನಿ ನೆರೆಹೊರೆ ದೇಶಗಳ ನಡುವೆ ನಿಕಟ ಸಹಕಾರಕ್ಕೆ ಒತ್ತು ನೀಡಿದರು. ಭಿನ್ನಾಭಿಪ್ರಾಯಗಳಿರಬಹುದು, ಆದರೆ ಇವುಗಳನ್ನು ಸಂವಾದದ ಮೂಲಕ ಪರಿಹರಿಸಬೇಕು. ಭಾರತ ಮತ್ತು ಬಾಂಗ್ಲಾದೇಶಗಳು ಹಲವಾರು ಕ್ಷೇತ್ರಗಳಲ್ಲಿ...

ಕೋವಿಡ್ ಸಮಯದಲ್ಲಿ ಭಾರತ ನೀಡಿದ ಸಹಾಯಕ್ಕೆ ಧನ್ಯವಾದ ತಿಳಿಸಿದ ಶೇಖ್ ಹಸೀನಾ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 04, 2022 | 5:25 PM

ಢಾಕಾ: ರಷ್ಯಾ-ಉಕ್ರೇನ್ ಸಂಘರ್ಷದ ನಂತರ ಪೂರ್ವ ಯುರೋಪ್‌ನಲ್ಲಿ ಸಿಲುಕಿರುವ ತಮ್ಮ ದೇಶದ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉಪಕ್ರಮವನ್ನು ಬಾಂಗ್ಲಾದೇಶದ (Bangladesh) ಪ್ರಧಾನಿ ಶೇಖ್ ಹಸೀನಾ (Sheikh Hasina) ಶ್ಲಾಘಿಸಿದ್ದಾರೆ. ಸೋಮವಾರ ಭಾರತಕ್ಕೆ ಭೇಟಿ ನೀಡಲಿರುವ ಪ್ರಧಾನಿ ಹಸೀನಾ ಅವರು ಎಎನ್‌ಐ ಜೊತೆಗಿನ ವಿಡಿಯೊ ಸಂವಾದದಲ್ಲಿ, ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತಿರುವಾಗ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ನೆರೆಯ ದೇಶಗಳಿಗೆ ಕೋವಿಡ್ 19 ಲಸಿಕೆಗಳನ್ನು ಒದಗಿಸುವ ನರೇಂದ್ರ ಮೋದಿ ಸರ್ಕಾರದ ಕಾರ್ಯಗಳನ್ನು ಶ್ಲಾಘಿಸಿದರು. ಬಾಂಗ್ಲಾದೇಶದ ಪ್ರಧಾನಿ ನೆರೆಹೊರೆ ದೇಶಗಳ ನಡುವೆ ನಿಕಟ ಸಹಕಾರಕ್ಕೆ ಒತ್ತು ನೀಡಿದರು. ಭಿನ್ನಾಭಿಪ್ರಾಯಗಳಿರಬಹುದು, ಆದರೆ ಇವುಗಳನ್ನು ಸಂವಾದದ ಮೂಲಕ ಪರಿಹರಿಸಬೇಕು. ಭಾರತ ಮತ್ತು ಬಾಂಗ್ಲಾದೇಶಗಳು ಹಲವಾರು ಕ್ಷೇತ್ರಗಳಲ್ಲಿ ಅದನ್ನು ನಿಖರವಾಗಿ ಮಾಡಿದೆ ಎಂದು ಅವರು ಹೇಳಿದರು. ಆದಾಗ್ಯೂ, ಭಾರತ ಸರ್ಕಾರದ ಬೆಂಬಲವು ಬಾಂಗ್ಲಾದೇಶದ ನಾಗರಿಕರಿಗೆ ಸಹಾಯ ಮಾಡಿದನ್ನು ಅವರು ಪ್ರಶಂಸಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗ ಉಕ್ರೇನ್ ಮತ್ತು ಅದರ ನೆರೆಯ ದೇಶಗಳಲ್ಲಿ ಸಿಲುಕೊಂಡಿದ್ದ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ಭಾರತ ಸ್ಥಳಾಂತರಿಸಿತ್ತು.

