AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಡ್ರೆಸ್​ಕೋಡ್ ಬಗ್ಗೆ ಸಿರಿಯಾ ಬಂಡುಕೋರರಿಂದ ಮಹತ್ವದ ಘೋಷಣೆ

ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್​ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು ಇದೀಗ ಮಹಿಳೆಯರ ಡ್ರೆಸ್​ಕೋಡ್​ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಯಾವುದೇ ಧಾರ್ಮಿಕ ಡ್ರೆಸ್​ಕೋಡ್ ವಿಧಿಸುವುದಿಲ್ಲ, ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯವಿರುತ್ತದೆ.

ಮಹಿಳೆಯರ ಡ್ರೆಸ್​ಕೋಡ್ ಬಗ್ಗೆ ಸಿರಿಯಾ ಬಂಡುಕೋರರಿಂದ ಮಹತ್ವದ ಘೋಷಣೆ
ಮಹಿಳೆಯರು Image Credit source: Preventionweb.net
ನಯನಾ ರಾಜೀವ್
|

Updated on: Dec 10, 2024 | 11:08 AM

Share

ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್​ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು ಇದೀಗ ಮಹಿಳೆಯರ ಡ್ರೆಸ್​ಕೋಡ್​ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಯಾವುದೇ ಧಾರ್ಮಿಕ ಡ್ರೆಸ್​ಕೋಡ್ ವಿಧಿಸುವುದಿಲ್ಲ, ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯವಿರುತ್ತದೆ ಎಂದು ಹೇಳಿದ್ದಾರೆ.

ಮಹಿಳೆಯರ ಉಡುಪಿನ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ, ಅವರ ಉಡುಪು ಅಥವಾ ನೋಟಕ್ಕೆ ಸಂಬಂಧಿಸಿದಂತೆ ಯಾವುದೇ ಹೇರಿಕೆ ಇಲ್ಲ ಎಂದು ಬಂಡುಕೋರರು ಸ್ಪಷ್ಟಪಡಿಸಿದ್ದಾರೆ. ಜನರ ಹಕ್ಕುಗಳಿಗೆ ಗೌರವ ಕೊಟ್ಟಾಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ, ಎಲ್ಲಾ ಸಿರಿಯನ್ನರಿಗೆ ವೈಯಕ್ತಿಕ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. ಅದೇ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಾಗ ಮಹಿಳೆಯರ ಹಕ್ಕು, ಶಿಕ್ಷಣ, ಉಡುಪುಗಳ ಬಗ್ಗೆ ತನ್ನದೇ ಆದ ಉಸಿರುಗಟ್ಟಿಸುವಂತಹ ಕಾನೂನನ್ನು ಹೇರಿತ್ತು.

ಅರ್ಧ ಶತಮಾನದವರೆಗೆ ಅಸ್ಸಾದ್ ಕುಟುಂಬದ ಕಠಿಣ ನಿಯಂತ್ರಣವನ್ನು ಸಹಿಸಿಕೊಂಡ ನಂತರ, ಇಸ್ಲಾಮಿಸ್ಟ್ ಅಜೆಂಡಾದೊಂದಿಗೆ ಬಂಡುಕೋರರು ರಾಜಧಾನಿಗೆ ನುಗ್ಗಿ ವಶಪಡಿಸಿಕೊಂಡಿದೆ. ಆಗ ಅಸ್ಸಾದ್ ಆಳ್ವಿಕೆ ಅಂತ್ಯವನ್ನು ಕಂಡಿತು. ಸಿರಿಯಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್​ ಸೇರಿದಂತೆ ಹಲವು ಪ್ರದೇಶಗಳನ್ನು ಸುತ್ತುವರೆದಿದ್ದಾರೆ.

ಮತ್ತಷ್ಟು ಓದಿ: ಅಧ್ಯಕ್ಷ ಬಶರ್ ದೇಶದಿಂದ ಪಲಾಯನ ಮಾಡುತ್ತಿದ್ದಂತೆ ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೇ ಸರಿಯಾದ ಸಮಯವೆಂಬಂತೆ ಕಾದು ಕುಳಿತಿದ್ದ ಅಮೆರಿಕವು ಸಿರಿಯಾದ ಐಸಿಸ್(ISIS) ನೆಲೆಗಳ ಮೇಲೆ ದಾಳಿ ನಡೆಸಿದೆ. ರಾಜಧಾನಿ ಸೇರಿದಂತೆ ದೊಡ್ಡ ನಗರಗಳನ್ನು ಈಗ ಜಿಹಾದಿ ಬಂಡುಕೋರರು ವಶಪಡಿಸಿಕೊಂಡಿದ್ದಾರೆ.

ಅಸ್ಸಾದ್ ದೇಶ ತೊರೆದಿರುವುದನ್ನು ಸೇನೆ ಖಚಿತಪಡಿಸಿದ್ದು, ಅಧ್ಯಕ್ಷರ ಅಧಿಕಾರ ಕೊನೆಗೊಂಡಿದೆ ಎಂದು ಹೇಳಿದೆ. ಐಸಿಸ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಸಿರಿಯಾದಲ್ಲಿ ತನ್ನನ್ನು ತಾನು ಮರುಸ್ಥಾಪಿಸಲು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಭಾನುವಾರ ಸಿರಿಯಾದೊಳಗೆ ಐಸಿಸ್ ವಿರುದ್ಧ ತನ್ನ ಪಡೆಗಳು ದಾಳಿ ನಡೆಸಿವೆ ಎಂದು ಅವರು ಶ್ವೇತಭವನಕ್ಕೆ ಮಾಹಿತಿ ನೀಡಿದ್ದಾರೆ. ತನ್ನ ಯುದ್ಧ ವಿಮಾನಗಳು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಮತ್ತು ಸ್ಥಾನಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಯುಎಸ್ ಮಿಲಿಟರಿ ದೃಢಪಡಿಸಿತು.

ಕಳೆದ ಹಲವು ದಿನಗಳಿಂದ ಸಿರಿಯಾದಲ್ಲಿ ಬಂಡುಕೋರ ಗುಂಪುಗಳು ಮತ್ತು ಸೇನೆಯ ನಡುವೆ ಹೋರಾಟ ನಡೆಯುತ್ತಿತ್ತು. ಅಂತಿಮವಾಗಿ, ಇಸ್ಲಾಮಿ ಹಯಾತ್ ತಹ್ರೀರ್ ಅಲ್-ಶಾಮ್ (HTS) ಗುಂಪು ಅಸ್ಸಾದ್ ಕುಟುಂಬದ ಐದು ದಶಕಗಳ ಆಳ್ವಿಕೆಗೆ ಸವಾಲು ಹಾಕಿದ 11 ದಿನಗಳ ನಂತರ ಸರ್ಕಾರವು ಪತನವಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