ನಾನು ನಿಜವಾಗಿಯೂ ಪ್ರಧಾನಿಗೆ ನನ್ನ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಯುದ್ಧದ ಸಮಯದಲ್ಲಿ, ನಮ್ಮ ಅನೇಕ ವಿದ್ಯಾರ್ಥಿಗಳು ಸಿಲುಕಿಕೊಂಡರು. ಅವರು ಆಶ್ರಯಕ್ಕಾಗಿ ಪೋಲೆಂಡ್‌ಗೆ ಬಂದರು. ಆದರೆ ಭಾರತ, ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದಾಗ ಅವರನ್ನೂ ಕರೆತಂದರು. ನಮ್ಮ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ. ನಿಜವಾಗಿಯೂ  ನೀವು ಸ್ಪಷ್ಟವಾಗಿ ಸೌಹಾರ್ದ ಮನೋಭಾವವನ್ನು ತೋರಿದ್ದೀರಿ. ಈ ಉಪಕ್ರಮಕ್ಕಾಗಿ ನಾನು ಪ್ರಧಾನಿ (ಮೋದಿ) ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಾರ್ಕ್ ರಾಷ್ಟ್ರಗಳ ನಡುವೆ ಸಹಕಾರದ ಕೊರತೆಯಿದೆ ಎಂದು ವಿಶೇಷವಾಗಿ ಪಾಶ್ಚಿಮಾತ್ಯ ವೀಕ್ಷಕರು ಆಗಾಗ್ಗೆ ಮಾಡುವ ಟೀಕೆಗಳ ಹಸೀನಾಈ ರೀತಿ ಪ್ರತಿಕ್ರಿಯಿಸಿದ್ದಾರೆ . ಭಾರತ ಸರ್ಕಾರದ ಲಸಿಕೆ ಮೈತ್ರಿ ಕಾರ್ಯಕ್ರಮದ ಕುರಿತು ಮತ್ತೊಂದು ಪ್ರಶ್ನೆಗೆ, ಬಾಂಗ್ಲಾದೇಶದ ಪ್ರಧಾನಿ, ಇದು ಪ್ರಧಾನಿ ಮೋದಿಯವರು ಕೈಗೊಂಡ ಅತ್ಯಂತ “ವಿವೇಕಯುತ” ಉಪಕ್ರಮ ಎಂದು ಹೇಳಿದರು.

“ಈ ಉಪಕ್ರಮಕ್ಕಾಗಿ ನಾನು ನಿಜವಾಗಿಯೂ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ಆ ರೀತಿಯಲ್ಲಿ ಅವರು ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಕೆಲವು ದಕ್ಷಿಣ ಏಷ್ಯಾದ ದೇಶಗಳಿಗೂ ಲಸಿಕೆಗಳನ್ನು ಕೊಡುಗೆ ನೀಡಿದ್ದಾರೆ, ಮತ್ತು ಇದು ನಿಜವಾಗಿಯೂ ತುಂಬಾ ಸಹಾಯಕವಾಗಿದೆ. ಅದಲ್ಲದೆ, ನಾವು ನಮ್ಮ ಸ್ವಂತ ಹಣದಿಂದ ಲಸಿಕೆಗಳನ್ನು ಖರೀದಿಸಿದ್ದೇವೆ ಮತ್ತು ಅನೇಕ ಇತರ ದೇಶಗಳು ಸಹ ಕೊಡುಗೆ ನೀಡಿವೆ ಎಂದಿದ್ದಾರೆ. ಬಾಂಗ್ಲಾದೇಶವು ತನ್ನ ಜನಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಿದೆ. “ಸಾಮಾನ್ಯವಾಗಿ, ನಿಮಗೆ ಗೊತ್ತಾ, ನಮ್ಮ ದೇಶದ ಜನರು, ವಿಶೇಷವಾಗಿ ಗ್ರಾಮ ಮಟ್ಟದ ಜನರು, ಕೆಲವು ಪಟ್ಟಣಗಳಲ್ಲಿಯೂ ಕೂಡಾ ಅನೇಕ ಜನರು ಲಸಿಕೆ ತೆಗೆದುಕೊಳ್ಳಲು ತುಂಬಾ ಹಿಂಜರಿಯುವುದನ್ನು ನಾನು ಕಂಡುಕೊಂಡಿದ್ದೇನೆ. ಅವರು ತೆಗೆದುಕೊಳ್ಳಲು ಬಯಸುವುದಿಲ್ಲ. ಸೂಜಿ ಚುಚ್ಚಿಸುವುದು ಅಥವಾ ‘ಸೂಯಿ ನೈ ಲೇನಾ ಹೈ’ ಎಂಬುದಕ್ಕೆ ಹಿಂಜರಿಯುತ್ತಾರೆ ಆದರೆ ನಾವು ಅವರನ್ನು ಹಿಂಬಾಲಿಸಬೇಕು. ನಾವು ಅವರಿಗೆ ಇದು ಏನೂ ಅಲ್ಲ, ಆದರೆ ಇದು ನಿಮ್ಮ ಜೀವವನ್ನು ಉಳಿಸುತ್ತದೆ ಎಂದು ನಾವು ಹೇಳಿದ್ದೇವೆ. ಆದ್ದರಿಂದ ಜನರು ಅದನ್ನು ಪಾಲಿಸಿದ್ದಾರೆ. ಇದು ನಿಜವಾಗಿಯೂ ತುಂಬಾ ಒಳ್ಳೆಯ ಉಪಕ್ರಮವಾಗಿದೆ, ಈ ಲಸಿಕೆ ಮೈತ್ರಿ ಸ್ವತಃ … ತುಂಬಾ ಒಳ್ಳೆಯ ಉಪಕ್ರಮ. ನಾನು ನಿಜವಾಗಿಯೂ ಬೆಂಬಲಿಸುತ್ತೇನೆ ಎಂದು ಶೇಖ್ ಹಸೀನಾ ಬೇಳ್ದ್ದಾರೆ ಭಾರತವನ್ನು “ಪರೀಕ್ಷಿತ” ಸ್ನೇಹಿತ ಎಂದು ಉಲ್ಲೇಖಿಸಿದ ಅವರು ಭಾರತ ಬಾಂಗ್ಲಾದೇಶದ ಅಗತ್ಯದ ಸಮಯದಲ್ಲಿ ಮೊದಲು 1971 ರಲ್ಲಿ ಮತ್ತು ನಂತರದ ಸಮಯಗಳಲ್ಲಿ ಸಹ ಜತೆಗೆ ನಿಂತಿದೆ ಎಂದು ಹೇದರು.

“ನಮ್ಮ 1971 ರ ಯುದ್ಧದ ಸಮಯದಲ್ಲಿ ನಾವು ಅವರ ಕೊಡುಗೆಯನ್ನು ಯಾವಾಗಲೂ ಸ್ಮರಿಸುತ್ತೇವೆ. ಅದರ ಜೊತೆಗೆ, 1975 ರಲ್ಲಿ, ನಾವು ನನ್ನ ಕುಟುಂಬ ಸದಸ್ಯರೆಲ್ಲರನ್ನು ಕಳೆದುಕೊಂಡಾಗಲೂ. ಆದ್ದರಿಂದ, ಆಗಿನ ಪ್ರಧಾನಿ, ಅವರು ನಮಗೆ ಭಾರತದಲ್ಲಿ ಆಶ್ರಯ ನೀಡಿದರು, ಜೊತೆಗೆ, ನೀವು ನೋಡಿ, ಈ ಎರಡು ದೇಶಗಳು, ನಾವು ನೆರೆಹೊರೆಯವರು, ಹತ್ತಿರದ ನೆರೆಹೊರೆಯವರು ಮತ್ತು ನಾನು ಯಾವಾಗಲೂ ನಮ್ಮ ನೆರೆಯ ದೇಶಗಳೊಂದಿಗೆ ಸ್ನೇಹಕ್ಕಾಗಿ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ನೀಡುತ್ತೇನೆ, ”ಎಂದು ಅವರು ಹೇಳಿದರು.

ಉಭಯ ದೇಶಗಳ ನಡುವಿನ ಬಾಂಧವ್ಯವು ತಮ್ಮ ನಾಗರಿಕರ ಒಳಿತಿಗಾಗಿ ಇರಬೇಕು ಎಂದು ಅವರು ಹೇಳಿದರು.

ಕೋವಿಡ್-19 ಅವಧಿಯಲ್ಲೂ ಭಾರತೀಯ ನಾಯಕತ್ವವು ತಮ್ಮ ಸಕಾರಾತ್ಮಕ ಉದ್ದೇಶಗಳನ್ನು ತೋರಿಸಿದೆ. ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದಿನವನ್ನು ಆಚರಿಸಿದಾಗ ಭೇಟಿ ನೀಡಿದರು. ಪ್ರಧಾನಿ ಮೋದಿ ಮತ್ತು ನಿಮ್ಮ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನರ್ಪಿಸುತ್ತೇನೆ. ನಾವು ನಮ್ಮ ರಾಷ್ಟ್ರಪಿತ ಜನ್ಮ ಶತಮಾನೋತ್ಸವ ಮತ್ತು ನಮ್ಮ ಸ್ವಾತಂತ್ರ್ಯ, ನಮ್ಮ ಸ್ವಾತಂತ್ರ್ಯ ದಿನಾಚರಣೆಯ 50 ವರ್ಷಗಳು ಮತ್ತು ಭಾರತದೊಂದಿಗಿನ ನಮ್ಮ ಸ್ನೇಹವನ್ನು ಆಚರಿಸುತ್ತಿರುವಾಗ ಅವರಿಬ್ಬರೂ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಭಾರತವು ಬಾಂಗ್ಲಾದೇಶವನ್ನು ಗುರುತಿಸಿದೆ.ಆ ಬಾಂಧವ್ಯ, ಅದು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹಸೀನಾ ಹೇಳಿದ್ದಾರೆ.